ಕರ್ನಾಟಕ

ವಿಕೃತನ ಅಟ್ಟಹಾಸ : ಸ್ನೇಹಿತರೊಂದಿಗೆ ಮಲಗುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಪತಿರಾಯ..!

Pinterest LinkedIn Tumblr

32

ತನ್ನ ಹೆಂಡತಿಯನ್ನು ಬೇರೊಬ್ಬರು ನೋಡಿದರೆ ಸಾಕು, ಕೆಂಡದಂತ ಕೋಪ ಮಾಡಿಕೊಳ್ಳುವ ಗಂಡಂದಿರುತ್ತಾರೆ. ಮಾತನಾಡಿಸಿದರೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ, ಇಲ್ಲೊಬ್ಬ ವಿಲಕ್ಷಣ, ವಿಕೃತ ವ್ಯಕ್ತಿಯಿದ್ದಾನೆ. ಈತ ತನ್ನ ಹೆಂಡತಿಯನ್ನು ತನ್ನ ಗೆಳೆಯರೊಂದಿಗೆ ಮಲಗಲು ಹೇಳುತ್ತಾನೆಂದರೆ ಈತನ ನೀಚ ಬುದ್ಧಿ ಎಂಥದ್ದೆಂಬುದು ಊಹಿಸಲೂ ಅಸಾಧ್ಯ. ರಾತ್ರಿಯಾದರೆ ಸಾಕು, ಕುಡಿದು ಗೆಳೆಯರೊಂದಿಗೆ ಮನೆಗೆ ಬರ್ತಾನೆ. ಮನೆಯಲ್ಲಿ ಪಾರ್ಟಿ ಮಾಡ್ತಾನೆ, ಕುಡಿದ ಮತ್ತಿನಲ್ಲಿ ಗೆಳೆಯರ ಜತೆ ತನ್ನ ಹೆಂಡತಿಗೆ ಮಂಚ ಹಂಚಿಕೊ ಎಂದು ಪೀಡಿಸ್ತಾನೆ. ಇಲ್ಲದಿದ್ದರೆ ಹೊಡೆದು ಬಡಿಯುತ್ತಾನೆ. ಈ ಹಿಂಸೆಯನ್ನು ಪಾಪ ಈ ಮಹಿಳೆ ಬಹಳ ದಿನಗಳಿಂದ ಅನುಭವಿಸಿಕೊಂಡು ಬಂದಿದ್ದಾಳೆ.

ಈ ವಿಕೃತನಿಂದ ಅಪಾರ ನೋವು ಅನುಭವಿಸಿದ್ದಾಳೆ. ಕೊನೆಗೆ ತಾಳಲಾರದೆ ತನ್ನ ಸಂಬಂಧಿಕರೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ. ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಔಷಧಿ ವಿತರಕ ಕೆಲಸ ಮಾಡುವ ಮಹಾನುಭಾವ ವಿಜಯ್ ಮಹಾಂತೇಶ್ ತನ್ನ ಹೆಂಡತಿಯನ್ನು ಪೀಡಿಸುವ ಸ್ನೇಹಿತರೊಂದಿಗೆ ದೂಡುವ ಮಹಾನ್ ಭೂಪ. ಇವನು ವಿಕೃತನೋ, ವಿಲಕ್ಷಣ ಮನೋಭಾವದವನೋ ಎಂದು ಗೊತ್ತಾಗುವುದಿಲ್ಲ. ಪಾಪ… ಕಿರುಕುಳದಿಂದ ಬೇಸತ್ತ ಪತ್ನಿ ಸಂಬಂಧಿಕರೊಂದಿಗೆ ಹೇಳಿಕೊಂಡಿದ್ದಾಳೆ. ಅತ್ತೆ-ಮಾವನವರಿಗೆ ಈ ವಿಷಯ ತಿಳಿಸಿದ್ದಾಳೆ. ಆದರೆ, ಅವರು ಕೂಡ ವಿಜಯ ಮಹಾಂತೇಶ್‌ನ ಕುಕೃತ್ಯಕ್ಕೆ ಸಹಕರಿಸಿದ್ದಾರೆ. ಗಂಡ ಹೇಳಿದಂತೆ ನೀನು ಕೇಳಬೇಕು ಎಂದು ಹೆದರಿಸಿದ್ದಾರಂತೆ.

ಕೊನೆಗೆ ಆಕೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಮದುವೆ ಸಂದರ್ಭದಲ್ಲಿ ಸಾಕಷ್ಟು ವರದಕ್ಷಿಣೆ ಕೊಡಲಾಗಿದೆ. ಆದರೂ ಈತ ಈ ರೀತಿ ವಿಕೃತವಾಗಿ ವರ್ತಿಸುತ್ತಿದ್ದಾನೆ. ಇವನೇನು ಮನುಷ್ಯನೋ, ಮೃಗವೋ ಅರ್ಥವಾಗುತ್ತಿಲ್ಲ. ಇಂತಹ ಪತ್ನಿ ಪೀಡಕರಿಗೆ ಸರಿಯಾದ ಬುದ್ಧಿ ಕಲಿಸಬೇಕು. ಇಲ್ಲದಿದ್ದರೆ ಅಮಾಯಕ ಹೆಣ್ಣು ಮಕ್ಕಳು ಬಲಿಯಾಗುವುದರಲ್ಲಿ ಅನುಮಾನವಿಲ್ಲ.

Comments are closed.