ಕರ್ನಾಟಕ

ಮಗಳ ಪ್ರಿಯಕರ ಕೈಕೊಟ್ಟದ್ದಕ್ಕೆ ತಂದೆ ಆತ್ಮಹತ್ಯೆ… ಅದೇ ಹುಡುಗನ ಜೊತೆ ಮದುವೆ ಮಾಡಿಸಿದ ಸಿಟ್ಟಿಗೆದ್ದ ಗ್ರಾಮಸ್ಥರು

Pinterest LinkedIn Tumblr

marrage1

ಹಾವೇರಿ: ಯುವತಿಗೆ ಮೋಸ ಮಾಡಿದ್ದ ಹುಡುಗನನ್ನು ಗ್ರಾಮಸ್ಥರೇ ಕರೆತಂದು ಆಕೆಯ ಜೊತೆ ಮದುವೆಮಾಡಿಸಿದ್ದು, ಮಗಳ ಪ್ರಿಯಕರ ಕೈಕೊಟ್ಟ ಅಂತ ನೊಂದು ನೇಣಿಗೆ ಶರಣಾಗಿದ್ದ ತಂದೆ ಆತ್ಮಕ್ಕೆ ಈಗ ಶಾಂತಿ ಸಿಕ್ಕಂತಿದೆ.

ಹಾವೇರಿಯ ಹಲಗೇರಿ ಗ್ರಾಮದವನಾದ ದೇವರಾಜ ರೇಣುಕಾಳನ್ನು ಪ್ರೀತಿಸಿ ಮದುವೆಯಾಗದೇ ತಲೆಮರೆಸಿಕೊಂಡಿದ್ದ. ಇದೀಗ ರೇಣುಕಾಳ ಜೊತೆಗೆ ಆತನಿಗೆ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ರೇಣುಕಾ ಮತ್ತು ದೇವರಾಜ್ ಪ್ರೀತಿ ಮಾಡ್ತಿದ್ರು. ಆದ್ರೆ ಈ ಪ್ರೀತಿಗೆ ದೇವರಾಜನ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿದ್ರಿಂದ ಇವರಿಬ್ಬರು 15 ದಿನ ಮನೆ ಬಿಟ್ಟು ಓಡಿ ಹೋಗಿದ್ರು. ವಿಷಯ ತಿಳಿದ ದೇವರಾಜ್ ಮನೆಯವರು ಅವರಿಬ್ಬರನ್ನು ಕರೆಸಿಕೊಂಡು ದೂರ ಮಾಡಿದ್ರು.

ಇದ್ರಿಂದ ನೊಂದ ರೇಣುಕಾ ತಂದೆ ಕಳೆದ ವಾರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ರು. ಇದಾದ ಬಳಿಕ ರೇಣುಕಾಳ ವಿವಾಹ ಮಾಡಿಯೇ ಸಿದ್ಧ ಎಂದು ಹಠತೊಟ್ಟಿದ್ದ ಗ್ರಾಮಸ್ಥರು ಪೊಲೀಸರ ಸಹಾಯದೊಂದಿಗೆ ಈಗ ಮದುವೆ ಮಾಡಿಸಿದ್ದಾರೆ. ತಂದೆಯ ಸಾವಿನ ನಂತರ ಇವರಿಬ್ರು ಒಂದಾಗಿದ್ದಾರೆ.

Comments are closed.