ಕರ್ನಾಟಕ

ಮೌಂಟ್ ಎವರೆಸ್ಟ್ ಶಿಖರ ಏರಿ ಸಾಧನೆ ಮಾಡಿದ ಮೊದಲ ಐಎಫ್​ಎಸ್ ಅಧಿಕಾರಿ

Pinterest LinkedIn Tumblr

prabhakaran

ಕೊಪ್ಪಳ: ಇಲ್ಲಿನ ವಲಯ ಅರಣ್ಯಾಧಿಕಾರಿ ಪ್ರಭಾಕರನ್ ಇತ್ತೀಚೆಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿ, ಈ ಸಾಧನೆ ಮಾಡಿದ ಮೊದಲ ಐಎಫ್ಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಾಲ್ಯದಿಂದಲೂ ಕ್ರೀಡೆ ಮತ್ತು ಚಾರಣದಲ್ಲಿ ಆಸಕ್ತಿ ಹೊಂದಿದ್ದ ತಮಿಳುನಾಡು ಮೂಲದ 2012ನೇ ಬ್ಯಾಚ್ನ ಐಎಫ್ಎಸ್ ಅಧಿಕಾರಿ ಎಸ್.ಪ್ರಭಾಕರನ್ಎವರೆಸ್ಟ್ ಶಿಖರವನ್ನೇರುವ ಕನಸು ಕಂಡಿದ್ದರು.

2015ರಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳ ತಂಡದೊಂದಿಗೆ ಮೌಂಟ್ ಎವರೆಸ್ಟ್ ಚಾರಣಕ್ಕೆ ತೆರಳಿದ್ದರು. ಆದರೆ, ಭಾರಿ ಮಳೆ, ಭೂಕಂಪ ಹಾಗೂ ಭಾರಿ ಹಿಮಪಾತದಿಂದಾಗಿ 7,100 ಅಡಿಗಳಿಗೆ ಚಾರಣ ಕೊನೆಗೊಳಿಸಿ ತಂಡ ಹಿಂದಿರುಗಿತ್ತು. ಆದರೆ ಈ ಬಾರಿ ಹಿಮಾಲಯದ ನೆತ್ತಿ ತಲುಪಲೇ ಬೇಕೆಂಬ ಹಠದೊಂದಿಗೆ ಏ.1ರಂದು ಚಾರಣಕ್ಕೆ ಮುಂದಾಗಿದ್ದರು. ಮೇ 20ರ ಬೆಳಗ್ಗೆ ಹಿಮಾಲಯದ ನೆತ್ತಿ ಮೇಲೇರಿದ ಸಾಧನೆ ಮಾಡಿದ್ದಾರೆ.

ಪ್ರಭಾಕರನ್ ಅವರಿಗೆ ಮೊದಲಿನಿಂದಲೂ ಕ್ರೀಡೆ, ಪ್ರವಾಸ, ಚಾರಣ ಎಂದರೆ ಪಂಚಪ್ರಾಣ. ಕಳೆದ ವರ್ಷವೇ ಎವರೆಸ್ಟ್ ಶಿಖರವೇರಲು ತುಂಬಾ ಶ್ರಮಿಸಿದ್ದರು. ಆದರೆ, ಹವಾಮಾನ್ಯ ವೈಪರೀತ್ಯದ ಕಾರಣ ಸಾಧ್ಯವಾಗಿರಲಿಲ್ಲ. ಈ ಬಾರಿ ಯಶ ಕಂಡಿದ್ದಾರೆ. ಇದೊಂದು ಐತಿಹಾಸಿಕ ಕ್ಷಣ. ಈ ಸುದ್ದಿ ಕೇಳಿ ಅತೀವ ಆನಂದವಾಗಿದೆ.-ಎ.ಎಚ್.ಮುಲ್ಲಾ ಆರ್ಎಫ್ಒ ಕೊಪ್ಪಳ

Comments are closed.