ಕನ್ನಡ ವಾರ್ತೆಗಳು

ಗಾಯಕ ಹಾಗೂ ವೈದ್ಯ ಡಾ. ಸತೀಶ್ ಪೂಜಾರಿ ಅವರಿಗೆ ಆರ್ಯಭಟ ಪ್ರಶಸ್ತಿ

Pinterest LinkedIn Tumblr

ಕುಂದಾಪುರ: ಕುಂದಾಪುರದಲ್ಲಿ ಸಂಗೀತ ಲೋಕದ ದಿಗ್ಗಜರನ್ನು ಕರೆಸಿ ಯಶಸ್ವಿಯಾಗಿ ಕಾರ್ಯಕ್ರಮ ಸಂಘಟಿಸಿದ ಗಾಯಕ ಡಾ. ಸತೀಶ್ ಪೂಜಾರಿಯವರು ಬೆಂಗಳೂರಿನ ಆರ್ಯಭಟ ಕಲ್ಚರಲ್ ಸೊಸೈಟಿ ಕೊಡಮಾಡುವ 2015ನೇ ಸಾಲಿನ ಆರ್ಯಭಟ ಇಂಟರ್ ನ್ಯಾಶನಲ್ ಅವಾರ್ಡ್‌ಗೆ ಭಾಜನರಾಗಿದ್ದಾರೆ.

Dr.Sathish Poojary

ಪ್ರಖ್ಯಾತ ಬಹು ಭಾಷಾ ಗಾಯಕರಾದ ಎಸ್. ಜಾನಕಿ, ವಾಣಿ ಜಯರಾಂ ಅವರ ಸಂಗೀತ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ಯಶಸ್ವಿಯಾಗಿ ಸಂಘಟಿಸುವ ಜೊತೆಗೆ ಸ್ವತಃ ಗಾಯಕರಾಗಿ ಸಂಗೀತ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮೇ.18ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಡಾ.ಸತೀಶ್ ಪೂಜಾರಿಯವರು ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿ, ಕೋಟದ ಪರಿವರ್ತನ ರಿಹ್ಯಾಬಿಲಿಟೇಶನ್ ಸೆಂಟರ್‌ನ ನಿರ್ದೇಶಕರಾಗಿ, ಹ್ಯೂಮನ್ ರೈಟ್ ಫೆಡರೇಶನ್ ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ, ಸಾಲಿಗ್ರಾಮದ ಗುರುನರಸಿಂಹ ವಿವಿಧೋದ್ಧೇಶ ಸಹಕಾರ ಸಂಘದ ನಿರ್ದೇಶಕರಾಗಿ, ಬ್ರಹ್ಮಾವರ ಬಾರ್ಕೂರಿನ ಲಯನ್ಸ್ ಕ್ಲಬ್‌ನ ಸಕ್ರೀಯ ಸದಸ್ಯರಾಗಿ ವೈದ್ಯಕೀಯ, ಸಾಮಾಜಿಕ, ಆರ್ಥಿಕ, ಸಂಗೀತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Write A Comment