ಕರ್ನಾಟಕ

ಮೈದುನನ ಪಾಲಿಗೆ ಅತ್ತಿಗೆಯೇ ಬೆಳದಿಂಗಳ ಬಾಲೆ ! ರಾಘವೇ೦ದ್ರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು….ಪ್ರೇಮ-ಸಲ್ಲಾಪ ನಡೆಸಿ ಆತನ ಸಾವಿಗೆ ಕಾರಣಳಾದ ಅತ್ತಿಗೆ

Pinterest LinkedIn Tumblr

Raghavendra-anu

ಹಾಸನ: ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಕ್ಯಾಬ್ ಡ್ರೈವರ್ ರಾಘವೇ೦ದ್ರನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು, ಆತನ ಅತ್ತಿಗೆಯೇ ನಕಲಿ ಹೆಸರಲ್ಲಿ ರಾಘವೇಂದ್ರನೊಂದಿಗೆ ಪ್ರೇಮ-ಸಲ್ಲಾಪ ನಡೆಸಿ ಆತನ ಸಾವಿಗೆ ಕಾರಣವಾಗಿದ್ದಾಳೆ.

ಕಳೆದ ಮೇ6ರಂದು ಕ್ಯಾಬ್ ಡ್ರೈವರ್ ರಾಘವೇಂದ್ರ ಖಿನ್ನತೆಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದ. ಇದಾದ ಬಳಿಕ ಆತನ ಅತ್ತಿಗೆ ದಿವ್ಯಾ ಮಾಧ್ಯಮಗಳಿಗೆ ಮಾಹಿತಿ ನೀಡಿತ್ತು ಅನು ಎಂಬಾಕೆಯನ್ನು ರಾಘವೇಂದ್ರ ಪ್ರೀತಿಸುತ್ತಿದ್ದ. ಆಕೆಯ ಪೋಷಕರು ಬಲವಂತವಾಗಿ ಮದುವೆ ಮಾಡಿದ ಕಾರಣ ರಾಘವೇಂದ್ರ ಮತ್ತು ಅನು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು. ಈ ವಿಚಾರ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು, ಕ್ಯಾಬ್ ಡ್ರೈವರ್ ರಾಘವೇಂದ್ರ ತಾನು ನೋಡದೇ ಇರುವ ಹುಡುಗಿಯನ್ನು ಪ್ರೀತಿಸಿ ಪ್ರೀತಿ ವೈಫಲ್ಯದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದ. ಇಲ್ಲಿ ಪ್ರಮುಖ ವಿಚಾರವೆಂದರೆ ರಾಘವೇಂದ್ರ ಪ್ರೀತಿಸುತ್ತಿದ್ದ ಅನು ಎಂಬ ಹುಡುಗಿ ಬೇರಾರು ಅಲ್ಲ. ಆತನ್ನ ಅತ್ತಿಗೆ ದಿವ್ಯಾ, ನಕಲಿ ಹೆಸರಲ್ಲಿ ಸಿಮ್ ಕಾರ್ಡ್ ತೆಗೆದುಕೊಂಡಿದ್ದ ದಿವ್ಯಾ ಅದರ ಮೂಲಕವೇ ರಾಘವೇಂದ್ರನೊಂದಿಗೆ ಚಾಟ್ ಮಾಡುತ್ತಿದ್ದಳು. ಕ್ರಮೇಣ ಇದನ್ನು ಪ್ರೀತಿಯಾಗಿ ನಂಬಿದ್ದ ರಾಘವೇಂದ್ರ ಆಕೆಯನ್ನು ಬಲವಾಗಿ ಪ್ರೀತಿಸ ತೊಡಗಿದ್ದ. ರಾಘವೇಂದ್ರ ತಾನು ಪ್ರೀತಿಸಿದ ಅನು ಎಂಬ ಹುಡುಗಿಯನ್ನು ಭೇಟಿಯಾಗಬೇಕು ಎಂದು ಹೇಳಿದಾಗಲೆಲ್ಲಾ, ಕಾರಣವೊಡ್ಡಿ ಭೇಟಿ ತಪ್ಪಿಸಲಾಗುತ್ತಿತ್ತು. ಅಂತಿಮವಾಗಿ ಒಂದು ರಾಘವೇಂದ್ರನಿಗೆ ಮೆಸೇಜ್ ಮಾಡಿದ್ದ ಅತ್ತಿಗೆ ದಿವ್ಯಾ ತನಗೆ ಬಲವಂತವಾಗಿ ಬೇರೊಬ್ಬ ಹುಡುಗನೊಂದಿಗೆ ಮದುವೆ ಮಾಡಿರುವುದಾಗಿ ಹೇಳಿದ್ದಾಳೆ. ಇದರಿಂದ ತೀವ್ರ ನೊಂದ ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಪೊಲೀಸರ ವಿಚಾರಣೆಯಿಂದಾಗಿ ರಾಘವೇಂದ್ರವ ಪಾಲಿಗೆ ಆತನ ಅತ್ತಿಗೆಯೇ ಬೆಳದಿಂಗಳ ಬಾಲೆಯಾಗಿ ಕಾಡಿ ಆತನ ಸಾವಿಗೆ ಕಾರಣವಾದ ಸಂಗತಿ ಬೆಳಕಿಗೆ ಬಂದಿದೆ.

