ರಾಷ್ಟ್ರೀಯ

ಸೋನಿಯಾಜಿ ಒಗ್ಗೂಡಿಸುವ ಅಂಶವಿದ್ದಂತೆ – ವೆಂಕಯ್ಯ ನಾಯ್ಡು

Pinterest LinkedIn Tumblr

soದೆಹಲಿ: ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಧಾನಕ್ಕೆ ಏರಿಸಬಹುದು ಎಂಬ ಊಹಾಪೋಹಗಳ ಮಧ್ಯೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಸೋನಿಯಾ ಗಾಂಧಿ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

‘ಸೋನಿಯಾ ಗಾಂಧಿಯವರು ಕಾಂಗ್ರೆಸ್ಸಿನ ಒಗ್ಗೂಡಿಸುವ ಅಂಶ, ಅವರಿಲ್ಲದೇ ಹೋಗಿದ್ದರೆ ಪಕ್ಷ ಛಿದ್ರವಾಗುತ್ತಿತ್ತು’ ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. ಸೋನಿಯಾಜಿ ಕಾರಣದಿಂದ ಕಾಂಗ್ರೆಸ್ ಏಕತೆಯಿಂದ ಇದೆ ಅಷ್ಟೆ. ಇಲ್ಲದೇ ಇದ್ದರೆ ಅದು ಛಿದ್ರವಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ವಂಶಾಡಳಿತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ವಂಶಾಡಳಿತ ಅಸಹ್ಯವಾದದ್ದು, ಆದರೆ ಕೆಲ ಮಂದಿ ಹಾಗೂ ಕಾಂಗ್ರೆಸ್ಸಿಗರಿಗೆ ಅದು ಇಷ್ಟವಾದದ್ದು, ಆದರೆ ವಾಸ್ತವವನ್ನು ಅಂಗೀಕರಿಸಲೆಬೇಕು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

Comments are closed.