ಮನೋರಂಜನೆ

ವಿರಾಟ್ ಕೊಹ್ಲಿಯ ನಾಯಕತ್ವದ ಆಟಕ್ಕೆ ಮಣಿದ ಡೆಲ್ಲಿ ಡೇರ್‌ಡೆವಿಲ್ಸ್‌ ! ಗುಜರಾತ್ ಲಯನ್ಸ್ ವಿರುದ್ಧ ಕ್ವಾಲಿಫೈಯರ್ ಆಡಲು ಅರ್ಹತೆ ಗಿಟ್ಟಿಸಿಕೊಂಡ ರಾಯಲ್ ಚಾಲೆಂಜರ್ಸ್

Pinterest LinkedIn Tumblr

kohli

ರಾಯಪುರ: ವಿರಾಟ್ ಕೊಹ್ಲಿ ಅವರ ದಣಿವರಿಯದ ಆಟಕ್ಕೆ ಭಾನುವಾರ ತಕ್ಕ ಪ್ರತಿಫಲ ಲಭಿಸಿತು. ರಾಯಲ್ ಚಾಲೆಂಜರ್ಸ್ ತಂಡವು ಐಪಿಎಲ್ ಒಂಬತ್ತನೆ ಆವೃತ್ತಿಯ ಪ್ಲೇ ಆಫ್ ಹಂತವನ್ನು ಪ್ರವೇಶಿಸಿತು.

ಇದರೊಂದಿಗೆ ಮೇ 24ರಂದು ತನ್ನ ತವರಿನ ಅಂಗಳದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕ್ವಾಲಿಫೈಯರ್ ಆಡಲು ಅರ್ಹತೆ ಗಿಟ್ಟಿಸಿತು. ಆ ಪಂದ್ಯದಲ್ಲಿ ಜಯಿಸಿದರೆ ಮೇ 29ರಂದು ಚಿನ್ನಸ್ವಾಮಿಯಲ್ಲಿಯೇ ನಡೆಯಲಿರುವ ಫೈನಲ್‌ಪಂದ್ಯದಲ್ಲಿ ಆಡುವ ಅವಕಾಶ ಈಗ ವಿರಾಟ್ ಬಳಗಕ್ಕೆ ಇದೆ.

ರಾಯಪುರದಲ್ಲಿ ಭಾನುವಾರ ರಾತ್ರಿ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವಿಜೃಂಭಿಸಿದ ವಿರಾಟ್ ನೆರವಿನಿಂದ ಆರ್‌ಸಿಬಿ ತಂಡವು 6 ವಿಕೆಟ್‌ಗಳಿಂದ ಡೆಲ್ಲಿ ಡೇರ್‌ಡೆವಿಲ್ಸ್‌ವಿರುದ್ಧ ಗೆದ್ದಿತು. ಉತ್ತಮ ರನ್‌ರೇಟ್‌ನಿಂದಾಗಿ ಪಾಯಿಂಟ್‌ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು.

ohli22

ನಾಕೌಟ್ ಹಂತ ಪ್ರವೇಶಿಸಲು ಎರಡೂ ತಂಡಗಳಿಗೂ ಈ ಪಂದ್ಯ ದಲ್ಲಿ ಗೆಲ್ಲುವುದು ಮಹತ್ವವಾಗಿತ್ತು. ಟಾಸ್ ಗೆದ್ದ ಆರ್‌ಸಿಬಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿತು. ಲೆಗ್‌ಸ್ಪಿನ್ನರ್ ಯಜುವೇಂದ್ರ ಚಹಲ್ (32ಕ್ಕೆ3) ಮತ್ತು ಕ್ರಿಸ್‌ಗೇಲ್ (11ಕ್ಕೆ2) ಅವರ ಉತ್ತಮ ಬೌಲಿಂಗ್‌ನಿಂದಾಗಿ ಡೆಲ್ಲಿ ಡೇರ್‌ಡೆವಿಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 138 ರನ್‌ಗಳ ಮೊತ್ತ ಪೇರಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ (60; 52ಎ, 5ಬೌಂ, 1ಸಿ) ಅರ್ಧಶತಕ ಗಳಿಸಿದರು.

