ಕರ್ನಾಟಕ

ರಾಜಕೀಯ ಪ್ರವೇಶಕ್ಕೆ ಚಿಂತನೆ ನಡೆಸಿಲ್ಲ: ಮೈಸೂರು ಯುವರಾಜ ಯದುವೀರ್

Pinterest LinkedIn Tumblr

yadveer poli

ಮಂಡ್ಯ: ಸದ್ಯ ನಾನು ರಾಜಕೀಯ ಪ್ರವೇಶಿಸುವ ಬಗ್ಗೆ ಚಿಂತಿಸಿಲ್ಲ. ಯಾವ ಪಕ್ಷಗಳಿಂದಲೂ ನನಗೆ ಆಹ್ವಾನ ಬಂದಿಲ್ಲ ಎಂದು ಮೈಸೂರು ಯುವರಾಜ ಯದುವೀರ್ ಶ್ರೀಕಂಠದತ್ತ ಚಾಮರಾಜ ಒಡೆಯರ್ ಸ್ಪಷ್ಪಪಡಿಸಿದರು.

ನಗರದ ಅಭಿನವ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿರುವ ಅನಂತ ಸಭಾಂಗಣ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಶ್ರೀಕಂಠದತ್ತ ಒಡೆಯರ್ ಅವರು ಜನಮನ್ನಣೆ ಗಳಿಸಿ ನಾಲ್ಕು ಬಾರಿ ಮೈಸೂರು ಸಂಸದರಾಗಿ ಆಯ್ಕೆಯಾಗಿದ್ದರು. ಅವರಿಗೆ ರಾಜಕೀಯ ಅನುಭವವಿತ್ತು. ಆದರೆ, ನನಗಿನ್ನೂ ಸರಿಯಾಗಿ ಜನರ ಸಂಪರ್ಕವೇ ಆಗಿಲ್ಲ. ನಾನು ಕಲಿಯೋದು ಸಾಕಷ್ಟಿದೆ ಎಂದು ಹೇಳಿದರು.

ತಾಯಿಯ ಉಸ್ತುವಾರಿ :

ಅಂದಿನ ಮಹಾರಾಜರ ವೈಭವಕ್ಕೂ ಕಡಿಮೆಯಾಗಿ, ಇಂದಿನ ವಿವಾಹಕ್ಕೂ ಹೆಚ್ಚಿನದಾಗಿ ವೈಭವದ ವಿವಾಹೋತ್ಸವ ನಡೆಯಲಿದೆ. ಅಲ್ಲದೆ, ವಿವಾಹಕ್ಕಾಗಿ ಎಲ್ಲಾ ರೀತಿಯ ತಯಾರಿಯನ್ನು ಅಮ್ಮ ನೋಡಿಕೊಳ್ತಾ ಇದ್ದಾರೆ. ರಾಜಸ್ಥಾನದಿಂದ್ಲೂ ವಧುವಿನ ಕಡೆಯವ್ರು ವಿವಾಹದ ತಯಾರಿ ನಡೆಸ್ತಾ ಇದ್ದಾರೆ ಎಂದು ತಿಳಿಸಿದರು.

ವಿವಾಹ ಆಮಂತ್ರಣ ಕುರಿತು ಯಾರು ಯಾರನ್ನು ಆಹ್ವಾನ ಮಾಡಬೇಕು ಎಂಬುದರ ಬಗ್ಗೆಯೂ ತಾಯಿ ರಾಣಿ ಪ್ರಮೋದಾದೇವಿ ತೀರ್ಮಾನ ಮಾಡ್ತಾರೆ. ಜೊತೆಗೆ ಮೈಸೂರು ಪ್ರಾಂತ್ಯಕ್ಕೆ ತಮ್ಮ ಕುಟುಂಬದ ಕೊಡುಗೆ ದೊಡ್ಡದಿದೆ. ನಮ್ಮ ತಾತ ಮಾಡಿದ ಕಾರ್ಯಗಳನ್ನು ಇಂದಿನ ಯುವಜನತೆ, ಸರ್ಕಾರ ಕಾಪಾಡಿಕೊಂಡು ಹೋಗಬೇಕು, ಇದು ಎಲ್ಲರ ಹೊಣೆಯಾಗಿದೆ ಎಂದರು.

ಕ್ಲಬ್ ಬಲಿಷ್ಠಗೊಳಿಸಲು ಸ್ಪರ್ಧೆ:

ಅರಮನೆಗೂ ಕ್ಲಬ್‍ಗೂ ಅವಿನಾಭಾವ ಸಂಬಂಧವಿದ್ದ ಕಾರಣ ಹಾಗೂ ಮೈಸೂರಿನ ಕ್ಲಬ್ ಚುನಾವಣೆಗೆ ಸ್ಪರ್ಧೆ ಮಾಡಬೇಕಾಗಿ ಬಂತು. ಬಿಪಿಸಿ, ಎಂಆರ್‍ಸಿ ಕ್ಲಬ್‍ಗಳಿಗೆ ಅರಮನೆಯಿಂದಲೇ ಜಾಗ ಕೊಟ್ಟಿರೋದು. ನಮ್ಮ ಮತ್ತು ಕ್ಲಬ್ ಸಂಬಂಧ ಬಲಿಷ್ಠಗೊಳಿಸಲು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ ಎಂದು ಹೇಳಿದರು.

Write A Comment