ಹೇಗೆ ಬಯಲಾಯ್ತು ಪ್ರಕರಣ?
ಮೃತ ರಾಘವೇಂದ್ರ ತನ್ನ ಡೆತ್‍ನೋಟ್‍ನಲ್ಲಿ ಎಲ್ಲಿಯೂ ತಾನು ಪ್ರೀತಿಸಿದ ಹುಡುಗಿಯ ಹೆಸರನ್ನು ಬರೆದಿರಲಿಲ್ಲ. ಆದರೆ ಕೊನೆಯಲ್ಲಿ ಆಕೆಯ ಮೊಬ್ಯೆಲ್ ಸ೦ಖ್ಯೆ ನಮೂದಿಸಿದ್ದ. ಆತನ ಶವವನ್ನು ವಶಕ್ಕೆ ಪಡೆದ ಪೊಲೀಸರು ಪತ್ರದಲ್ಲಿದ್ದ ಆ ನ೦ಬರ್ ಗೆ ಕರೆಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆದರೆ ಟ್ರೂ ಕಾಲರ್ ಆ್ಯಪ್ ನಲ್ಲಿ ಅದು ‘ಅನು’ ಎನ್ನುವ ಹೆಸರು ತೋರಿಸಿತ್ತು. ಹೀಗಾಗಿ ಪೊಲೀಸರು ಆತ ಅನು ಎ೦ಬಾಕೆಯನ್ನು ಪ್ರೀತಿಸಿರಬೇಕು ಎ೦ಬ ನಿಧಾ೯ರಕ್ಕೆ ಬ೦ದಿದ್ದರು. ಆದರೆ, ವಿಚಾರಣೆ ಆರ೦ಭಿಸಿದಾಗ ರಾಘವೇ೦ದ್ರ ಕೇವಲ ಒ೦ದು ಮಿಸ್‍ಕಾಲ್‍ನಿ೦ದಾಗಿ ತಾನು ನೋಡದ ಹುಡುಗಿಯೊ೦ದಿಗೆ ಪ್ರೇಮಪಾಶದಲ್ಲಿ ಬಿದ್ದಿದ್ದ ಎನ್ನುವ ಸ೦ಗತಿ ಪೊಲೀಸರಿಗೆ ತಿಳಿಯಿತು.

ಬಳಿಕ ವಿಚಾರಣೆ ಮುಂದುವರೆಸಿದ ಪೊಲೀಸರು ಮೊಬೈಲ್ ಸ೦ಖ್ಯೆಯ ಜಾಡು ಹಿಡಿದು ಹೊರಟರು. ಆಗ ಸಿಕ್ಕಿದ್ದೇ ರಾಘವೇಂದ್ರನ ಅತ್ತಿಗೆ ಅಡ್ಲಿಮನೆ ಬಡಾವಣೆಯಲ್ಲಿ ವಾಸವಿರುವ ದಿವ್ಯಾ..! ಬೆ೦ಗಳೂರಿನಲ್ಲಿ ಸ್ವ೦ತ ಟ್ಯಾಕ್ಸಿ ಓಡಿಸುತ್ತಿದ್ದ ರಾಘವೇ೦ದ್ರನಿಗೆ 7 ತಿ೦ಗಳ ಹಿ೦ದೆ ಆತನ ಅತ್ತಿಗೆ ದಿವ್ಯಾ ತನ್ನ ಹೊಸ ಮೊಬ್ಯೆಲ್ ನ೦ಬರ್ ನಿ೦ದ ಮಿಸ್ ಕಾಲ್ ನೀಡಿದ್ದಳು. ರಾಘವೇಂದ್ರ ಬಳಿಕ ಆ ನಂಬರ್ ಗೆ ಕರೆ ಮಾಡಿದಾಗ ತನ್ನನ್ನು ತಾನು ಅನು ಎ೦ದು ಪರಿಚಯಿಸಿಕೊ೦ಡ ದಿವ್ಯಾ, ನಿತ್ಯ ಗ೦ಟೆಗಟ್ಟಲೆ ಆತನೊ೦ದಿಗೆ ಮಾತನಾಡುತ್ತಿದ್ದಳು. ತಾನು ಬೆ೦ಗಳೂರಿನ ವಿಜಯನಗರದ ನಿವಾಸಿ, ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿ, ತನ್ನ ತ೦ದೆ ಆಗಭ೯ ಶ್ರೀಮ೦ತರು ಎ೦ದು ರಾಘವೇ೦ದ್ರನ ಬಳಿ ಹೇಳಿಕೊ೦ಡಿದ್ದಳು.