ಸಾಧಾರಣ ಗುರಿಯ ಬೆನ್ನತ್ತಿದ ಆರ್‌ಸಿಬಿ ತಂಡವು ಆರಂಭದಲ್ಲಿಯೇ ಎಡವಿತು. ಕ್ರಿಸ್ ಗೇಲ್ ಮತ್ತು ಎ.ಬಿ. ಡಿವಿಲಿಯರ್ಸ್ ಬೇಗನೆ ಔಟಾಗಿ ಮರಳಿದರು. ಆದರೆ ಈ ಟೂರ್ನಿಯಲ್ಲಿ ಆರನೇ ಅರ್ಧಶತಕ ದಾಖಲಿಸಿದ ನಾಯಕ ವಿರಾಟ್ ಕೊಹ್ಲಿ (ಅಜೇಯ 54; 45ಎ, 6ಬೌಂ ಅವರ ದಿಟ್ಟ ಬ್ಯಾಟಿಂಗ್‌ನಿಂದಾಗಿ ಆರ್‌ಸಿಬಿ 18.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 139 ರನ್‌ಗಳಿಸಿ ಜಯಶಾಲಿಯಾಯಿತು.

ಮತ್ತೆ ಮಿಂಚಿದ ವಿರಾಟ್
ಬೆಂಗಳೂರಿನಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ಇಲೆವನ್ ಪಂದ್ಯದಲ್ಲಿ ಭರ್ಜರಿ ಶತಕ ದಾಖಲಿಸಿದ್ದ ವಿರಾಟ್ ರಾಯಪುರದಲ್ಲಿಯೂ ತಮ್ಮ ರನ್‌ಗಳಿಕೆಯನ್ನು ಮುಂದುವರಿಸಿದರು. ಸುಲಭದ ಗುರಿ ಮುಟ್ಟುವ ಹಾದಿಯಲ್ಲಿ ಮತ್ತೊಂದು ಅರ್ಧಶತಕ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಎರಡನೇ ಓವರ್‌ನಲ್ಲಿಯೇ ಗೇಲ್ ಔಟಾದರು. ಮೂರನೇ ಓವರ್‌ನಲ್ಲಿ ಕೇವಲ ಆರು ರನ್ ಗಳಿಸಿದ್ದ ಎ.ಬಿ. ಡಿವಿಲಿಯರ್ಸ್ ಪೆವಿಲಿಯನ್ ಜಹೀರ್ ಖಾನ್‌ಗೆ ವಿಕೆಟ್ ಒಪ್ಪಿಸಿದರು.

ನಂತರ ಕ್ರೀಸ್‌ಗೆ ಬಂದ ಕರ್ನಾಟಕದ ಹುಡುಗ ಕೆ.ಎಲ್. ರಾಹುಲ್ ನೀರಿಕ್ಷೆ ಹುಸಿಗೊಳಿಸಲಿಲ್ಲ. ನಾಯಕ ವಿರಾಟ್ ಜೊತೆಗೂಡಿದ ರಾಹುಲ್ (38; 23ಎ, 4ಬೌಂ, 1ಸಿ) ಮೂರನೇ ವಿಕೆಟ್‌ಗೆ 66 ರನ್‌ಸೇರಿಸಲು ಕಾರಣರಾದರು. ಚೆಂದದ ಆಟದ ಮೂಲಕ ತಂಡವನ್ನು ಗೆಲುವಿನ ಸಮೀಪ ತಂದರು. ಆದರೆ, 11ನೇ ಓವರ್‌ನಲ್ಲಿ ಬ್ರಾಥ್‌ವೈಟ್ ಹಾಕಿದ ಎಸೆತದಲ್ಲಿ ಬೌಲ್ಡ್‌ಆದರು. ಶೇನ್ ವ್ಯಾಟ್ಸನ್ ಒಂದು ಸಿಕ್ಸರ್ ಇದ್ದ 14 ರನ್ ಗಳಿಸಿ ಪವನ್ ನೇಗಿ ಬೌಲಿಂಗ್‌ನಲ್ಲಿ ಔಟಾದರು.

