ರಾಷ್ಟ್ರೀಯ

ಇಸ್ರೋದಿಂದ ಮತ್ತೊಂದು ಮೈಲಿಗಲ್ಲು: ಸ್ವದೇಶಿ ನಿರ್ಮಿತ ಬಾಹ್ಯಾಕಾಶ ನೌಕೆಯ ಯಶಸ್ವೀ ಉಡಾವಣೆ

Pinterest LinkedIn Tumblr

swadeshi-space-shuttlle

ಶ್ರೀಹರಿಕೋಟಾ: ದೇಶದ ಬಾಹ್ಯಾಕಾಶ ತಂತ್ರಜ್ಞಾನ ಇತಿಹಾಸದಲ್ಲೇ ದಾಖಲೆಯ ಕ್ಷಣಕ್ಕೆ ಸೋಮವಾರ ಇಸ್ರೋ ಸಾಕ್ಷಿಯಾಗಿದ್ದು, ಇದೇ ಮೊದಲ ಭಾರಿಗೆ ಸ್ವದೇಶಿ ನಿರ್ವಿುತ ಬಾಹ್ಯಾಕಾಶ ನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಅಭಿವೃದ್ಧಿಪಡಿಸಿರುವ ಸುಮಾರು 1.7 ಟನ್ ತೂಕವಿರುವ ಈ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆ (ಆರ್ಎಲ್ ವಿ-ಟಿಡಿ)ಯನ್ನು ಉಡಾವಣೆ ಮಾಡಲಾಯಿತು. ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರಿಯಲ್ಲಿಯೇ ಪೂರ್ವಭಾವಿ ಪರೀಕ್ಷೆ ನಡೆಸಿ, ಅದರ ಕಾರ್ಯಕ್ಷಮತೆ ಮತ್ತು ವಿಮಾನ ನಿಯಂತ್ರಣ ಪರೀಕ್ಷೆಯನ್ನು ನಡೆಸಲಾಗಿದೆ. ಮಾನವರಹಿತ ಬಾಹ್ಯಾಕಾಶ ಯೋಜನೆಗಳಿಗೆ ಈ ನೌಕೆ ಸಹಕಾರಿ ಎಂದು ವಿಜ್ಞಾನಿಗಳು ವಿವರಿಸಿದ್ದು, ಇದು ಅಮೆರಿಕದ ನೌಕೆಗಿಂತ ಆರು ಪಟ್ಟು ಚಿಕ್ಕದಾಗಿದೆ.

ಪ್ರಸ್ತುತ ಇಸ್ರೋ ಉಪಗ್ರಹ ಉಡಾವಣೆಗೆ ದುಬಾರಿ ವೆಚ್ಚದ ರಾಕೆಟ್ ಗಳನ್ನು ಅವಲಂಭಿಸಿದ್ದು, ಪ್ರಸ್ತುತ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆಯಿಂದಾಗಿ ಈ ಶೇ.10ರಷ್ಟು ವೆಚ್ಚ ತಗ್ಗುತ್ತದೆ. ರಾಕೆಟ್ ಮೂಲಕ ಒಂದು ಕೆ.ಜಿ ತೂಕದ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲು 13.30 ಲಕ್ಷ ರೂ.ವೆಚ್ಚ ತಗುಲಲಿದೆ. ಆದರೆ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡಲ್ಲಿ ಈ ಮೊತ್ತ ಕೇವಲ 1.30 ಲಕ್ಷ ರೂ.ಗೆ ತಗ್ಗಲಿದೆ. ಇದರ ಜತೆಗೆ ರಾಕೆಟ್ಗಳನ್ನು ಮರುಬಳಸುವುದು ಅಸಾಧ್ಯ. ಆದರೆ ಬಾಹ್ಯಾಕಾಶ ನೌಕೆಗಳು ಮರು ಬಳಕೆಗೂ ಸಿಗುತ್ತವೆ. ಮುಖ್ಯವಾಗಿ ಮಾನವಸಹಿತ ಬಾಹ್ಯಾಕಾಶ ಯೋಜನೆಗಳಿಗೆ ಈ ನೌಕೆ ಹೆಚ್ಚು ಸಹಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪರೀಕ್ಷೆಯ ಉದ್ದೇಶವೇನು?
ಪ್ರಸ್ತುತ ಇಸ್ರೋ ಸಿದ್ಧಪಡಿಸಿರುವ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶನೌಕೆಯ ಪ್ರಮುಖ ಉದ್ದೇಶವೇ ಈ ನೌಕೆಯು ಯಾವ ರೀತಿ ಆಗಸದಿಂದ ಬಂದು ಭೂಮಿಯ ಮೇಲೆ ಇಳಿಯುತ್ತದೆ, ನಿರ್ದಿಷ್ಟ ಸ್ಥಳವನ್ನು ಹೇಗೆ ತಲುಪುತ್ತದೆ ಎಂಬುದನ್ನು ತಿಳಿಯುವುದಾಗಿದೆ. ಸಮುದ್ರದ ಮೇಲೆ ಇಳಿಯುವ ವ್ಯವಸ್ಥೆಯನ್ನು ಇದಕ್ಕೆ ಮಾಡಲಾಗಿಲ್ಲ. ಹೀಗಾಗಿ ಸಮುದ್ರಕ್ಕೆ ಇಳಿಯು ತ್ತಿದ್ದಂತೆಯೇ ಈ ನೌಕೆಯು ಒಡೆದು ಚೂರಾಗಲಿದೆ. ಯೋಜನೆಯ ಅಂತಿಮ ಹಂತದಲ್ಲಿ ರೆಕ್ಕೆಗಳನ್ನು ಹೊಂದಿರುವ ನೌಕೆಯು ಶ್ರೀಹರಿಕೋಟಾದಲ್ಲಿರುವ ನೌಕಾನೆಲೆಗೆ ಸುರಕ್ಷಿತವಾಗಿ ಬಂದು ಇಳಿಯಲಿದೆ ಎಂದು ಇಸ್ರೋ ವಿಜ್ಞಾನಿ ಕಿರಣ್ಕುಮಾರ್ ವಿವರಿಸಿದ್ದಾರೆ.

ಭಾರತಕ್ಕೇನು ಲಾಭ ?
ರಾಕೆಟ್ಗಳ ಉಡಾವಣೆಗಾಗಿ ಇಸ್ರೋ ಪ್ರತಿ ವರ್ಷ 300 ಕೋಟಿ ರು. ವ್ಯಯಿಸುತ್ತಿದೆ. ಸಾಂಪ್ರದಾಯಿಕ ರಾಕೆಟ್ ಬಳಸಿ ಒಂದು ಕೆ.ಜಿ.ತೂಕದ ವಸ್ತುವನ್ನು ಬಾಹ್ಯಾಕಾಶಕ್ಕೆ ಕಳುಹಿಸಲು 20 ಸಾವಿರ ಡಾಲರ್ (13.30 ಲಕ್ಷ ರೂ) ವ್ಯಯಿಸಬೇಕು. ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡರೆ 10 ಪಟ್ಟು ಖರ್ಚು ಉಳಿತಾಯವಾಗಲಿದೆ. ಉಪಗ್ರಹ ಉಡಾವಣಾ ವಾಹನ ಮರುಬಳಕೆ ಸಾಧ್ಯವಾದರೆ, ಉಪಗ್ರಹ ಯೋಜನೆಯನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದಾಗಿದೆ.

Comments are closed.