ಅಂತರಾಷ್ಟ್ರೀಯ

ತಂತ್ರಜ್ಞಾನ ಸಮಸ್ಯೆಗಳಿಂದಲೇ ದಿನದಲ್ಲಿ ಅತಿ ಹೆಚ್ಚು ಕೋಪ!

Pinterest LinkedIn Tumblr

social_icons_6_on_mobile_smartphone_0ಮೊಬೈಲ್‌ ನೋಡಿದ್ರೆ, ಛೇ! ರೇಂಜ್‌ ಸಿಕ್ತಾ ಇಲ್ಲ. ಇಂಟರ್ನೆಟ್‌ ನೋಡೋಕೆ ಸರ್ವರ್‌ ಪ್ರಾಬ್ಲಿಂ. ಅದೆಲ್ಲಾ ಪರಾÌಗಿಲ್ಲ, ಕಿವಿಗೆ ಎಂಪಿತ್ರೀ ಹಾಕಿ ಹಾಡು ಕೇಳ್ಳೋಣ ಅಂದ್ರೆ ಇಯರ್‌ಫೋನ್‌ನ ಒಂದು ಸ್ಪೀಕರ್ರೆ ವರ್ಕ್‌ ಆಗ್ತಾ ಇಲ್ಲ! ಹೀಗೆ ಸಮಸ್ಯೆಗಳ ಮೇಲೆ “ತಂತ್ರಜ್ಞಾನದ ಸಮಸ್ಯೆ’ಗಳಿಂದಾಗಿ ದಿನದಲ್ಲಿ ಅತಿ ಹೆಚ್ಚು ಕೋಪ, ಕಿರಿಕಿರಿ, ಉದ್ವೇಗ, ಗೊಣಗಲು ಕಾರಣವಾಗುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ.

ದಿನದಲ್ಲಿ ಅತಿ ಹೆಚ್ಚು ಕಿರಿಕಿರಿ ಯಾವ ತಂತ್ರಜ್ಞಾನದ ವಿಷಯದಿಂದ ಜನರು ಅನುಭವಿಸುತ್ತಾರೆ ಎಂಬ ಬಗ್ಗೆ ತಿಳಿದುಕೊಳ್ಳಲು ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ, ಅತಿ ಹೆಚ್ಚು ಮಂದಿ ಅಯ್ಯೋ ಮೊಬೈಲ್‌ ರೇಂಜ್‌ ಕಿರಿಕ್‌ ಜೋರಾಗಿದೆ ಕಣ್ರೀ ಅಂದಿದ್ದಾರೆ. ಸಮೀಕ್ಷೆಗಾಗಿ 2 ಸಾವಿರ ಮಂದಿಯನ್ನು ಸಂದರ್ಶಿಸಲಾಗಿದೆ.

ಸಮೀಕ್ಷೆಯಲ್ಲಿ ಗೊತ್ತಾಗಿರುವಂತೆ ಶೇ.48.3 ರಷ್ಟು ಜನ ಫೋನ್‌ ಸಿಗ್ನಲ್‌ ಸರಿ ಇಲ್ಲದ್ದು ಕಿರಿಕ್‌ ಅಂದಿದ್ದರೆ, ಶೇ.40ರಷ್ಟು ಮಂದಿ ಮೊಬೈಲ್‌ ಬ್ಯಾಟರಿ ಡೌನ್‌, ಚಾರ್ಚರ್‌ ಕಾಣಿ¤ಲ್ಲ ಅನ್ನೋದು ತಲೆನೋವಾಗಿದೆ ಎಂದಿದ್ದಾರೆ. ಶೇ.37ರಷ್ಟು ಮಂದಿ ವೈಫೈ, ಶೇ.19.8ರಷ್ಟು ಮಂದಿ ಕೆಲವರು ವಯರ್‌ ಸುರುಳಿ ಸುತ್ತಿಕೊಂಡಿರುವುದು ಕಿರಿಕ್‌ ಆಗಿದೆ ಎಂದಿದ್ದಾರೆ.

ಫ‌ಲಿತಗಳು…
ಮೊಬೈಲ್‌ ರೇಂಜ್‌ ಇಲ್ಲ, ಬ್ಯಾಟರಿ ಡೌನ್‌, ಚಾರ್ಜರ್‌ ಕಾಣ್ತಿಲ್ಲ ಅನ್ನೋದು ವಿಪರೀತ ಕಿರಿಕ್‌!

ಯುವಕರಿಗೆ ವೈಫೈ ಕನೆಕ್ಟ್ ಆಗ್ತಿಲ್ಲ, ಇಯರ್‌ಫೋನ್‌ ಕಾಣ್ತಿಲ್ಲ ಅನ್ನೋದು ಸಮಸ್ಯೆ

ತಂತ್ರಜ್ಞಾನದ ವಿಚಾರದಿಂದ ಜನರಲ್ಲಿ ಉದ್ವೇಕ, ಕೋಪ,ಗೊಣಗಾಟ
-ಉದಯವಾಣಿ

Comments are closed.