ಕರ್ನಾಟಕ

ಜಗದೀಶ್ ಶೆಟ್ಟರ್‌ರಿಂದ ಜಾತಿಯ ಹೆಸರಲ್ಲಿ ಕಳ್ಳರ ರಕ್ಷಣೆ: ಎಚ್.ಕೆ.ಪಾಟೀಲ್ ಕಿಡಿ

Pinterest LinkedIn Tumblr

patilಬೆಂಗಳೂರು: ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಜಾತಿಯ ಹೆಸರಿನಲ್ಲಿ ಕಳ್ಳರನ್ನು ರಕ್ಷಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ಬಿಜೆಪಿಯ ಅವಧಿಯಲ್ಲಿ ಕಳ್ಳಗಂಟು ಇಟ್ಟಿರುವ ಅಧಿಕಾರಿಗಳನ್ನು ಜಗದೀಶ್ ಶೆಟ್ಟರ್ ರಕ್ಷಿಸಿ, ಕಳ್ಳರ ಪರ ವಕಾಲತ್ತು ವಹಿಸುತ್ತಿದ್ದಾರೆ. ಇಂತಹ ಕಳ್ಳರ ವಿರುದ್ಧ ಕ್ರಮ ತೆಗೆದುಕೊಳ್ಳುವಾಗ ಅವರು ವಿರೋಧ ವ್ಯಕ್ತ ಪಡೆಸುತ್ತಾರೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇದೆ ವೇಳೆ ಮಾತನಾಡಿದ ಸಚಿವರು, ಗ್ರಾಮೀಣಾಭಿವೃದ್ಧಿ ವಿವಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, 166 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿ ನಿರ್ಮಾಣವಾಗಲಿದೆ. ಈ ಕುರಿತು ಈಗಾಗಲೇ ಭೂಸ್ವಾಧೀನ ಕಾರ್ಯ ಆರಂಭವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Comments are closed.