ಕರ್ನಾಟಕ

ಬೆಂಗಳೂರಿನಲ್ಲಿ ಮತ್ತೊಂದು ಗ್ಯಾಂಗ್ ರೇಪ್: ಸಿಗರೆಟ್ ನ ನೆಪದಲ್ಲಿ ನಡೆಯಿತು ರೇಪ್!

Pinterest LinkedIn Tumblr

rape

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬರ್ತ್ ಡೇ ಪಾರ್ಟಿಯಲ್ಲಿ ಪಾನಮತ್ತರಾದ ಮೂವರು ಯುವಕರು ತಮ್ಮ ಸ್ನೇಹಿತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯ ಸಮೀಪದಲ್ಲಿರುವ ಸೆಲೆಬ್ರಿಟಿ ಲೇಔಟನ್ ನಲ್ಲಿ ನಡೆದಿದೆ.

ಘಟನೆ ಸಂಬಂಧ ಪೊಲೀಸರು ಮೂವರು ಆರೋಪಿಗಳು ಬಂಧಿಸಿದ್ದಾರೆ. ಅಸ್ಸಾಂನ ಕರೀ ಗಂಜ್ ಜಿಲ್ಲೆಯ ಮೆಹಬೂಬ್ ಅಲಿಯಾಸ್ ಬಾಬು(22), ಖಾಲೀದ್(21) ಮತ್ತು ಬುಕ್ತಿಯಾರ್(22) ಬಂಧಿತ ಆರೋಪಿಗಳು.

ಬ್ಯೂಟಿಷಿಯನ್ ಆಗಿರುವ ಅಸ್ಸಾಂ ಮೂಲದ ಯುವತಿ ಕಳೆದ ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಹೆಬ್ಬಗೋಡಿಯಲ್ಲಿರುವ ಸ್ನೇಹಿತೆಯ ಜೊತೆ ನೆಲೆಸಿದ್ದಳು. ಆರೋಪಿಗಳು ಅಸ್ಸಾಂ ಮೂಲದವರಾಗಿದ್ದರಿಂದ ಪರಿಚಯವಾಗಿತ್ತು. ಆರೋಪಿಗಳು ಸೆಲೆಬ್ರಿಟಿ ಲೇ ಔಟ್ ನಲ್ಲಿ ನೆಲೆಸಿದ್ದರು.

ಹೆಬ್ಬಗೋಡಿ ರೆಸ್ಟೋರೆಂಟ್ ಒಂದರಲ್ಲಿ ಸ್ನೇಹಿತೆಯ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಈ ಮೂವರು ಯುವಕರು ಮದ್ಯಪಾನ ಮಾಡಿದ್ದಾರೆ. ಯುವತಿಗೆ ಸಿಗರೇಟ್ ಸೇದುವ ಚಟವಿತ್ತು. ಪಾರ್ಟಿ ಮುಗಿಸಿ ಹೋಗಬೇಕಾದರೆ, ಸಿಗರೇಟು ನೀಡುತ್ತೇವೆ ಎನ್ನುವ ನೆಪದಲ್ಲಿ ಯುವತಿಯನ್ನು ಮನೆಗೆ ಕರೆದುಕೊಂಡು ಹೋದ ಸ್ನೇಹಿತರು… ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ತದ ನಂತರ ಅವರಿಂದ ತಪ್ಪಿಸಿಕೊಂಡ ಯುವತಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಯುವತಿಯ ಮೇಲೆ ಅತ್ಯಾಚಾರವಾಗಿರುವುದಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.