ಮನೋರಂಜನೆ

ಶೀಘ್ರದಲ್ಲಿ ಮದುವೆಯಾಗುವ ಪ್ಲ್ಯಾನ್ ಇಲ್ಲ ಎಂದ ಲೂಲಿಯಾ

Pinterest LinkedIn Tumblr

luliyaಮುಂಬೈ: ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆ ಲೂಲಿಯಾ ಪ್ರತಿಕ್ರಿಯೆ ನೀಡಿದ್ದಾರೆ.. ರೂಮರ್ಸ್ ಬಗ್ಗೆ ರಿಯಾಕ್ಟ್ ಮಾಡಲು ನನಗೆ ಇಷ್ಟವಿಲ್ಲ..ಅರ್ಜೆಂಟಾಗಿ ಮದುವೆಯಾಗುವ ಪ್ಲ್ಯಾನ್ ಇಲ್ಲ ಎಂದು ಹೇಳಿದ್ದಾರೆ.

ಅರ್ಜೆಂಟಾಗಿ ನಾನು ಮದುವೆಯಾಗುವ ಆಸೆಯಿಲ್ಲ, ಇನ್ನೂ ಅರ್ಜೆಂಟಾಗಿ ಮದುವೆ ಡ್ರೆಸ್ ಧರಿಸುವ ಯಾವುದೇ ಪ್ಲ್ಯಾನ್‌ಗಳಿಲ್ಲ ಎಂದು ಲೂಲಿಯಾ ಹೇಳಿದ್ದಾಳೆ..

ಈ ಹಿಂದೆ ಲೂಲಿಯಾಳ ಮದುವೆಯಾಗಿದೆ ಎಂದು ಹೇಳಲಾಗಿತ್ತು. ಈ ಕಾರಣಕ್ಕಾಗಿ ಲೂಲಿಯಾ ತನ್ನ ಮದುವೆಯಾಗಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.

ಆದರೆ ಸಲ್ಮಾನ್ ಖಾನ್ ಹಾಗೂ ಲೂಲಿಯಾ ತಮ್ಮಿಬ್ಬರ ಸಂಬಂಧದ ಬಗ್ಗೆ ಯಾವತ್ತು ಪ್ರತಿಕ್ರಿಯೆ ನೀಡಿರಲಿಲ್ಲ.. ಮುಂಬೈ ಏರ್‌ಪೋರ್ಟ್‍‌ನಲ್ಲಿ ಸಲ್ಮಾನ್ ತಾಯಿ ಸಲ್ಮಾ ಜತೆ ಲೂಲಿಯಾ ಕಾಣಿಸಿಕೊಂಡಾಗಲೇ ಸಲ್ಮಾನ್ -ಲೂಲಿಯಾ ಮದುವೆ ಕುರಿತಂತೆ ರೂಮರ್ಸ್ ಹರಡಿತ್ತು..

ಅಲ್ಲದೇ ಪ್ರೀತಿ ಜಿಂಟಾ ರಿಶಪ್ಶನ್ ವೇಳೆಯಲ್ಲಿಯೂ ಈ ಎರಡು ಜೋಡಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದವು.. ಹಾಗೇ ಡಿಸೆಂಬರ್ 27ಕ್ಕೆ ಇವರಿಬ್ಬರ ಮದುವೆಯಾಗ್ತಿದ್ದಾರೆ ಎಂದು ಹೇಳಲಾಗ್ತಿದೆ.

Comments are closed.