ಮನೋರಂಜನೆ

ಯೂಸುಫ್ ಪಠಾಣ್ ಬ್ಯಾಟಿಂಗ್…ಸ್ಪಿನ್ನರ್‌ಗಳ ಕೈಚಳಕಕ್ಕೆ ಶರಣಾದ ಸನ್‌ರೈಸರ್ಸ್; ಪ್ಲೇ-ಆಫ್​ಗೇರಿದ ಕೋಲ್ಕತ ನೈಟ್​ರೈಡರ್ಸ್

Pinterest LinkedIn Tumblr

yusuf-pathan-sunil

ಕೋಲ್ಕತ್ತ: ಸ್ಪಿನ್ನರ್‌ಸುನಿಲ್ ನಾರಾಯಣ್ ಮತ್ತು ಕುಲದೀಪ್ ಯಾದವ್ ಅವರ ಅಮೋಘ ಬೌಲಿಂಗ್‌ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಭಾನುವಾರ ಸನ್‌ರೈಸರ್ಸ್ ವಿರುದ್ಧ ಗೆದ್ದು ಪ್ಲೇ ಆಫ್‌ಗೆ ಪ್ರವೇಶಿಸಿತು.

ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು 22 ರನ್‌ಗಳಿಂದ ಸನ್‌ರೈಸರ್ಸ್‌ವಿರುದ್ಧ ಜಯಿಸಿತು.

kkr22

ಟಾಸ್ ಗೆದ್ದ ಸನ್‌ರೈಸರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 171 ರನ್‌ಗಳಿಸಿತು. ಉತ್ತಮ ಬ್ಯಾಟಿಂಗ್ ಪಡೆ ಹೊಂದಿರುವ ಸನ್‌ರೈಸರ್ಸ್‌ತಂಡವನ್ನು ಸುನಿಲ್ ನಾರಾಯಣ್ (21ಕ್ಕೆ3) ಮತ್ತು ಕುಲದೀಪ್ ಯಾದವ್ (28ಕ್ಕೆ2) 149 ರನ್‌ಗಳಿಗೆ ನಿಯಂತ್ರಿಸಿದರು. ಇದರಿಂ ದಾಗಿ ಪ್ಲೇ ಆಫ್ ಹಂತ ತಲುಪಲು ಕೆಕೆಆರ್‌ಗೆ ಸಾಧ್ಯವಾಯಿತು.

ರೈಡರ್ಸ್ ತಂಡವು ಈ ಪಂದ್ಯದಲ್ಲಿ ಸೋತಿದ್ದರೆ ಪ್ಲೇಆಫ್ ಅವಕಾಶವನ್ನು ಕಳೆ ದುಕೊಳ್ಳುವುದು ಖಚಿತವಾಗಿತ್ತು. ಆದರೆ, ಸತತ ಎರಡು ಪಂದ್ಯಗಳಲ್ಲಿ ಸೋತ ಸನ್‌ರೈಸರ್ಸ್ ತಂಡವು ಪಾಯಿಂಟ್‌ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿಯಿತು. ಗುಜರಾತ್ ಲಯನ್ಸ್‌ಮೊದಲ ಸ್ಥಾನಕ್ಕೇರಿತು. ಕೋಲ್ಕತ್ತ ಮೂರನೇ ಸ್ಥಾನದಲ್ಲಿದೆ. 14 ಪಂದ್ಯಗ ಳಲ್ಲಿ ಎಂಟರಲ್ಲಿ ಗೆದ್ದಿದೆ. ಆರರಲ್ಲಿ ಸೋತಿದೆ. ಎರಡು ಬಾರಿ (2012, 2014) ಚಾಂಪಿಯನ್ ಆಗಿದ್ದ ಕೆಕೆಆರ್ ಈ ಬಾರಿ ಮತ್ತೆ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.

ಸ್ಪಿನ್ನರ್‌ಗಳ ಕೈಚಳಕ: ಐಪಿಎಲ್‌ನಲ್ಲಿ ಬಹುತೇಕ ಬ್ಯಾಟ್ಸ್‌ಮನ್‌ಗಳ ಅಬ್ಬರ ವನ್ನೇ ನೋಡಿದ್ದವರಿಗೆ ಸ್ಪಿನ್ನರ್‌ಗಳ ಕೈಚಳಕವನ್ನು ನೋಡುವ ಅವಕಾಶ ಈ ಪಂದ್ಯದಲ್ಲಿ ಲಭಿಸಿತು.

