ಕರ್ನಾಟಕ

ಇಂದು ಆರ್​ಸಿಬಿ-ಸನ್​ರೈಸರ್ಸ್ ಮಧ್ಯೆ ಐಪಿಎಲ್ ಟ್ರೋಫಿಗಾಗಿ ಬಿಗ್ ಫೈಟ್ ; ವಿಜಯ್ ಮಲ್ಯ ದೇಶ ಬಿಟ್ಟದ್ದು ಆರ್​ಸಿಬಿಯ ಅದೃಷ್ಟ ಕುಲಾಯಿಸಲಿದೆಯೇ…?

Pinterest LinkedIn Tumblr

rcb-m

ಬೆಂಗಳೂರು: ಒಂಭತ್ತನೇ ಆವೃತ್ತಿಯ ಐಪಿಎಲ್ ಫೈನಲ್ ರವಿವಾರ ರಾತ್ರಿ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಮೂರನೇ ಬಾರಿಗೆ ಫೈನಲ್ಗೆ ಲಗ್ಗೆ ಇಟ್ಟಿರುವ ಆರ್ಸಿಬಿ ಹಾಗೂ ಪ್ರಚಂಡ ಬೌಲಿಂಗ್ನಿಂದ ಪ್ರಶಸ್ತಿ ಸುತ್ತಿಗೇರಿರುವ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮೊದಲ ಟ್ರೋಫಿಗಾಗಿ ಹೋರಾಟ ನಡೆಸಲಿವೆ. ಸ್ಪೋಟಕ ಬ್ಯಾಟ್ಸ್ಮನ್ಗಳ ದಂಡನ್ನೇ ಹೊಂದಿರುವ ಆರ್ಸಿಬಿ ಕಳೆದ ಎಂಟು ಪಂದ್ಯದಲ್ಲಿ 7ರಲ್ಲಿ ಗೆಲುವು ಸಾಧಿಸಿದ್ದು, ಹಾಗೂ ಪ್ರಶಸ್ತಿ ಪಂದ್ಯ ತನ್ನ ನೆಲದಲ್ಲೇ ನಡೆಯುತ್ತಿರುವ ಕಾರಣ ಫೇವರಿಟ್ ಆಗಿದೆ.

ಸಾಲದ ಸುಳಿಯಲ್ಲಿ ಸಿಲುಕಿ ದೇಶವನ್ನು ಬಿಟ್ಟು ಪಲಾಯನ ಮಾಡಿರುವ ವಿಜಯ್ ಮಲ್ಯ ಅವರು ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕತ್ವಕ್ಕೆ ರಾಜೀನಾಮೆಯನ್ನು ನೀಡಿದ್ದು, ತಂಡಕ್ಕೆ ಅದೃಷ್ಟ ತರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಆರ್ಸಿಬಿ ತಂಡದ ಮಾಲಕರಾಗಿದ್ದ ವಿಜಯ್ ಮಲ್ಯ ದೇಶವನ್ನು ಬಿಟ್ಟು ಪಲಾಯನ ಮಾಡುವ ಮೊದಲು ಅಂದರೆ 2009 ಹಾಗೂ 2011ರಲ್ಲಿ ಫೈನಲ್ ಗೆ ತಲುಪಿದ್ದ ಆರ್ಸಿಬಿ, ಕೊನೆಗೆ ನಿರಾಸೆಗೀಡಾಗಿತ್ತು. ಆದರೆ ಈ ಬಾರಿ ವಿಜಯ್ ಮಲ್ಯ ಇಲ್ಲದಿರುದೆ ತಂಡಕ್ಕೆ ಯೋಗ ತಂದು ಕೊಡಲಿದೆಯೇ ಎಂಬುದು ಇಂದು ನಿರ್ಧಾರ ಆಗಲಿದೆ.

2009 ಹಾಗೂ 2011ರಲ್ಲಿ ಫೈನಲ್ ಆಡಿದ ಅನುಭವ ಆರ್ಸಿಬಿ ಬೆನ್ನಿಗಿದೆ. ಆದರೆ, ಎರಡೂ ಬಾರಿಯೂ ರನ್ನರ್ಅಪ್ ಆಗಿರುವುದು ಹಿನ್ನಡೆ. ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಪಂದ್ಯಗಳನ್ನು ಸಾಕಷ್ಟು ಆಡಿರುವ ಆರ್ಸಿಬಿಗೆ ಗಗಮಕುಸುಮವಾಗಿರುವ ಟ್ರೋಫಿ ಯನ್ನು ಈ ಬಾರಿ ಗೆಲ್ಲಲೇಬೇಕೆಂಬ ಹಂಬಲದಲ್ಲಿದೆ. ಇನ್ನೊಂದೆಡೆ ಸನ್ರೈಸರ್ಸ್ ನಾಕೌಟ್ನಂತಿದ್ದ ಎರಡು ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶ ಪಡೆದಿರುವುದರಿಂದ ತಂಡದ ವಿಶ್ವಾಸ ಇನ್ನಷ್ಟು ಇಮ್ಮಡಿಯಾಗಿದೆ. ಅವೆರಡೂ ಪಂದ್ಯಗಳನ್ನು ದೆಹಲಿಯಲ್ಲಿ ಆಡಿದ್ದ ಸನ್ರೈಸರ್ಸ್ಗೆ ಬೆಂಗಳೂರಿನ ‘ಫೈನಲ್’ ವಾತಾವರಣಕ್ಕೆ ಹೊಂದಿಕೊಳ್ಳಲು ತುಂಬಾ ಕಡಿಮೆ ಸಮಯ ಸಿಕ್ಕಿದೆ. ತಂಡದ ಪ್ರಚಂಡ ಬೌಲಿಂಗ್ ಲೈನ್ಅಪ್ ಸನ್ರೈಸರ್ಸ್ನ ಬಲ. ಬ್ಯಾಟಿಂಗ್ ವಿಭಾಗದ ಸಂಪೂರ್ಣ ಭಾರ ಡೇವಿಡ್ ವಾರ್ನರ್ ಮೇಲಿದೆ.

ಆರ್ಸಿಬಿ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಬಹಳ ಕಡಿಮೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ಮಿಂಚಿರುವ ಇಕ್ಬಾಲ್ ಅಬ್ದುಲ್ಲಾ ಫೈನಲ್ ಪಂದ್ಯಕ್ಕೂ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಚಾಹಲ್, ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ನೀಡಿರುವ ಕಾರಣ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ನಿರಾಶಾದಾಯಕ ಆರಂಭದ ನಡುವೆಯೂ ಕೊಹ್ಲಿ ತಂಡವನ್ನು ಆ ಬಳಿಕ ಮುನ್ನಡೆಸಿದ ರೀತಿ ಮೆಚ್ಚುವಂಥದ್ದು.

ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ ಹಾಲಿ ವರ್ಷ ಆಡಿದ ಎಂಟು ಇನಿಂಗ್ಸ್ಗಳಲ್ಲಿ ಆರು ಬಾರಿ 50 ಪ್ಲಸ್ ರನ್ ಬಾರಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಮೂರು ಅರ್ಧಶತಕ ಸೇರಿವೆ. ಒಂದು ಪಂದ್ಯದಲ್ಲಿ ಶೂನ್ಯವನ್ನೂ ಸುತ್ತಿದ್ದಾರೆ.

Comments are closed.