ಕರ್ನಾಟಕ

ದೆವ್ವವಾಗಿ ಕಾಡುತ್ತಿದ್ದಾಳೆಯೇ ನರ್ಸ್ ! ದೇವರಮೊರೆ ಹೋದ ಗ್ರಾಮಸ್ಥರು

Pinterest LinkedIn Tumblr

manya

ಮಂಡ್ಯ: ಆ ಗ್ರಾಮದಲ್ಲಿ ಹನ್ನೊಂದು ತಿಂಗಳ ಹಿಂದೆ ನರ್ಸ್ ಒಬ್ಬಳು ಕೊಲೆಯಾಗಿದ್ದಳು. ಆಕೆ ಹತ್ಯೆ ಬಳಿಕ ಗ್ರಾಮದಲ್ಲಿ ಒಂದರ ಹಿಂದೆ ಒಂದರಂತೆ ಸರಣಿ ಸಾವು ಸಂಭವಿಸುತ್ತಲೇ ಇವೆಯಂತೆ. ಇದಕ್ಕೆ ಆ ಯುವತಿ ಸಾವಿಗೀಡಾದ ಘಳಿಗೆ ಸರಿ ಇಲ್ಲದಿರೋದೆ ಕಾರಣ ಅಂತಾ ಭಾವಿಸಿರೋ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಹಾಗಾದ್ರೆ, ಅದ್ಯಾವ ಗ್ರಾಮ? ಅಶುಭ ಘಳಿಗೆಯಲ್ಲಿ ಸಾವಿಗೀಡಾದ ನರ್ಸ್ ಯಾರು ಅಂತೀರಾ? ಈ ಸ್ಟೋರಿ ನೋಡಿ ನಿಮ್ಗೆ ಗೊತ್ತಾಗುತ್ತೆ.

ಮಂಡ್ಯ ತಾಲೂಕು ಚಂದಗಾಲು ಗ್ರಾಮದ ದಲಿತ ಕಾಲೋನಿ ನಿವಾಸಿಗಳು ಗ್ರಾಮ ದೇವತೆಗೆ ಪೂಜೆ ಮಾಡಿ, ಕಳಸ ಹೊತ್ತು ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿದರು. 2015ರ ಜೂನ್ 13ರಂದು ಗ್ರಾಮದ ನರ್ಸ್ ಪ್ರತಿಮಾ ಎಂಬ ಯುವತಿ ಹತ್ಯೆಯಾಗಿದ್ದಳು. ತನ್ನನ್ನ ಬಿಟ್ಟು ಬೇರೆಯವರೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿರೋದನ್ನ ಸಹಿಸದ ಅದೇ ಗ್ರಾಮದ ಉಮೇಶ ಎಂಬ ಯುವಕ ಆಕೆಯನ್ನ ಡ್ರಾಪ್ ಕೊಡೋ ನೆಪದಲ್ಲಿ ತನ್ನ ಟಾಟಾ ಏಸ್ ವಾಹನದಲ್ಲಿ ಕರೆದೊಯ್ದು ಹತ್ಯೆ ಮಾಡಿದ್ದ.

ಪ್ರತಿಮಾ ಹತ್ಯೆಯಾದ ಬಳಿಕ ಇಲ್ಲಿವರೆಗೆ ಗ್ರಾಮದಲ್ಲಿ 16ಕ್ಕೂ ಹೆಚ್ಚು ಅಸಜ, ಸರಣಿ ಸಾವುಗಳು ಸಂಭವಿಸಿವೆಯಂತೆ. ಇದಕ್ಕೆ ಪ್ರತಿಮಾ ಅಶುಭ ಘಳಿಗೆಯಲ್ಲಿ ಸಾವನ್ನಪ್ಪಿರೋದೇ ಕಾರಣ ಅಂತಾ ಕೆಲವು ಜ್ಯೋತಿಷಿಗಳು ಹೇಳಿದ್ದಾರೆ. ಅಲ್ಲದೆ, ಸರಣಿ ಸಾವು ತಡೆದು, ಗ್ರಾಮದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗಬೇಕಾದರೆ, ಗ್ರಾಮ ದೇವತೆಗಳ ಪೂಜೆ ಮಾಡುವುದು, ಗ್ರಾಮದ ನಾಲ್ಕೂ ದಿಕ್ಕುಗಳಲ್ಲೂ ಬಲಿ ನೀಡುವಂತೆ ಸಲಹೆ ನೀಡಿದ್ದಾರಂತೆ.

