ಕರ್ನಾಟಕ

ಮೈಸೂರು ಅರಮನೆಯಲ್ಲಿ ಫೋಟೋ ಶೂಟ್ ನಡೆಸಿದವರ ರಹಸ್ಯ ಬಹಿರಂಗ!

Pinterest LinkedIn Tumblr

Photo-Shootಮೈಸೂರು:ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಡೆಸಿದ ಜೋಡಿಯ ಕುಟುಂಬದ ರಹಸ್ಯ ಇದೀಗ ಬಯಲಾಗಿದೆ. ಜನಸಾಮಾನ್ಯರು ಸೇರಿದಂತೆ ಘಟಾನುಘಟಿಗಳಿಗೂ ಅವಕಾಶ ಇಲ್ಲದ ಅರಮನೆಯೊಳಗೆ ಆದಿತ್ಯ, ನವ್ಯತಾ ಜೋಡಿಗೆ ಫೋಟೋ ಶೂಟ್ ನಡೆಸಲು ಅವಕಾಶ ಕೊಟ್ಟವರಾರು? ಇವರು ಯಾರು ಎಂಬ ಬಗ್ಗೆ ಚರ್ಚೆಗೆ ಈಡಾಗಿತ್ತು..

ಆದಿತ್ಯ ಇಂಗ್ಲೆಂಡ್ ನ ನ್ಯಾಟಿಂಗ್ಯಾಮ್ ವಿವಿಯಲ್ಲಿ ಪದವಿ ಪಡೆದಾತ. ಈತ ನಿವೃತ್ತ ಐಎಎಸ್ ಅಧಿಕಾರಿ ನಂದಕುಮಾರ್ ಪುತ್ರ. ನಂದ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಫೋಟೋ ಶೂಟ್ ಮಾಡಿಸಿಕೊಂಡಿದ್ದು ನಿವೃತ್ತ ಐಎಎಸ್ ಅಧಿಕಾರಿ ಪುತ್ರ ಎಂಬುದು ಬಹಿರಂಗವಾಗಿದೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.

ಆದಿತ್ಯ ಮತ್ತು ನವ್ಯತಾ ಪೆಂಜುರಿ ವಿವಾಹ ಫೆಬ್ರುವರಿ ತಿಂಗಳಿನಲ್ಲಿ ನಡೆದಿತ್ತು. ಅದಕ್ಕೂ ಮೊದಲು ಮೈಸೂರು ಅರಮನೆಯೊಳಗೆ ದುಬಾರಿ ಕ್ಯಾಮರಾ ಬಳಸಿ ಫೋಟೋ, ವಿಡಿಯೋ ಶೂಟಿಂಗ್ ನಡೆಸಿದ್ದು, ಅದು ಯೂಟ್ಯೂಬ್ ನಲ್ಲಿ ಹರಿದಾಡುವ ಮೂಲಕ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಫೋಟೋ ಶೂಟ್ ನಡೆಸಲು ಅನುಮತಿ ಕೊಟ್ಟದ್ಯಾರು ಎಂಬುದು ಚರ್ಚೆಗೆ ಗ್ರಾಸವಾಗಿತ್ತು.

ಅರಮನೆಯೊಳಗೆ ಫೋಟೊ ಶೂಟ್ ನಡೆಸಲು ಅನುಮತಿ ಕೊಟ್ಟುವರಾರು ಎಂಬುದು ತಮಗೆ ತಿಳಿದಿಲ್ಲ ಎಂದು ರಾಣಿ ಪ್ರಮೋದಾದೇವಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

ನಾನು ಮಾತಾಡುವುದಿಲ್ಲ, ನಿಮಗೆ ಇಲ್ಲಿಗೆ ಬರಲು ಹೇಳಿದ್ಯಾರು!
ಪ್ರಕರಣದ ಬಗ್ಗೆ ಏನೂ ಗೊತ್ತಿಲ್ಲ, ಮದುವೆ ಡೇಟ್ ಕೂಡಾ ನೆನಪಿಲ್ಲ. ನಾನು ಮಾತನಾಡುವುದಿಲ್ಲ..ನಿಮಗೆ ಇಲ್ಲಿಗೆ(ಮನೆಗೆ) ಬರಲು ಹೇಳಿದವರಾರು ಎಂದು ನಂದಕುಮಾರ್ ಪತ್ನಿ ಪಬ್ಲಿಕ್ ಟಿವಿ ವರದಿಗಾರರನ್ನೇ ಪ್ರಶ್ನಿಸಿರುವುದಾಗಿ ತಿಳಿಸಿದೆ.
-ಉದಯವಾಣಿ

Comments are closed.