ಕರ್ನಾಟಕ

ಡೇರ್ ಡೆವಿಲ್;12 ಹಾವುಗಳನ್ನು ಕೊಂದು ಮನೆಯರವನ್ನು ರಕ್ಷಿಸಿದ ನಾಯಿ!

Pinterest LinkedIn Tumblr

Dog-saveಮಂಡ್ಯ:ರಸ್ತೆ ಮೇಲೆ ಬಿದ್ದಿದ್ದ ಅಜ್ಜಿಯ ದೇಹವನ್ನು 6ಗಂಟೆಗಳ ಕಾಲ ಕಾವಲು ಕಾದ ವರದಿ ಓದಿದ್ದೀರಿ…ಇದೀಗ ನಾಯಿಯ ನಿಯತ್ತಿಗೆ ಮತ್ತೊಂದು ಸಾಕ್ಷಿ ಎಂಬಂತೆ ಸುಮಾರು 12 ಹಾವುಗಳನ್ನು ಕೊಂದು ಮನೆಯವರನ್ನು ರಕ್ಷಿಸುವ ನಾಯಿಯೊಂದು ಮಂಡ್ಯದಲ್ಲಿದೆ!

ಮಂಡ್ಯದ ಗುತ್ತಲು ರಸ್ತೆಯಲ್ಲಿರುವ ಅರಕೇಶ್ವರ ನಗರದಲ್ಲಿ ವಾಸವಿರುವ ಸಾವಿತ್ರಮ್ಮ ಎಂಬವರ ನಾಯಿ ಇದಾಗಿದೆ. ಚಿನ್ನು ಅಂತ ಮನೆಯವರೆಲ್ಲ ನಾಯಿಯನ್ನ ಮುದ್ದಿನಿಂದ ಕರೆಯುತ್ತಾರೆ. ಈ ನಾಯಿ ಈಗಾಗಲೇ ಮನೆಯ ಬಳಿ ಬಂದ ಹನ್ನೆರಡು ಹಾವುಗಳನ್ನ ಕಚ್ಚಿ ಸಾಯಿಸಿದೆ ಎಂದು ಪಬ್ಲಿಕ್ ಟಿವಿ ವರದಿ ತಿಳಿಸಿದೆ.

ಈ ಡೇರ್ ಡೆವಿಲ್ ನಾಯಿ ಹಾವನ್ನ ಕೊಲ್ಲುವುದನ್ನ ನೆರೆ ಮನೆಯವರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ವಾಟ್ಸಪ್ ನಲ್ಲಿ ಹರಿದಾಡ್ತಿದೆ.
-ಉದಯವಾಣಿ

Comments are closed.