ಕನ್ನಡ ವಾರ್ತೆಗಳು

ಸಾಸ್ತಾನ: ಯಡಬೆಟ್ಟು ಎಂಬಲ್ಲಿ ಕೃಷಿ ಭೂಮಿಗೆ ಬೆಂಕಿ; ಬೆಂಕಿನಂದಿಸಿದ ಅಗ್ನಿಶಾಮಕದಳ ಹಾಗೂ ಸ್ಥಳೀಯರು

Pinterest LinkedIn Tumblr

ಕುಂದಾಪುರ: ಭಾನುವಾರ ಸಂಜೆ ಯಡಬೆಟ್ಟು ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಹಡೋಲು ಬಿಡಲಾಗಿದ್ದ ಕೃಷಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 7 ಎಕರೆ ವರೆಗೆ ಬೆಂಕಿ ವ್ಯಾಪಿಸಿದ ಘಟನೆ ನಡೆದಿದೆ. ಆಗ್ನಿಶಾಮಕದಳ ಮತ್ತು 50ಕ್ಕೂ ಅಧಿಕ ಮಂದಿ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಲಾಯಿತು.

Sasthana_Fire_Incident (2) Sasthana_Fire_Incident (1)

ಸಂಜೆ 5 ಗಂಟೆರ ಸುಮಾರು ಚಿಕ್ಕದಾಗಿ ಕಾಣಿಸಿಕೊಂಡ ಬೆಂಕಿ ಗಾಳಿಗೆ ಮೆಲ್ಲನೆ ಹಬ್ಬಿ, ಯಡಬೆಟ್ಟು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿಯವರೆಗೆ ಸುಮಾರು 7 ಎಕರೆ ಜಾಗದವರೆಗೆ ಆಕ್ರಮಿಸಿ, ಅಷ್ಟು ಜಾಗದಲ್ಲಿದ್ದ ಒಣಗಿದ ಹುಲ್ಲು ಕಡ್ಡಿಗಳನ್ನು ಸುಟ್ಟು ಹಾಕುತ್ತಾ ಸಾಗಿತ್ತು. ಬೆಂಕಿ ತೀವ್ರತೆ ಹೆಚ್ಚುತ್ತಿರುವುದನ್ನು ಗಮನಿಸಿ ಸ್ಥಳೀಯರು ಹಸಿ ಮರದ ಕೊಂಬೆಗಳ ಮೂಲಕ ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಕೂಡ, ಬೆಂಕಿ ನಿಧಾನವಾಗಿ ಮುಂದುವರಿಯುತ್ತಾ ಸಾಗಿತ್ತು. ಬಳಿಕ ಕುಂದಾಪುರ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಯಿಸಲಾಯಿತು. ಸುಮಾರು 1 ಗಂಟೆಗಳ ಹರಸಾಹಸದ ಬಳಿಕ ಬೆಂಕಿ ಸಂಪೂರ್ಣ ನಂದಿಸುವಲ್ಲಿ ಆಗ್ನಿಶಾಮಕ ಇಲಾಖೆ ಸಫಲವಾಯಿತು.

ಘಟನಾಸ್ಥಳಕ್ಕೆ ಪಾಂಡೇಶ್ವರ ಪಂಚಾಯಿತಿ ಅಧ್ಯಕ್ಷ ಗೋವಿಂದ ಉಪಸ್ಥಿತರಿದ್ದ, ಸ್ವತಃ ಬೆಂಕಿ ನಂದಿಸುವ ಕಾರ್‍ಯದಲ್ಲಿ ಇಲಾಖೆಗೆ ಸಹಕರಿಸಿದರು. ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ನಾಗರಾಜ್ ಪೂಜಾರಿ, ಮುಸ್ತಾಫ, ಕೆ.ಎನ್. ಮೊಗೇರಾ, ರವೀಂದ್ರ ದೇವಾಡಿಗ, ಸಂತೋಷ ಶೆಟ್ಟಿ ಮತ್ತು ಉಡುಪಿ ಜಿಲ್ಲಾ ಪ್ರಭಾರ ಅಗ್ನಿಶಾಮಕ ಅಧಿಕಾರಿ ಭರತ್ ಕುಮಾರ್ ಕಾರ್‍ಯಚರಣೆಯಲ್ಲಿ ಭಾಗಿಯಾಗಿದ್ದರು.

Comments are closed.