ಲೆಗ್‌ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರ ಬದಲಿಗೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರಿಗೆ ಸ್ಥಾನ ನೀಡಿದ ನಾಯಕ ಗೌತಮ್‌ಗಂಭೀರ್ ತಂತ್ರ ಫಲಿಸಿತು.

ಸನ್‌ರೈಸರ್ಸ್ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ (51; 30ಎ, 4ಬೌಂ, 3ಸಿ) ಮತ್ತು ನಾಯಕ ಡೇವಿಡ್ ವಾರ್ನರ್ (18; 16ಎ, 1ಬೌಂ, 1ಸಿ) ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ನಾಲ್ಕನೇ ಓವರ್‌ಬೌಲಿಂಗ್ ಮಾಡಿದ ವೆಸ್ಟ್‌ಇಂಡೀಸ್ ಬೌಲರ್ ಸುನಿಲ್ ನಾರಾ ಯಣ್ ಅವರು ವಾರ್ನರ್ ಅವರನ್ನು ಬೌಲ್ಡ್ ಮಾಡಿದರು.

ಶಿಖರ್ ಧವನ್ ಮಾತ್ರ ಹೋರಾಟ ಮುಂದುವರಿಸಿದರು. ನಮನ್ ಓಜಾ (15 ರನ್) ಎರಡನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಸೇರಿಸಿದರು. ಈ ಜೊತೆಯಾಟವನ್ನೂ ಕುಲದೀಪ್ ಮುರಿದರು. 12ನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಧವನ್ ವಿಫಲ ರಾದರು. ಕಾಲಿನ್ ಮನ್ರೊ ಹಿಡಿದ ಆಕ ರ್ಷಕ ಕ್ಯಾಚ್‌ಗೆ ಹೊರ ನಡೆದರು. ಸುನಿಲ್ 13ನೇ ಓವರ್‌ನಲ್ಲಿ ಓಜಾ ಅವರ ವಿಕೆಟ್ ಪಡೆದರು. ಆಗ ಇನ್ನೂ ತಂಡದ ಮೊತ್ತವು ಇನ್ನೂ ನೂರರ ಗಡಿ ಯನ್ನೂ ದಾಟಿರಲಿಲ್ಲ. ಈ ಹಂತದಲ್ಲಿ ಬೌಲಿಂಗ್ ಮತ್ತು ಫೀಲ್ಡಿಂಗ್‌ಅನ್ನು ಮತ್ತಷ್ಟು ಬಿಗಿಗೊಳಿಸಿದ ರೈಡರ್ಸ್ ಸಫಲತೆಯತ್ತ ಹೆಜ್ಜೆ ಹಾಕಿತು.

ಕೇನ್ ವಿಲಿಯಮ್ಸನ್ ಅವರ ವಿಕೆಟ್ ಅನ್ನು ಕುಲದೀಪ್ ಕಬಳಿಸಿದರು. ಸುನಿಲ್ ಮೊಯಿಸಸ್ ಹೆನ್ರಿಕ್ಸ್‌ವಿಕೆಟ್ ಉರುಳಿ ಸಿದರು. ಶಕೀಬ್ ಅಲ್ ಹಸನ್ ಮತ್ತು ಅಂಕಿತ್ ರಜಪೂತ್ ಕೂಡ ತಲಾ ಒಂದು ವಿಕೆಟ್ ಪಡೆದರು. ದೀಪಕ್ ಹೂಡಾ ಅವಸರದ ರನ್ ಪಡೆಯಲು ಹೋಗಿ ರನ್‌ಔಟ್ ಆದರು. ಬದಲೀ ಫೀಲ್ಡರ್ ಆರ್. ಸತೀಶ್ ಎರಡು ಆಕರ್ಷಕ ಕ್ಯಾಚ್ ಪಡೆದು ಮಿಂಚಿದರು.

