ರಾಷ್ಟ್ರೀಯ

10 ಕೋಟಿ ಭಾರಿ ಮೊತ್ತದ ಹಣವನ್ನು ATM ನೌಕರರೇ ಕದ್ದೊಯ್ದರು …!

Pinterest LinkedIn Tumblr

atmbanks

ಹೈದರಾಬಾದ್: ಎಟಿಎಂಗಳಿಗೆ ಹಣ ತುಂಬಲು ನಿಯೋಜನೆಗೊಂಡಿದ್ದ ನೌಕರರೇ ಸುಮಾರು 10 ಕೋಟಿ ರೂ. ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಆರ್‌ಸಿಐ ನಗದು ನಿರ್ವಹಣಾ ಏಜೆನ್ಸಿ ಸಂಸ್ಥೆಯು ನೇಮಕ ಮಾಡಿಕೊಂಡಿದ್ದ ಇಬ್ಬರು ನೌಕರರು ಎಟಿಎಂಗೆ ಹಣ ತುಂಬಲು ತೆರಳಿದ್ದು, ಇದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ಸಂಬಂಧ ಸಂಸ್ಥೆ ತುಕಾರಾಮ್ ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸುಮಾರು 150 ಎಟಿಎಂ ಯಂತ್ರಗಳಿಗೆ ಹಣ ತುಂಬುವ ಕೆಲಸವನ್ನು ಈ ಏಜೆನ್ಸಿ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಯಂತ್ರಗಳಿಗೆ ಹಣವನ್ನೂ ಸಹ ತುಂಬಿತ್ತು.

ಆದರೆ ಸಂಸ್ಥೆಯ ಇಬ್ಬರು ನೌಕರರು ಬೃಹತ್ ಮೊತ್ತದ ಹಣವನ್ನು ನೋಡಿ ಸುಖದ ಜೀವನ ನಡೆಸಬಹುದೆಂಬ ವ್ಯಾಮೋಹಕ್ಕೆ ಬಿದ್ದು, ಎಟಿಎಂಗೆ ತುಂಬಲು ತಂದಿದ್ದ ಹಣದೊಂದಿಗೆ ಪರಾರಿಯಾಗಿದ್ದಾರೆ. ಸಂಸ್ಥೆಯ ಅಧಿಕಾರಿಗಳು ನೀಡಿದ ದೂರಿನನ್ವಯ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಕಳುವಾಗಿರುವ ಬಗ್ಗೆ ಪೊಲೀಸರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಇದರ ಹಿಂದೆ ಹಲವರ ಕೈವಾಡವಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Comments are closed.