ಸಾವಿಗೀಡಾಗಿರೋ 16ಕ್ಕೂ ಹೆಚ್ಚು ಮಂದಿಯೆಲ್ಲಾ ವಯಸ್ಸಿಗೆ ಬಂದವರು. ಅನಾರೋಗ್ಯಕ್ಕೀಡಾದರಲ್ಲ. ಬದಲಿಗೆ ಆರೋಗ್ಯವಂತರು, ಮದುವೆ ನಿಶ್ಚಯವಾಗಿದ್ದವರು ಹಾಗೂ ಯುವ ಸಮುದಾಯವೇ ಹೆಚ್ಚಂತೆ. ಹೀಗಾಗಿ ಗ್ರಾಮದಲ್ಲಿ ನಡೀತ್ತಿರೋ ಅಸಹಜ, ಸರಣಿ ಸಾವಿನಿಂದ ಗ್ರಾಮದ ಪ್ರತಿಯೊಬ್ಬರಲ್ಲೂ ಭಯ ಮತ್ತು ಆತಂಕ ಸೃಷ್ಟಿಯಾಗಿದ್ಯಂತೆ. ಈ ಗ್ರಾಮಸ್ಥರನ್ನ ಭಯ ಎಷ್ಟರ ಮಟ್ಟಿಗೆ ಕಾಡ್ತಿದೆ ಅಂದ್ರೆ, ಭಯದಿಂದ ಎರಡು ಕುಟುಂಬ ಈಗಾಗಲೇ ಗ್ರಾಮವನ್ನೇ ತೊರೆದಿವೆಯಂತೆ.

ಈ ಎಲ್ಲಾ ಭಯವನ್ನ ಹೋಗಲಾಡಿಸಿ, ಗ್ರಾಮದಲ್ಲಿ ಶಾಂತಿ ವಾತಾವರಣ ಸೃಷ್ಟಿ ಮಾಡೋ ದೃಷ್ಟಿಯಿಂದ ಗ್ರಾಮಸ್ಥರೆಲ್ಲರೂ ಜ್ಯೋತಿಷಿಗಳ ಸಲಹೆಯಂತೆ ದೇವರ ಮೊರೆ ಹೋಗಿದ್ದಾರೆ. ಅದಕ್ಕಾಗಿ ಈಗಾಗಲೇ ಗ್ರಾಮ ದೇವತೆಗಳನ್ನ ಪೂಜಿಸಿದ್ದಾರೆ. ಶನಿವಾರ ದಲಿತ ಕಾಲೋನಿ ನಿವಾಸಿಗಳ ಮನೆ ದೇವರಾದ ಬೋರೇ ದೇವರು ಮತ್ತು ವೆಂಕಟರಮಣನ ಪೂಜೆ ಮಾಡಲು ನಿರ್ಧರಿಸಿದ್ದಾರೆ.

ಗ್ರಾಮದಲ್ಲಿ ನಡೀತಿರೋ ಸರಣಿ ಸಾವಿಗೂ, ಪ್ರತಿಮಾ ಸಾವಿಗೂ ಸಂಬಂಧವಿದೆಯೋ? ಇಲ್ವೋ? ಗೊತ್ತಿಲ್ಲ. ಗ್ರಾಮಸ್ಥರು ಮಾತ್ರ ಜ್ಯೋತಿಷಿಗಳ ಸಲಹೆಯಂತೆ ಮೌಢ್ಯಕ್ಕೆ ಮೊರೆ ಹೋಗಿದ್ದಾರೆ. ಏನೇ ಆಗ್ಲೀ ಇಲ್ಲಿನ ಜನರಲ್ಲಿ ಮನೆ ಮಾಡಿರುವ ಆತಂಕ ಹೋಗಲಾಡಿಸಿ ಗ್ರಾಮದಲ್ಲಿ ಶಾಂತಿ ನೆಲೆಸಿದರೆ ಸಾಕು ಎಂಬುದು ಇಲ್ಲಿನ ಜನರ ಮಾತು.

Comments are closed.