ಕರ್ನಾಟಕ

ಭಿಕ್ಷೆ ನೀಡಿದವನನ್ನು ಭೇಟಿಯಾಗಿ,ಸತ್ಕರಿಸಿ ಉಪಚರಿಸಿದ ಸೋನು ನಿಗಂ

Pinterest LinkedIn Tumblr

sonu_nigam_beging

ಮುಂಬೈ. ಮೇ.24: ಒಂದು ವಾರದ ಹಿಂದಷ್ಟೆ ಬಾಲಿವುಡ್ಡಿನ ಖ್ಯಾತ ಗಾಯಕ ಸೋನು ನಿಗಮ್ ಮುಂಬೈನ ಬೀದಿಗಳ ವಿವಿಧ ಭಾಗಗಳಲ್ಲಿ ಭಿಕ್ಷುಕನ ವೇಷ ಧರಿಸಿ ಹಾಡಿದ್ದ 6 ನಿಮಿಷಗಳ ‘ದಿ ರೋಡ್’ಸೈಡ್ ಉಸ್ತಾದ್’ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು.

ಈ ಸಂದರ್ಭದಲ್ಲಿ ಸೋನು ನಿಗಂ ಹಾಡಿಗೆ ಮನಸೋತ ವ್ಯಕ್ತಿಯೊಬ್ಬ 12 ರೂ. ನೀಡಿದ್ದ. ಈಗ ಆ ವ್ಯಕ್ತಿಯನ್ನು ಸೋನು ನಿಗಂ ತಮ್ಮ ಮನೆಗೆ ಕರೆಸಿಕೊಂಡು ಸತ್ಕರಿಸಿದ್ದಾರೆ. ಉಪಚರಿಸಿಕೊಂಡ ವ್ಯಕ್ತಿಯ ಹೆಸರು ಶಾರ್ಬಾಜ್.

ಶಾರ್ಬಾಜ್’ನನ್ನು ಸ್ವತಃ ಮನೆಗೆ ಕರೆಸಿಕೊಂಡ ಸೋನುರವರು 12 ರೂ. ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಆತ ಕೊಟ್ಟ ಹಣವನ್ನು ಫ್ರೇಮ್ ಹಾಕಿಸಿ ಸಹ ಇಟ್ಟುಕೊಂಡಿದ್ದಾರೆ. ಖಾಸಗಿ ಚಾನಲ್ ವಾರದ ಹಿಂದಷ್ಟೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಹಾರ್ಮೋನಿಯಂ ಪೆಟ್ಟಿಗೆಯೊಂದಿಗೆ ಭಿಕ್ಷುಕನ ವೇಷ ಧರಿಸಿದ್ದ ಸೋನು ನಿಗಮ್ ಮುಂಬೈನ ವಿವಿಧ ಬೀದಿಗಳಲ್ಲಿ 3 ಗಂಟೆ ಕಳೆದು 25 ಹಾಡುಗಳನ್ನು ಹಾಡಿದ್ದರು.

Comments are closed.