ಯೂಸುಫ್–ಪಾಂಡೆ ಜೊತೆಯಾಟ: ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ತಂಡವು 7.3 ಓವರ್‌ಗಳಲ್ಲಿ 57 ರನ್‌ಗಳಿಗೆ ಮೂರು ವಿಕೆಟ್ ಕಳೆದು ಕೊಂಡಿತ್ತು. ರಾಬಿನ್ ಉತ್ತಪ್ಪ (25), ಗೌತಮ್ ಗಂಭೀರ್ (16), ಕಾಲಿನ್ ಮನ್ರೊ(10) ಡಗ್‌ಔಟ್‌ಗೆ ಮರಳಿದ್ದರು. ಇದರಿಂದ ತಂಡವು ಅಲ್ಪಮೊತ್ತಕ್ಕೆ ಸರ್ವಪತನ ಕಾಣುವ ಆತಂಕವಿತ್ತು.

ಈ ಹಂತದಲ್ಲಿ ಜೊತೆಗೂಡಿದ ಕರ್ನಾಟಕದ ಮನೀಷ್ ಪಾಂಡೆ (48; 30ಎ, 2ಬೌಂ, 3ಸಿ) ಮತ್ತು ಬರೋ ಡಾದ ಯೂಸುಫ್ ಪಠಾಣ್ (ಔಟಾಗದೆ 52; 34ಎ, 3ಬೌಂ, 2ಸಿ) ನಾಲ್ಕನೇ ವಿಕೆಟ್‌ಗೆ 87 ರನ್ ಸೇರಿಸಿದರು. ಇವರಿಬ್ಬರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಕೆಕೆಆರ್ ಹೋರಾಟದ ಮೊತ್ತ ಪೇರಿಸಿತು.

ಸ್ಕೋರ್‌ಕಾರ್ಡ್‌
ಕೋಲ್ಕತ್ತ ನೈಟ್ ರೈಡರ್ಸ್ 6 ಕ್ಕೆ 171 (20 ಓವರ್‌ಗಳಲ್ಲಿ)

ರಾಬಿನ್ ಉತ್ತಪ್ಪ ಸಿ ಕೇನ್ ವಿಲಿಯಮ್ಸನ್ ಬಿ ಬರೀಂದರ್ ಸರಾನ್ 25
ಗೌತಮ್ ಗಂಭೀರ್ ಸಿ ಮೊಯಿಸೆಸ್ ಹೆನ್ರಿಕ್ಸ್ ಬಿ ದೀಪಕ್ ಹೂಡಾ 16
ಕಾಲಿನ್ ಮನ್ರೊ ಸಿ ನಮನ್ ಓಜಾ ಬಿ ದೀಪಕ್ ಹೂಡಾ 10
ಮನೀಷ್ ಪಾಂಡೆ ಸಿ ಕೇನ್ ವಿಲಿಯಮ್ಸನ್ ಬಿ ಭುವನೇಶ್ವರ್ ಕುಮಾರ್ 48
ಯೂಸುಫ್ ಪಠಾಣ್ ಔಟಾಗದೆ 52
ಜಾಸನ್ ಹೋಲ್ಡರ್ ಸಿ ಮೊಯಿಸೆಸ್ ಹೆನ್ರಿಕ್ಸ್ ಬಿ ಮುಸ್ತಫಿಜರ್ ರೆಹಮಾನ್ 03
ಶಕೀಬ್ ಅಲ್ ಹಸನ್ ಸಿ ನಮನ್ ಓಜಾ ಬಿ ಭುವನೇಶ್ವರಕುಮಾರ್ 07
ಸೂರ್ಯಕುಮಾರ್ ಯಾದವ್ ಔಟಾಗದೆ 06
ಇತರೆ: (ಲೆಗ್‌ಬೈ1, ವೈಡ್ 3) 04
ವಿಕೆಟ್‌ಪತನ: 1–33 (ಉತ್ತಪ್ಪ; 3.4), 2–48 (ಮನ್ರೊ; 5.6), 3–57 (ಗಂಭೀರ್; 7.3), 4–144 (ಪಾಂಡೆ; 15.4), 5–153 (ಹೋಲ್ಡರ್; 16.4), 6–164 (ಶಕೀಬ್; 19.1).
ಬೌಲಿಂಗ್‌: ಭುವನೇಶ್ವರ್ ಕುಮಾರ್ 4–0–31–2, ಬರೀಂದರ್ ಸರಾನ್ 4–0–31–1 (ವೈಡ್ 1), ಕೇನ್ ವಿಲಿಯಮ್ಸನ್ 1–0–7–0, ದೀಪಕ್ ಹೂಡಾ 2–0–16–2, ಕೇದಾರ್ ಶರ್ಮಾ 3–0–39–0, ಮೊಯಿಸೆಸ್ ಹೆನ್ರಿಕ್ಸ್ 2–0–14–0, ಮುಸ್ತಫಿಜರ್ ರೆಹಮಾನ್ 4–0–32–1.
ಸನ್‌ರೈಸರ್ಸ್ ಹೈದರಾಬಾದ್ 8 ಕ್ಕೆ 149 (20 ಓವರ್‌ಗಳಲ್ಲಿ)