ನಂತರ ಕರ್ನಾಟಕದ ಮತ್ತೊಬ್ಬ ಆಟಗಾರ ಸ್ಟುವರ್ಟ್ ಬಿನ್ನಿ (ಔಟಾಗದೆ 16; 11ಎ, 2ಬೌಂ) ಅವರು ಕೊಹ್ಲಿ ಜೊತೆಗೆ ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 28 ರನ್‌ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಬೌಲರ್‌ಗಳ ಸಾಧನೆ
ಟೂರ್ನಿಯುದ್ದಕ್ಕೂ ಪರಿಣಾಮ ಕಾರಿ ಬೌಲಿಂಗ್ ಮಾಡುವಲ್ಲಿ ವಿಫಲರಾಗಿದ್ದ ಆರ್‌ಸಿಬಿ ಬೌಲರ್‌ಗಳು ಡೆಲ್ಲಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಕರ್ನಾಟಕದ ಎಸ್. ಅರವಿಂದ್ ತಮ್ಮ ಮೊದಲ ಓವರ್‌ನಲ್ಲಿಯೇ ಆರಂಭಿಕ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ವಿಕೆಟ್ ಪಡೆದರು. ಇದರ ನಂತರ ಹರಿಯಾಣದ ಗೂಗ್ಲಿ ಪರಿಣತ ಯಜುವೇಂದ್ರ ಅವರ ಸ್ಪಿನ್ ಮೋಡಿ ಕಳೆಗಟ್ಟಿತು.

ಮೂರು ದಿನಗಳ ಹಿಂದೆ ಸನ್‌ರೈಸರ್ಸ್‌ಹೈದರಾಬಾದ್ ತಂಡದ ಎದುರು ಭರ್ಜರಿ ಬ್ಯಾಟಿಂಗ್ ಮಾಡಿದ್ದ ಕರುಣ್ ನಾಯರ್ ಅವರಿಗೆ ಹೆಚ್ಚು ಹೊತ್ತು ನಿಲ್ಲಲು ಯಜುವೇಂದ್ರ ಬಿಡಲಿಲ್ಲ. ಆರನೇ ಓವರ್‌ನಲ್ಲಿ ಕರ್ನಾಟಕದ ಕರುಣ್‌ ಬೀಸಿ ಹೊಡೆದ ಚೆಂಡನ್ನು ಮಿಡ್‌ಆಫ್‌ನಲ್ಲಿದ್ದ ವಿರಾಟ್ ಕ್ಯಾಚ್ ಪಡೆದರು. ಆನಂತರ ಕ್ವಿಂಟನ್ ಡಿ ಕಾಕ್ ಏಕಾಂಗಿ ಹೋರಾಟ ನಡೆಸಿದರು. ಆದರೆ ರನ್‌ಗಳಿಕೆಯ ವೇಗವನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ.

ಇನ್ನೊಬ್ಬ ಭರವಸೆಯ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (17 ರನ್) ಅವರು ಚಹಲ್ ಬೌಲಿಂಗ್‌ನಲ್ಲಿ ಕಟ್ ಮಾಡಲು ಯತ್ನಿಸಿ ವಿಕೆಟ್‌ಕೀಪರ್ ರಾಹುಲ್‌ಗೆ ಕ್ಯಾಚಿತ್ತರು. ವೇಗಿ ಕ್ರಿಸ್ ಜೋರ್ಡಾನ್ ಅವರ ಬೌಲಿಂಗ್‌ನಲ್ಲಿ ಸ್ಯಾಮ್ ಬಿಲ್ಲಿಂಗ್ಸ್ (4 ರನ್) ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ‘ಸ್ಫೋಟಕ ಬ್ಯಾಟ್ಸ್‌ಮನ್’ ಕ್ರಿಸ್‌ಗೇಲ್ ಅವರ ಕೈಗೆ ವಿರಾಟ್ ಚೆಂಡು ನೀಡಿದ್ದು ಫಲ ನೀಡಿತು. ಅಪರೂಪಕ್ಕೆ ಸ್ಪಿನ್ ಬೌಲಿಂಗ್ ಮಾಡಿದ ವಿಂಡೀಸ್ ಆಟಗಾರ ಪವನ್ ನೇಗಿ ಮತ್ತು ಕಾರ್ಲೋಸ್ ಬ್ರಾಥ್‌ವೈಟ್ ಅವರ ವಿಕೆಟ್‌ಗಳನ್ನು ಕಬಳಿಸಿದರು.

