ಅಂತರಾಷ್ಟ್ರೀಯ

ಮಗುವಿಗೆ ಅಮಾನುಷವಾಗಿ ಥಳಿಸಿರುವ ಬೇಬಿ ಸಿಟ್ಟರ್..ನ್ಯಾಯಾಕ್ಕಾಗಿ ಹೆತ್ತವರ ಹೋರಾಟ

Pinterest LinkedIn Tumblr

baby

ಒರೆಗಾನ್,ಮೇ.26 : ಬೇಬಿ ಸಿಟ್ಟರ್, ತಮ್ಮ ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವುದನ್ನ ಖಂಡಿಸಿ ಒರೆಗಾನ್`ನ ದಂಪತಿ ಫೇಸ್ಬುಕ್`ನಲ್ಲಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದು, ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಮಗುವಿನ ತಂದೆ ಜೋಶೂ ಮಾರ್ಬರಿ ಈ ಪ್ರಕರಣದ ಕುರಿತಂತೆ ಫೇಸ್ಬುಕ್`ನಲ್ಲಿ ಪೋಸ್ಟ್ ಮಾಡಿದ್ದು, ತಪ್ಪಿತಸ್ಥನಿಗೆ ಶಿಕ್ಷೆ ಕೊಡಿಸಲು ತನಗೂ ಮತ್ತು ಪತ್ನಿ ಅಲಿಶಿಯಾಗೂ ನೆರವು ನೀಡುವಂತೆ ಕೋರಿದ್ದಾರೆ.

`2 ತಿಂಗಳ ಹಿಂದೆ ಬೇಬಿ ಸಿಟ್ಟಿಂಗ್`ಗೆ ತೆರಳಿದ್ದ ನಮ್ಮ ಮಗುವಿನ ಹಣೆಯ ಎರಡೂ ಬದಿಗಳಲ್ಲಿ ಗಾಯಗಳಾಗಿದ್ದವು. ಮಗುವನ್ನ ಾಸ್ಪತ್ರೆಗೆ ಕರೆದೊಯ್ದಾಗ ಾ ಕ್ರೌರ್ಯದ ಮತ್ತೊಂದು ಮುಖ ತಿಳಿಯಿತು. ಗಾಯದ ಪಕ್ಕದಲ್ಲಿ ಹಸ್ತದ ಗುರುತುಗಳನ್ನೂ ವೈದ್ಯರು ನನಗೆ ತೋರಿಸಿದ್ದರು. ಅಷ್ಟು ಜೋರಾಗಿ ಬೇಬಿ ಸಿಟ್ಟರ್ ಹೊಡೆದಿದ್ದಾನೆ. ಈ ಸಂದರ್ಭ ಮಗು ಬದುಕಿದ್ಧೆ ಅದೃಷ್ಟ ಎಂದು ಜೋಶೂ ದುಃಖ ತೋಡಿಕೊಂಡಿದ್ದಾರೆ.

ಮೊದ ಮೊದಲು ಮಗುವಿಗಾದ ಗಾಯದ ಬಗ್ಗೆ ನನಗೇನೂ ಗೊತ್ತಿಲ್ಲವೆಂದಿದ್ದ ಬೇಬಿ ಸಿಟ್ಟರ್, ಈಗ ತಪ್ಪೊಪ್ಪಿಕೊಂಡಿದ್ದಾನೆ. ಕಾಂಕ್ರೀಟ್ ನೆಲದ ಮೇಲೆ ಮಗುವನ್ನ ಕೆಡವಿದ್ದು ಮತ್ತು ಮಗುವಿಗೆ ಹೊಡೆದಿರುವುದನ್ನ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಆದರೂ, ತಪ್ಪಿತಸ್ಥನ ಬಂಧನವಾಗಿಲ್ಲ. ಇದಕ್ಕೆ ಕಾರಣ ಕಾನೂನಿನ ಲೂಫೋಲ್.

ಏನಿದು ಲೂಫೋಲ್?: 2012ರ ಒರೆಗಾನ್ ಕೋರ್ಟ್ ರೂಪಿಸಿರುವ ನಿಯಮಗಳ ಪ್ರಕಾರ, ಸಂತ್ರಸ್ತರು ತಮಗಾದ ಹಲ್ಲೆ ಮತ್ತು ನೋವನ್ನ ನ್ಯಾಯಾಲಯದ ಮುಂದೆ ಬಂದು ಸಾಬೀತುಪಡಿಸಬೇಕು. ಮೈಮೇಲಿನ ಗಾಯಗಳು ಸಹ ಸೂಕ್ತ ದಾಖಲೆಯಾಗುವುದಿಲ್ಲವಂತೆ, ಸಂತ್ರಸ್ತರೇ ಬಂದು ಕೋರ್ಟ್`ನಲ್ಲಿ ಹೇಳಿಕೆ ನೀಡಬೇಕಂತೆ. ಆದರೆ, ಒಂದು ವರ್ಷದ ಮಗು ಹೇಗೆ ತಾನೆ ಸಾಬೀತುಪಡಿಸಲು ಸಾಧ್ಯ ಹೇಳಿ..? ವಿವಾದಿತ ಕಾನೂನಿನಿಂದಾಗಿ ಡಿಸ್ಟ್ರಿಕ್ ಅಟಾರ್ನಿ ಬಳಿಯೇ ಕೇಸು ಸ್ಥಗಿತಗೊಂಡಿದೆ. ಇಷ್ಟು ದಿನ ಕಾದ ಜೋಶೂ ದಂಪತಿ ಇದೀಗ ದಾರಿಕಾಣದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. #JusticeforJacob ಹೆಸರಿನ ಈ ಪೋಸ್ಟ್ 37 ಲಕ್ಷಕ್ಕೂ ಅಧಿಕ ಬಾರಿ ಶೇರ್ ಆಗಿದ್ದು, ಅಮೆರಿಕದಾದ್ಯಂತ ಜನಬೆಂಬಲ ದೊರೆತಿದೆ.

Comments are closed.