ಕರ್ನಾಟಕ

ರಸ್ತೆ ಸುರಕ್ಷತೆ ಸಾರಿಗೆ ಸಚಿವರ ಚರ್ಚೆ

Pinterest LinkedIn Tumblr

20j7a

ಬೆಂಗಳೂರು, ಮೇ ೨೦- ರಸ್ತೆ ಸುರಕ್ಷತೆಗಾಗಿ ಹಾಗೂ ರಸ್ತೆ ಸಾರಿಗೆ ಕುರಿತ ಹೊಸ ಕಾನೂನು ಜಾರಿ ತರುವ ಸಲುವಾಗಿ ನಗರದಲ್ಲಿಂದು ನಡೆದ ರಾಷ್ಟ್ರ ಮಟ್ಟದ ಸಾರಿಗೆ ಸಚಿವರು ಸಭೆಯಲ್ಲಿ ವಿವಿಧ ರಾಜ್ಯದ ಸಾರಿಗೆ ಸಚಿವರು ಪಾಲ್ಗೊಂಡು ಮಹತ್ವ ಚರ್ಚೆ ನಡೆಸಿದರು.
ಪ್ರಸುತ್ತ ದೇಶದಲ್ಲಿ ಅನೇಕ ರೀತಿಯ ವಾಹನಗಳು ನೂತನ ತಂತ್ರಜ್ಞಾನದೊಂದಿಗೆ ತಯಾರಾಗಿ ರಸ್ತೆ ಮೇಲೆ ಚಲಿಸುತ್ತಿದೆ. ಆದರೆ ರಸ್ತೆ ನಿಯಮ ಪಾಲಿಸುವಲ್ಲಿ ಆಗಿರುವ ತಪ್ಪುಗಳು ಅವುಗಳ ತಿದ್ದುಪಡಿ ಕುರಿತು ಇಂದು ನಗರದಲ್ಲಿ ನಡೆದ ವಿವಿಧ ರಾಜ್ಯಗಳ ಸಾರಿಗೆ ಸಚಿವರ ಸಭೆಯಲ್ಲಿ ರಸ್ತೆ ಸುರಕ್ಷ ಕುರಿತು ಹಲವು ಕ್ರಮಗಳನ್ನು ಕೈಗೊಳ್ಳವ ಸಂಬಂಧ ಚರ್ಚೆ ನಡೆಸಲಾಯಿತು. ಮುಂದಿನ ವರ್ಷದಲದಲ್ಲಿ ರಸ್ತೆ ಸುರಕ್ಷೆಗಾಗಿ ಮೋಟಾರ್ ಕಾಯ್ದೆ ೧೯೮೮ನ್ನು ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡಿ ಜಾರಿ ತಂದು ಜನರಿಗೆ ಸೌಕರ್ಯ ಒದಗಿಸುವ ಪ್ರಯತ್ನ ಇದಾಗಿದೆ.
ಸಭೆಯನ್ನು ರಾಜಸ್ತಾನ ಸಾರಿಗೆ ಸಚಿವ ಯೂನಿಸ್ ಖಾನ್ ಅವರು ಉದ್ಘಾಟಿಸಿದರು. ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಚಿ.ಪಿ.ಸಿಂಗ್(ಗೋವಾ), ರಾಜೇಶ್ ಮೌನತ್(ಛತೀಸ್‌ಘಡ), ಕೃಷ್ಣಲಾಲ್(ಹರಿಯಾಣ), ಜಿ.ಎಸ್.ಬಾಲಿ(ಹಿಮಾಚಲ್ ಪ್ರದೇಶ) ಸೇರಿದಂತೆ ಅನೇಕ ಸಚಿವರು ಪಾಲ್ಗೊಂಡು ಚರ್ಚೆ ನಡೆಸಿದರು.
ಕೇಂದ್ರ ಸರಕಾರ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಹೊಸ ಕಾನೂನು ಜಾರಿ ತರುವ ಕುರಿತು, ರಸ್ತೆ ಸುರಕ್ಷಾ ನೀತಿ, ದೇಶಾದಾದ್ಯಂತ ದ್ವಿಚಕ್ರ ವಾಹನದ ಹಿಂಬದಿ ಸವಾರಿನಿಗೂ ಹೆಲ್ಮೆಟ್ ಕಡ್ಡಾಯ ಸೇರಿ ಇತರೆ ವಿಚಯಗಳ ಬಗ್ಗೆ ಚರ್ಚೆ ನಡೆಯಿತು.

Comments are closed.