ರಾಷ್ಟ್ರೀಯ

ಪೊಲೀಸರನ್ನು ಬೆಚ್ಚಿ ಬೀಳಿಸಿದ ಕಾರ್ ನೋಂದಣಿ ಸಂಖ್ಯೆ 1515….!

Pinterest LinkedIn Tumblr

car

ಲಕ್ನೌ: ಇದ್ದಕ್ಕಿದ್ದಂತೆ ರಸ್ತೆ ಬದಿಯಲ್ಲಿ ಪ್ರತ್ಯಕ್ಷವಾಗಿರುವ ಅನಾಥ ಮಾರುತಿ ಎರ್ಟಿಗಾ ವ್ಯಾನ್ ಒಂದು ಪೊಲೀಸರ ನಿದ್ದೆಗೆಡಿಸಿದ್ದು, ಈ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿರುವ ಘಟನೆ ನಡೆದಿದೆ. ಈ ಸ್ಥಿತಿಗೆ ಕಾರಣ ಆ ವಾಹನದ ಮೇಲಿನ ನೋಂದಣಿ ಸಂಖ್ಯೆ. ವ್ಯಾನ್ ಹೊಂದಿರುವ ಸಂಖ್ಯೆ ಯುಪಿ 32 ಹೆಚ್‌ಎ 1515. ಆದರೆ ಈ ಸಂಖ್ಯೆ ಬರೆದಿರುವ ಫಾಂಟ್‌ನಿಂದಾಗಿ ಅದು ಐಎಸ್‌ಐಎಸ್ (ಐಖಐಖ) ರೀತಿಯೇ ಗೋಚರಿಸುತ್ತಿದ್ದು, ಇದು ಐಎಸ್‌ಐಎಸ್ ಉಗ್ರರಿಗೆ ಬೆಂಬಲವಾಗಿರುವವರ ಕಾರ್ ಇರಬಹುದೇ ಎಂಬುದು ಪೊಲೀಸರ ಗುಮಾನಿಯಾಗಿದೆ. ಹಾಗಾಗಿ ಈಗ ಪೊಲೀಸರು ಮಾರುತಿ ಎರ್ಟಿಗಾ ಮಾಲಿಕನ ಪತ್ತೆಗೆ ಮುಂದಾಗಿದ್ದಾರೆ.

ಯಾರೋ ಅಪರಿಚಿತ ಯುವಕರಿಬ್ಬರು ಬಂದು ಈ ಬಿಳಿ ವ್ಯಾನ್ ಅಲ್ಲಿ ನಿಲ್ಲಿಸಿ ಹೋಗಿದ್ದಾಗಿ ಕೆಲ ಸ್ಥಳೀಯರು ಹೇಳಿದ್ದಾರೆ. ಯಾವ ಆಯಾಮದಲ್ಲಿ ಚಿಂತಿಸಿದರೂ ಈ ಸಂಖ್ಯೆಗಳು ಐಎಸ್‌ಐಎಸ (ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್-ಸಿರಿಯಾ) ರೀತಿಯಲ್ಲೇ ಕಾಣುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಮಾರುತಿ ವ್ಯಾನ್ ನಿಶತ್‌ಗಂಜ್ ರೈಲು ನಿಲ್ದಾಣದ ಬಳಿ ನಿಂತಿದೆ. ಮಾರುತಿ ವ್ಯಾನ್‌ನ ಹಿಂಭಾಗದಲ್ಲೂ ಮತ್ತು ಮುಂಭಾಗದಲ್ಲೂ ನೋಂದಣಿ ಸಂಖ್ಯೆಯನ್ನು ಐಎಸ್‌ಐಎಸ್‌ನಂತೆಯೇ ಚಿತ್ರಿಸಲಾಗಿದೆ. ಪೊಲೀಸರು ಹೇಗೆ ಆಲೋಚಿಸಿದರೂ ಇದು ಐಎಸ್‌ಐಎಸ್ ಎಂಬಲಿತ ಎಂದೇ ಗೋಚರಿಸುತ್ತಿದ್ದು, ಪೊಲೀಸರು ವ್ಯಾನ್ ಮಾಲೀಕನ ಪತ್ತೆಗಾಗಿ ವಿದ್ಯುನ್ಮಾನ ಮಾಧ್ಯಮಗಳ ಮೊರೆ ಹೊಕ್ಕಿದ್ದಾರೆ.

ಈ ರೀತಿ ನೋಂದಣಿ ಸಂಖ್ಯೆಯನ್ನು ವಿಭಿನ್ನವಾಗಿ, ಸಂದೇಹಾಸ್ಪದವಾಗಿ ಚಿತ್ರಿಸುವುದು ವಾಹನ ಕಾಯ್ದೆಯಡಿ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಹೇಳಿರುವ ನಗರ ಸಂಚಾರಿ ಪೊಲೀಸ್ ಅಧಿಕಾರಿ ಹಬೀಬುಲ್ ಹಸನ್ ಮಾಲೀಕನಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ. ಇಂದು ರಜೆ ಪ್ರಯುಕ್ತ ವಿಭಾಗೀಯ ಸಾರಿಗೆ ಇಲಾಖೆ ಕಚೇರಿಗಳು ಮುಚ್ಚಿರುವುದರಿಂದಾಗಿ ಪೊಲೀಸರಿಗೆ ತೀವ್ರ ತಲೆನೋವಾಗಿದೆ.

Comments are closed.