ಮನೋರಂಜನೆ

ಕರುಣ್, ಕೃಣಾಲ್‌ಗೆ ಅವಕಾಶ ನಿರೀಕ್ಷೆ; ಜಿಂಬಾಬ್ವೆ ಪ್ರವಾಸಕ್ಕೆ ಇಂದು ತಂಡದ ಆಯ್ಕೆ

Pinterest LinkedIn Tumblr

krunal-pandya

ಮುಂಬೈ (ಪಿಟಿಐ): ಕರ್ನಾಟಕದ ಕರುಣ್ ನಾಯರ್ ಮತ್ತು ಬರೋಡಾದ ಕೃಣಾಲ್ ಪಾಂಡ್ಯ ಅವರು ಜಿಂಬಾಬ್ವೆಗೆ ತೆರಳಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಇದೆ.

ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರು ಸ್ಥಾನ ಗಳಿಸುವ ಸಾಧ್ಯತೆ ಇದೆ. ಸೋಮವಾರ ತಂಡದ ಆಯ್ಕೆ ನಡೆಯಲಿದೆ.

ಏಕದಿನ ಮತ್ತು ಟ್ವೆಂಟಿ–20 ಸರಣಿಗಳಲ್ಲಿ ತಂಡವು ಆಡಲಿದೆ. ಮಹೇಂದ್ರಸಿಂಗ್ ದೋನಿ ನಾಯಕತ್ವದ ತಂಡದಲ್ಲಿ ಯುವ ಆಟಗಾರರು ಸ್ಥಾನ ಪಡೆಯುವ ಸಾಧ್ಯತೆ ಇದೆ.

ಜಿಂಬಾಬ್ವೆ ಪ್ರವಾಸದಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್. ಅಶ್ವಿನ್ ಮತ್ತು ಶಿಖರ್ ಧವನ್ ಅವರಿಗೆ ವಿಶ್ರಾಂತಿ ನೀಡುವ ನಿರೀಕ್ಷೆಗಳಿವೆ.

Comments are closed.