ಕರಾವಳಿ

ಬೈಂದೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 574 ಅಂಕ ಪಡೆದ ಗ್ರಾಮೀಣ ಪ್ರತಿಭೆ ಸುಮಾಗೆ ಎಸ್ಪಿ ಅಣ್ಣಾಮಲೈಯಿಂದ 10,000 ಬಹುಮಾನ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಉಡುಪಿ: ಬೈಂದೂರು ವಲಯದಲ್ಲಿ ಎಸ್.ಎಸ್.ಎಲ್.ಸಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಬೈಂದೂರು ವಿದ್ಯಾರ್ಥಿಯೋರ್ವಳಿಗೆ ಉಡುಪಿ ಎಸ್ಪಿ ಕೆ.ಅಣ್ಣಾಮಲೈ 10 ಸಾವಿರ ರೂ ನಗದು ನೀಡಿ ಪ್ರೋತ್ಸಾಹ ನೀಡಲಿದ್ದಾರೆ. ಈ ಮೂಲಕ ಎಸ್ಪಿ ಅವರು ವಿದ್ಯಾಭ್ಯಾಸದ ಬಗ್ಗೆ ತಮಗಿರುವ ಕಳಕಳಿಯನ್ನು ತೋರಿಸಿದ್ದಾರೆ.

Udupi Sp_Donates 10k_Suma Devadiga

(ಸುಮಾ ದೇವಾಡಿಗ )

ಬೈಂದೂರು ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿನಿ ಸುಮಾ ದೇವಾಡಿಗ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 574 ಅಂಕ ಪಡೇದು ಈ ನಗದು ಹಣ ಪಡೆಯಲು ಭಾಜನಳಾಗಿದ್ದಾಳೆ.

Sp. K, annamalai - Copy

ನಗದು ಬಹುಮಾನದ ಮಾತು ಕೊಟ್ಟಿದ್ದ ಎಸ್ಪಿ…
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೈಂದೂರು ಹೇನಬೇರು ಅಕ್ಷತಾ ದೇವಾಡಿಗ ಕೊಲೆ ಸಂದರ್ಭ ಬೈಂದೂರಿಗೆ ತನಿಖೆಗೆ ಬಂದಿದ್ದ ಎಸ್ಪಿ ಕೆ.ಅಣ್ಣಾಮಲೈ ಅವರು ಬೈಂದೂರು ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ್ದರು. ಈ ಭಾಗದಲ್ಲಿ ಬಡತನದ ಮಕ್ಕಳು ವಿದ್ಯಾಭ್ಯಾಸಕ್ಕೆ ಬರುವ ಕುರಿತು ಮಹಿತಿ ಪಡೆದ ಅವರು ಈ ಸಂದರ್ಭ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಗೆ 10,000 ನಗದು ಬಹುಮಾನ ನೀಡುವುದಾಗಿ ಹೇಳಿದ್ದರು. ಅದರಂತೆ ಫಲಿತಾಂಶದ ಬಳಿಕ ಕಾಲೇಜಿನಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಸದ್ಯ ಬೈಂದೂರಿನ ಸುಮಾ ದೇವಾಡಿಗ 574 ಅಂಕ ಪಡೆದು ಈ ಗೌರವಕ್ಕೆ ಪಾತ್ರಳಾಗಿದ್ದಾಳೆ. ಈಕೆ ಮಯ್ಯಾಡಿಯ ಲಕ್ಷ್ಮಣ ದೇವಾಡಿಗ ಮತ್ತು ಗುಲಾಬಿ ದೇವಾಡಿಗ ಇವರ ಪುತ್ರಿ.

Comments are closed.