ಕರ್ನಾಟಕ

ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದ ಸಸ್ಪೆನ್ಸ್, ಹಾರರ್, ಥ್ರಿಲ್ಲರ್‌ಚಿತ್ರ `ರಿಕ್ತ’ !

Pinterest LinkedIn Tumblr

riktha

ಅಮೃತ್ ಕುಮಾರ್ ನಿರ್ದೇಶನದ ಸಸ್ಪೆನ್ಸ್, ಹಾರರ್, ಥ್ರಿಲ್ಲರ್‌ನ `ರಿಕ್ತ’ ಚಿತ್ರ ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದೆ.

ಸಂಚಾರಿ ವಿಜಯ್ ನಾಯಕನಾಗಿರುವ ಚಿತ್ರದಲ್ಲಿ ಅದ್ವಿತಾ ನಾಯಕಿ. ಅರುಣ್ ಕುಮಾರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಕಳೆದ ವಾರ ಚಿತ್ರದ ಕುರಿತು ವಿವರ ನೀಡಿದ ನಿರ್ದೇಶಕ ಅಮೃತ್ ಕುಮಾರ್ `ರಿಕ್ತ’ ಎಂದರೆ ಶೂನ್ಯ ಎಂದರ್ಥ. ಥ್ರಿಲ್ಲರ್, ಹಾರರ್, ಸಸ್ಪೆನ್ಸ್‌ನಿಂದ ಕೂಡಿದೆ.
ಚಿತ್ರದಲ್ಲಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೇ ಭಾಗದಲ್ಲಿ ಲವ್, ಎರಡನೇ ಭಾಗದಲ್ಲಿ ಹಾರರ್, ಥ್ರಿಲ್ಲರ್ ಹಾಗೂ ಮೂರನೇ ಭಾಗದಲ್ಲಿ ಸಸ್ಪೆನ್ಸ್ ಕಥೆ ಇದೆ. ಒಂದಕ್ಕೊಂದು ಲಿಂಗ್ ಮಾಡಲಾಗಿದೆ.

ಚಿತ್ರದ ಕೊನೆಯಲ್ಲಿ ಪ್ರೀತಿ ತ್ಯಾಗ ಮುಖ್ಯ ಎಂಬುದನ್ನು ತೋರಿಸಲಾಗಿದೆ. 30 ದಿನಗಳ ಕಾಲ ಬೆಂಗಳೂರು ಸೇರಿದಂತೆ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ ಎಂದರು.

ನಟ ಸಂಚಾರಿ ವಿಜಯ್ ಚಿತ್ರದಲ್ಲಿ ದೆವ್ವದ ಪಾತ್ರ ಮಾಡಿದ್ದೇನೆ. ಮಾನವೀಯ ಗುಣವಿರುವ ದೆವ್ವ ಎಂದು ಹೇಳಿಕೊಂಡರೆ, ನಟ ಅದ್ವಿತಾ ಪುಟ್ಟಣ್ಣ ಕಣಗಾಲ್ ಅವರ ಸಂಬಂಧಿ. ಚಿತ್ರದಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ. ಚಿತ್ರರಂಗದಲ್ಲಿ ನೆಲೆಯೂರುವ ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಮಾಪದ ಅರುಣ್ ಕುಮಾರ್ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲರಿಗೂ ಇಷ್ಟವಾಗಲಿದೆ. ಚಿತ್ರಕ್ಕೆ ಏನೇನೂ ಬೇಕೋ ಅದನ್ನೇ ಒದಗಿಸಿದ್ದೇವೆ ಎಂದು ಹೇಳಿದರು. ರಾಖಿ ಸೋನು 4 ಹಾಡುಗಳಿಗೆ ಸಂಗೀತ ನೀಡಿದ್ದಾರೆ.

Comments are closed.