ಕರ್ನಾಟಕ

ಅಪಘಾತದಲ್ಲಿ ಗಾಯಗೊಂಡ ಸರೆಗಮಪ ಸೀಸನ್-11 ವಿಜೇತ ಚನ್ನಪ್ಪ

Pinterest LinkedIn Tumblr

chennappa

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಂಗೀತ ರಿಯಾಲಿಟಿ ಶೋ ಸರೆಗಮಪ-ಸೀಸನ್-11ನ ವಿಜೇತ ಚನ್ನಪ್ಪ ಅವರು ಅಪಘಾತದಿಂದ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ. ಬೆಂಗಳೂರಿನ ಯಲಹಂಕದಲ್ಲಿರುವ ಗಾಯಕ ಅರ್ಜುನ್ ಜನ್ಯ ಅವರ ಸ್ಟುಡಿಯೋದಿಂದ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಚನ್ನಪ್ಪ ಇಂದು ಬೆಳಗ್ಗೆ ಗಾಯಕ ಅರ್ಜುನ್ ಜನ್ಯ ಅವರ ಸ್ಟುಡಿಯೋಗೆ ತೆರಳಿದ್ದರು. ಅಲ್ಲಿ ರೆಕಾರ್ಡಿಂಗ್ ಮುಗಿಸಿಕೊಂಡು ಬೈಕ್ ನಲ್ಲಿ ಬರುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿತ್ತು.

ಕೆಳಕ್ಕೆ ಬಿದ್ದ ಚನ್ನಪ್ಪ ಅವರ ಗಲ್ಲಕ್ಕೆ, ಕೈ, ಕಾಲಿಗೆ ಗಾಯವಾಗಿತ್ತು. ಕೂಡಲೇ ಅವರನ್ನು ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.

Comments are closed.