ರಾಷ್ಟ್ರೀಯ

ಕ್ರಿಕೆಟ್ ಆಡಿದ್ದಕ್ಕೆ ಮಕ್ಕಳನ್ನು ಬಂಧಿಸಿದ ಐಜಿ

Pinterest LinkedIn Tumblr

cricketಮೊರದಾಬಾದ್: ಪೊಲೀಸ್ ತರಬೇತಿ ಶಾಲೆಯಲ್ಲಿ ಕ್ರಿಕೆಟ್ ಆಡಿದ ಕಾರಣಕ್ಕೆ ಅಪ್ರಾಪ್ತ ಬಾಲಕರನ್ನು ಬಂಧನಕ್ಕೊಳಪಡಿಸಿರುವ ಘಟನೆಯೊಂದು ಮೊರದಾಬಾದ್ ನಲ್ಲಿ ಶುಕ್ರವಾರ ನಡೆದಿದೆ.
ಬಿ.ಆರ್ ಮೀನಾ ಮಕ್ಕಳನ್ನು ಬಂಧನ್ನು ಬಂಧಿಸಿದ ಮೊರದಾಬಾದ್ ನ ಇನ್ಸ್ಪೆಕ್ಟರ್ ಜನರಲ್ ಆಗಿದ್ದಾರೆ. ಬಾಲಕರು ಪೊಲೀಸ್ ತರಬೇತಿ ಶಾಲೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಬಾಲು ಮೀನಾ ಅವರಿಗೆ ತಗುಲಿದೆ. ಇದರಿಂದ ತೀವ್ರವಾಗಿ ಕೋಪಗೊಂಡಿರುವ ಅವರು ಸ್ಥಳೀಯ ನಾಗರೀಕ ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳನ್ನು ಬಂಧಿಸಿ, ಶಿಕ್ಷೆ ನೀಡುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಐಜಿ ಮೀನಾ ಅವರ ಆದೇಶದಂತೆ ಮಕ್ಕಳನ್ನು ನಾಗರೀಕ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಆದರೆ, ಬಾಲಕರು ಆಪ್ರಾಪ್ತರಾಗಿದ್ದರಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಲ್ಲ ಎಂದು ಎಸ್ ಪಿ ರೂರಲ್ ಸುಜಾತಾ ಸಿಂಗ್ ಅವರು ಹೇಳಿದ್ದಾರೆ.
ಇನ್ನು ಮಕ್ಕಳ ಬಂಧನದಿಂದಾಗಿ ಗಾಬರಿಗೊಂಡಿರುವ ಬಂಧನಕ್ಕೊಳಗಾದ ಬಾಲಕರ ಪೋಷಕರು ಠಾಣೆ ಬಳಿ ಬಂದು ಸಾಕಷ್ಟು ಗದ್ದಲವನ್ನುಂಟು ಮಾಡಿದ್ದರು ಎಂದು ಹೇಳಲಾಗುತ್ತಿದೆ.

Comments are closed.