ಶಿಖರ್ ಧವನ್ ಸಿ ಕಾಲಿನ್ ಮನ್ರೊ ಬಿ ಕುಲದೀಪ್ ಯಾದವ್ 51
ಡೇವಿಡ್ ವಾರ್ನರ್ ಬಿ ಸುನಿಲ್ ನಾರಾಯಣ್ 18
ನಮನ್ ಓಜಾ ಸಿ ರಾಬಿನ್ ಉತ್ತಪ್ಪ ಬಿ ಸುನಿಲ್ ನಾರಾಯಣ್ 15
ಯುವರಾಜ್ ಸಿಂಗ್ ಸಿ ಸತೀ ಶ್ (ಬದಲಿ ಫೀಲ್ಡರ್) ಬಿ ಶಕೀಬ್ 19
ಕೇನ್ ವಿಲಿಯಮ್ಸನ್ ಸಿ ಸೂರ್ಯಕುಮಾರ್ ಸಿ ಕುಲದೀಪ್ ಯಾದವ್ 07
ದೀಪಕ್ ಹೂಡಾ ರನ್‌ಔಟ್ (ಹಸನ್/ಕುಲದೀಪ್) 02
ಮೊಯಿಸೆಸ್ ಹೆನ್ರಿಕ್ಸ್ ಬಿ ಸುನಿಲ್ ನಾರಾಯಣ್ 11
ಕರಣ್ ಶರ್ಮಾ ಸಿ ಸತೀಶ್ (ಬದಲೀ ಫೀಲ್ಡರ್) ಬಿ ಅಂಕಿತ್ ರಜಪೂರ್ 05
ಬರೀಂದರ್ ಸರಾನ್ ಔಟಾಗದೆ 02
ಇತರೆ:( ಬೈ 1, ಲೆಗ್‌ಬೈ6, ವೈಡ್ 3, ನೋಬಾಲ್ 1 ) 11
ವಿಕೆಟ್‌ಪತನ: 1–28 (ವಾರ್ನರ್; 3.3), 2–86 (ಶಿಖರ್; 11.3), 3–92 (ಓಜಾ; 12.1), 4–110 (ಯುವರಾಜ್; 14.3), 5–115 (ಹೂಡಾ; 15.1), 6–117 (ವಿಲಿಯಮ್ಸನ್; 15.4), 7–136 (ಹೆನ್ರಿಕ್ಸ್; 17.6), 8–144 (ಭುವನೇಶ್ವರ್; 19.1)
ಬೌಲಿಂಗ್‌: ಯೂಸುಫ್ ಪಠಾಣ್ 1–0–4–0, ಅಂಕಿತ್ ರಜಪೂತ್ 3–0–21–1, ಶಕೀಬ್ ಅಲ್ ಹಸನ್ 4–0–34–1 (ವೈಡ್ 2), ಸುನಿಲ್ ನಾರಾಯಣ್ 4–0–26–3, ಜಾಸನ್ ಹೋಲ್ಡರ್ 3–0–21–0 (ನೋಬಾಲ್ 1), ಕಾಲಿನ್ ಮನ್ರೊ 1–0–8–0, ಕುಲದೀಪ್ ಯಾದವ್ 4–0–28–2 (ವೈಡ್ 1).
ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್‌ಗೆ 22 ರನ್‌ಗಳ ಜಯ

ಪಂದ್ಯಶ್ರೇಷ್ಠ: ಯೂಸುಫ್ ಪಠಾಣ್ (ಕೆಕೆಆರ್)

Comments are closed.