ಕರ್ನಾಟಕ

ಹಾಳುಬಾವಿಯಲ್ಲಿ ಬಿದ್ದು ಇಬ್ಬರು ಮಕ್ಕಳ ಸಾವು

Pinterest LinkedIn Tumblr

bellary

ಬಳ್ಳಾರಿ: ಮಕ್ಕಳು (ಬಾಲಕರು) ಕೆಸರು ತುಂಬಿದ್ದ ಹಾಳು ಬಾವಿಯಲ್ಲಿ ಬಿದ್ದು ಮೃತಪಟ್ಟ ದುರ್ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲುನಲ್ಲಿ ನಡೆದ ವರದಿಯಾಗಿದೆ.

ಜಿಂದಾಲ್ ಗೆ ಸಂಬಂಧಿಸಿದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ನೌಕರರೋರ್ವರ ಇಬ್ಬರು ಪುತ್ರರೇ ಪಾಳುಬಾವಿಯಲ್ಲಿ ಬಿದ್ದು ಮೃತಪಟ್ಟ ನತದೃಷ್ಟರು ಎಂದು ಪೊಲೀಸರು ಹೇಳಿದ್ದಾರೆ.

ಶನಿವಾರ ಮಧ್ಯಾಹ್ನ ಆಟವಾಡಲೆಂದು ಮನೆಯಿಂದ ಹೊರಗಡೆ ಹೋಗಿದ್ದ ಅಲ್ ಬೆ ಮತ್ತು ಅಬೇಲ್ ಎಂಬುವ ಇಬ್ಬರು ಮಕ್ಕಳು(ಇಬ್ಬರು ಸಹೋದರರು) ಆಕಸ್ಮಿಕವಾಗಿ ಹಳೆಯದಾದ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತೋರಣಗಲ್ಲು ಪೊಲೀಸ್ ಠಾಣೆಯ ಪಿಎಸ್ ಐ ಮಹಮ್ಮದ್ ರಫಿ ತಿಳಿಸಿದ್ದಾರೆ.
ಈ ಬಗ್ಗೆ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Comments are closed.