ಕರ್ನಾಟಕ

ಮೇ 21 ರಿಂದ ಜೀ ವಾಹಿನಿಯಲ್ಲಿ ಆರಂಭಗೊಳ್ಳಲಿದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹೊಸ ಶೈಲಿಯ ಡ್ಯಾನ್ಸ್ ರಿಯಾಲಿಟಿ ಷೋ

Pinterest LinkedIn Tumblr

Dance11

ಕಳೆದ ಹಲವಾರು ವರ್ಷಗಳಿಂದ ಸರಿಗಮಪ, ರಿಯಾಲಿಟಿ ಷೋ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಜೀ ವಾಹಿನಿಯಲ್ಲಿ ಇದೇ 21 ರಿಂದ ಶನಿವಾರ ಮತ್ತು ಭಾನುವಾರ ಸಂಜೆ 7.30 ರಿಂದ ಹೊಸ ಶೈಲಿಯ ಡ್ಯಾನ್ಸ್ ರಿಯಾಲಿಟಿ ಷೋ ಆರಂಭವಾಗಲಿದೆ.

ಈವರೆಗೆ ಸೊಲೋ ಅಥವಾ ಡುಯಟ್ ಡ್ಯಾನ್ಸ್ ಷೋನೊಂದಿಗೆ ಕನ್ನಡಿಗರನ್ನು ಗೆದ್ದಿದ್ದ ಕಾರ್ಯಕ್ರಮ ಬರುವ ವಾರದಿಂದ ನ್ಯತ್ಯ ತಂಡಗಳ ಮದ್ಯೆ ಸ್ಪರ್ಧೆ ಏರ್ಪಡಿಸಿ ಅಂತಿಮವಾಗಿ ವಿಜೇತ ತಂಡವನ್ನು ಆಯ್ಕೆ ಮಾಡಲಿದೆ.

ಕರ್ನಾಟಕದಲ್ಲಿನ ನೂರಾರು ನೃತ್ಯ ತಂಡಗಳಲ್ಲಿ ಹಲವಾರು ಪ್ರತಿಭಾವಂತ ನೃತ್ಯಗಾರರಿರುತ್ತಾರೆ ಆದರೆ ಅಂತಹವರು ಬಳಕೆಗೆ ಬರುವುದಕ್ಕೆ ಅವಕಾಶವೇ ಇರುವುದಿಲ್ಲ, ಅಂತಹವರಿಗೆ ಜೀ ಕನ್ನಡ ವಾಹಿನಿ ಅವಕಾಶ ನೀಡಿದೆ. ಅವಕಾಶ ವಂಚಿತರನ್ನು ಗುರ್ತಿಸಿ ಅವರ ಪ್ರತಿಭೆಯನ್ನು ಬೆಳಕಿಗೆ ತರುವುದೇ ಈ ಕಾರ್ಯಕ್ರಮ ಮುಖ್ಯ ಉದ್ದೇಶ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ಶಿರ್ಷಿಕೆಯೊಂದಿಗೆ ಆರಂಭವಾಗುತ್ತಿರುವ ಈ ಕಾರ್ಯಕ್ರಮಕ್ಕಾಗಿ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಮೊದಲಾದ ನಗರಗಳಲ್ಲಿ ಆಡಿಷನ್ ನಡೆಸಿ ಅದರಲ್ಲಿ 54 ತಂಡಗಳನ್ನು ಆಯ್ಕೆ ಮಾಡಿದ್ದರು ನಂತರ ಅದರಲ್ಲಿ 14 ಉತ್ತಮ ತಂಡಗಳನ್ನು ಆಯ್ಕೆ ಮಾಡಿ ಅಂತಿಮವಾಗಿ ಸ್ಟೇಜ್ ಮೇಲೆ ತರುತ್ತಿದ್ದಾರೆ.

ಒಟ್ಟು 30 ಕಂತುಗಳಲ್ಲಿ ಪ್ರಸಾರವಾಗಲಿರುವ ಈ ರಿಯಾಲಿಟಿ ಷೋದ ಜಡ್ಜ್‍ಸ್ ಆಗಿ ಹಿರಿಯ ನಟಿ ಮಾಲಾಶ್ರೀ ಹಾಗೂ ಭಾವಾನಾ ಅಲ್ಲದೇ ದಿಗಂತ್ ಕೂಡ ಭಾಗವಹಿಸಲಿದ್ದಾರೆ.

ಬೆಳ್ಳಿತೆರೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಈ ಮೂವರು ಕಲಾವಿದರು ಈ 14 ತಂಡಗಳಲ್ಲಿ ಅತ್ಯುತ್ತಮವಾದ ತಂಡಗಳನ್ನು ಗುರ್ತಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕನ್ನಡ ಜನತೆಗೆ ಹೊಸದನ್ನು ಕೊಡುವ ನಿಟ್ಟಿನಲ್ಲಿ ಹಾಗೂ ಅವಕಾಶ ವಂಚಿತ ಪ್ರತಿಭೆಗಳಿಗೆ ಒಂದು ವೇದಿಕೆಯನ್ನು ನೀಡುವುದು ನಮ್ಮ ಆಶಯವಾಗಿದೆ ಎಂದು ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ತಿಳಿಸಿದ್ದಾರೆ. ನಟಿ ಅನುಶ್ರೀ ಈ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

Comments are closed.