ಇನ್ನೊಂದೆಡೆ ಅರ್ಧಶತಕ ಗಳಿಸಿ ಆಡುತ್ತಿದ್ದ ಕ್ವಿಂಟನ್ ಅವರ ಆಟಕ್ಕೆ ಚಹಲ್ ತಡೆಯೊಡ್ಡಿದರು. 17ನೇ ಓವರ್‌ನ ಮೊದಲ ಎಸೆತದಲ್ಲಿ ಕ್ರಿಸ್ ಜೋರ್ಡಾನ್ ಅವರು ಪಡೆದ ಆಕರ್ಷಕ ಕ್ಯಾಚ್‌ಗೆ ಕ್ವಿಂಟನ್ ಬ್ಯಾಟಿಂಗ್‌ಗೆ ತೆರೆ ಬಿತ್ತು.

ಹೋದ ತಿಂಗಳು ಉಭಯ ತಂಡಗಳ ನಡುವಣ ನಡೆದಿದ್ದ ಪಂದ್ಯದಲ್ಲಿ ಕ್ವಿಂಟನ್ ಶತಕ ಬಾರಿಸಿ ಆರ್‌ಸಿಬಿ ಸೋಲಿಗೆ ಕಾರಣರಾಗಿದ್ದರು.

ಪ್ಲೇ ಆಫ್‌ವೇಳಾಪಟ್ಟಿ
ಕ್ವಾಲಿಫೈಯರ್ 1
ಗುಜರಾತ್ ಲಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ದಿನಾಂಕ: ಮೇ 24, ಆರಂಭ : ರಾತ್ರಿ 8)

ಎಲಿಮಿನೇಟರ್
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತ ನೈಟ್‌ರೈಡರ್ಸ್ (ಸ್ಥಳ: ಫೀರೋಜ್ ಶಾ ಕೋಟ್ಲಾ, ನವದೆಹಲಿ. ದಿನಾಂಕ: ಮೇ 25, ಆರಂಭ: ರಾತ್ರಿ 8)

ಕ್ವಾಲಿಫೈಯರ್ 2 (ಮೇ 27)
ಕ್ವಾಲಿಫೈಯರ್ 1ರಲ್ಲಿ ಸೋತ ತಂಡದ ವಿರುದ್ಧ ಎಲಿಮಿನೇಟರ್‌ನಲ್ಲಿ ಗೆದ್ದ ತಂಡ (ಸ್ಥಳ: ನವದೆಹಲಿ)

ಫೈನಲ್ (ಮೇ 29)
ಸ್ಥಳ: ಬೆಂಗಳೂರು

ಸ್ಕೋರ್‌ಕಾರ್ಡ್‌
ಡೆಲ್ಲಿ ಡೇರ್‌ಡೆವಿಲ್ಸ್ 8 ಕ್ಕೆ 138 (20 ಓವರ್‌ಗಳಲ್ಲಿ)

ಕ್ವಿಂಟನ್ ಡಿ ಕಾಕ್ ಸಿ ಕ್ರಿಸ್ ಜೋರ್ಡಾನ್ ಬಿ ಯಜುವೇಂದ್ರ ಚಹಲ್ 60
ರಿಷಭ್ ಪಂತ್ ಸಿ ರಾಹುಲ್ ಬಿ ಅರವಿಂದ್ 01
ಕರುಣ್ ನಾಯರ್ ಸಿ ವಿರಾಟ್ ಕೊಹ್ಲಿ ಬಿ ಯಜುವೇಂದ್ರ ಚಹಲ್ 11
ಸಂಜು ಸ್ಯಾಮ್ಸನ್ ಸಿ ರಾಹುಲ್ ಬಿ ಯಜುವೇಂದ್ರ ಚಹಲ್ 17
ಸ್ಯಾಮ್ ಬಿಲ್ಲಿಂಗ್ಸ್ ಸಿ ಕ್ರಿಸ್ ಗೇಲ್ ಬಿ ಕ್ರಿಸ್ ಜೋರ್ಡಾನ್ 04
ಪವನ್ ನೇಗಿ ಸಿ ಡಿವಿಲಿಯರ್ಸ್ ಬಿ ಕ್ರಿಸ್ ಗೇಲ್ 06
ಕಾರ್ಲೋಸ್ ಬ್ರಾಥ್‌ವೈಟ್ ಸಿ ಶೇನ್ ವ್ಯಾಟ್ಸನ್ ಬಿ ಕ್ರಿಸ್ ಗೇಲ್ 01
ಕ್ರಿಸ್ ಮೊರಿಸ್ ಔಟಾಗದೆ 27
ಜಯಂತ್ ಯಾದವ್ ರನ್‌ಔಟ್ (ಚಹಲ್/ರಾಹುಲ್) 05
ಇತರೆ: (ಲೆಗ್‌ಬೈ1, ವೈಡ್ 4, ನೋಬಾಲ್ 1) 06
ವಿಕೆಟ್‌ಪತನ: 1–11 (ಪಂತ್; 1.2), 2–42 (ನಾಯರ್; 5.3), 3–71 (ಸ್ಯಾಮ್ಸನ್; 9.3), 4–81 (ಬಿಲ್ಲಿಂಗ್ಸ್; 11.2). 5–96 (ನೇಗಿ; 14.3), 6–98 (ಬ್ರಾಥ್‌ವೈಟ್; 14.6), 7–107 (ಡಿಕಾಕ್; 16.1), 8–138 (ಯಾದವ್; 19.6).
ಬೌಲಿಂಗ್‌: ಸ್ಟುವರ್ಟ್ ಬಿನ್ನಿ 2–0–15–0 (ವೈಡ್ 1), ಎಸ್. ಅರವಿಂದ್ 4–0–28–1, ಕ್ರಿಸ್ ಜೋರ್ಡಾನ್ 2–0–10–1 (ನೋಬಾಲ್ 1), ಶೇನ್ ವ್ಯಾಟ್ಸನ್ 4–0–27–0, ಯಜುವೇಂದ್ರ ಚಹಲ್ 4–0–32–3 (ವೈಡ್ 1), ಇಕ್ಬಾಲ್ ಅಬ್ದುಲ್ಲಾ 2–0–14–0, ಕ್ರಿಸ್ ಗೇಲ್ 2–0–11–2 (ವೈಡ್ 2).

