ಅಂತರಾಷ್ಟ್ರೀಯ

ಎರಡು ದಿನಗಳ ಇರಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ

Pinterest LinkedIn Tumblr

modiಇರಾನ್: ಪ್ರಧಾನಮಂತ್ರಿ ನರೇಂದ್ರ ಮೋದ ಎರಡು ದಿನಗಳ ಕಾಲ ಇರಾನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇರಾನ್ ಅಧ್ಯಕ್ಷ ಹಸನ್ ರೌಹಾನಿ ಆಮಂತ್ರಣದ ಮೇರೆಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ ಮೋದಿ.

ಇರಾನ್‌ಗೆ ಮೋದಿ ಆಗಮನದ ಹಿನ್ನೆಲೆ , ಮೋದಿ ಸ್ವಾಗತಕ್ಕಾಗಿ ಇರಾನ್‌ನಲ್ಲಿ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಎಂದು ತಿಳಿದು ಬಂದಿದೆ. ಈ ವೇಳೆ ಮೋದಿ ಬಂದರು ಒಪ್ಪಂದಕ್ಕೆ ಆದ್ಯತೆ ನೀಡುವ ನಿರೀಕ್ಷೆಗಳಿವೆ.

ಇನ್ನೂ ಪಿಎಂ ಮೋದಿ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಜತೆಗೆ ಸರ್ವೋಚ್ಛ ನಾಯಕ ಅಲಿ ಖೊಮೇನಿ ಜತೆಗೆ ಮಾತುಕತೆ ನಡೆಸಲಿದ್ದಾರೆ. ಈ ಮಧ್ಯೆ ಭಾರತ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧ ಮುಂದುವರಿಸುವ ನಿಟ್ಟಿನಲ್ಲಿ ಹಲವು ಅವಕಾಶಗಳನ್ನು ನಿರೀಕ್ಷಿಸಲಾಗಿದೆ.

Comments are closed.