ಆರ್‌ಸಿಬಿ 4 ಕ್ಕೆ 139 (18.1 ಓವರ್‌ಗಳಲ್ಲಿ)

ಕ್ರಿಸ್‌ಗೇಲ್‌ಬಿ ಕ್ರಿಸ್‌ಮೊರಿಸ್‌ 01
ವಿರಾಟ್‌ಕೊಹ್ಲಿ ಔಟಾಗದೆ 54
ಎಬಿ ಡಿವಿಲಿಯರ್ಸ್‌ಸಿ ಜಯಂತ್‌ಯಾದವ್‌ಬಿ ಜಹೀರ್‌ಖಾನ್‌ 06
ಕೆ.ಎಲ್‌.ರಾಹುಲ್‌ಬಿ ಕಾರ್ಲೊಸ್‌ಬ್ರಾಥ್‌ವೈಟ್‌ 38
ಶೇನ್‌ವ್ಯಾಟ್ಸನ್‌ಸಿ ಸ್ಯಾಮ್‌ಬಿಲ್ಲಿಂಗ್ಸ್‌ಬಿ ಪವನ್‌ನೇಗಿ 14
ಸ್ಟುವರ್ಟ್‌ಬಿನ್ನಿ ಔಟಾಗದೆ 16
ಇತರೆ:( ವೈಡ್ 10) 10
ವಿಕೆಟ್‌ಪತನ: 1–5 (ಗೇಲ್‌; 1.1), 2–17 (ಡಿವಿಲಿಯರ್ಸ್‌; 2.4), 3–83 (ರಾಹುಲ್‌; 10.1), 4–111 (ವ್ಯಾಟ್ಸನ್‌; 14.6).
ಬೌಲಿಂಗ್‌: ಜಹೀರ್‌ಖಾನ್‌4–0–30–1, ಕ್ರಿಸ್‌ಮೊರಿಸ್‌3–0–31–1, ಪವನ್‌ನೇಗಿ 3–0–19–1, ಅಮಿತ್‌ಮಿಶ್ರಾ 4–0–33–0, ಜಯಂತ್‌ಯಾದವ್‌1–0–8–0, ಕಾರ್ಲೊಸ್‌ಬ್ರಾಥ್‌ವೈಟ್‌3.1–0–18–1.
ಫಲಿತಾಂಶ: ರಾಯಲ್‌ಚಾಲೆಂಜರ್ಸ್‌ಬೆಂಗಳೂರು ತಂಡಕ್ಕೆ 6 ವಿಕೆಟ್‌ಜಯ.

ಪಂದ್ಯಶ್ರೇಷ್ಠ: ವಿರಾಟ್‌ಕೊಹ್ಲಿ.

Comments are closed.