ರಾಘವೇ೦ದ್ರನೊ೦ದಿಗೆ ಹರಟುತ್ತಿದ್ದ ಮೊಬ್ಯೆಲ್‍ನ ವಾಟ್ಸಪ್‍ಗೆ ದಿವ್ಯಾ, ಗುಜರಾತಿ ನಟಿ ಮೋನಲ… ಗಝ್ಜರ್ ಭಾವಚಿತ್ರವನ್ನು ಪ್ರೊಫೈಲ್ ಫೋಟೋ ಆಗಿ ಬಳಸಿಕೊ೦ಡಿದ್ದಳು. ಆಕೆಯನ್ನೇ ಅನು ಎ೦ದು ಭಾವಿಸಿದ ರಾಘವೇ೦ದ್ರ, ಆಕೆಯ ಸೌ೦ದಯ೯ಕ್ಕೆ ಮಾರುಹೋಗಿದ್ದ. ಮೊಬ್ಯೆಲ್ ಆ್ಯಪ್ ಬಳಸಿ ತನ್ನ ಫೋಟೋದೊ೦ದಿಗೆ ಆಕೆ ಫೋಟೋವನ್ನು ಹೃದಯದ ಚಿತ್ರದೊಳಗೆ ಸೇರಿಸಿದ್ದ. ದಿನ ಕಳೆದ೦ತೆ ಅನು ಎ೦ಬ ನಕಲಿ ಹೆಸರಿನೊಂದಿಗೆ ಚಾಟ್ ಮಾಡುತ್ತಿದ್ದ ಹುಡುಗಿಯೊಂದಿಗೆ ಪ್ರೇಮಪಾಶದಲ್ಲಿ ರಾಘವೇ೦ದ್ರ ಆಕೆಯನ್ನು ಪ್ರೀತಿಸಲಾರ೦ಭಿಸಿದ.

ಆಕೆಯನ್ನು ನೋಡಲು ತಹತಹಿಸತೊಡಗಿದ. ಅನೇಕ ಸಲ ಮ೦ಗಳೂರು, ಚಿಕ್ಕಮಗಳೂರುಗಳಲ್ಲಿ ಭೇಟಿಯಾಗುತ್ತೇನೆ ಎ೦ದು ಆತನನ್ನು ಕರೆಯಿಸಿಕೊ೦ಡಿದ್ದ ದಿವ್ಯಾ, ಆತನಿಗೆ ಸಿಗದೇ ಹಲವು ಬಾರಿ ಸತಾಯಿಸಿದ್ದಳು. ಯಾವಾಗ ರಾಘವೇ೦ದ್ರ ಪ್ರೀತಿ ವಿಷಯದಲ್ಲಿ ಗ೦ಭೀರವಾಗತೊಡಗಿದನೋ ಆಗ ಎಚ್ಚೆತ್ತ ಆಕೆ, ನನ್ನ ಅಣ್ಣ ನಮ್ಮಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾನೆ ಎ೦ದು ಕತೆ ಆರ೦ಭಿಸಿದ್ದಳು. ಅಲ್ಲದೆ ಒ೦ದು ತಿ೦ಗಳ ಹಿ೦ದೆ ಪ್ರಶಾ೦ತ್ ಎ೦ಬ ಶ್ರೀಮ೦ತನೊ೦ದಿಗೆ ಅಣ್ಣ, ಬಲವ೦ತವಾಗಿ ಮದುವೆ ಮಾಡಿದ್ದಾನೆ ಎ೦ದು ಕತೆ ಮುಕ್ತಾಯಗೊಳಿಸಲು ಯತ್ನಿಸಿದ್ದಳು.

ಆದರೆ, ಇದನ್ನೇ ನಿಜವೆಂದು ನಂಬಿದ ರಾಘವೇಂದ್ರ ಪ್ರೇಮ ವೈಫಲ್ಯದಿಂದ ಖಿನ್ನತೆಗೆ ಒಳಗಾಗಿ ಮೇ 6ರ೦ದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊ೦ಡು ಆತ್ಮಹತ್ಯೆ ಮಾಡಿಕೊ೦ಡಿದ್ದ.

ಡೆತ್ ನೋಟ್ ನಲ್ಲಿ ಪ್ರೇಮಕತೆ
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದ ರಾಘವೇಂದ್ರ “ನನ್ನ ಒ೦ದು ಮುತ್ತಿನ ಪ್ರೀತಿಯ ಕತೆ, ಅ೦ತಿಮ ವ್ಯಥೆ’ ಎ೦ಬ ಶೀಷಿ೯ಕೆಯಲ್ಲಿ ನಾಲ್ಕು ಸಾಲುಗಳ ಡೆತ್‍ನೋಟ್ ಬರೆದಿದ್ದ. ಅದರಲ್ಲಿ ತಾನು ಅನು ಎಂಬ ಅನಾಮಿಕಳನ್ನು ಎಷ್ಟು ಪ್ರೀತಿಸುತ್ತಿದ್ದ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದ. ಡೆತ್‍ನೋಟ್‍ನ ಕೊನೆಯಲ್ಲಿ ಚಿನ್ನು ಐ ಆ್ಯಮ್ ಸಾರಿ, ಐ ಲವ್ ಯೂ, ಐ ಮಿಸ್ ಯೂ, ನನ್ನ ಪ್ರೀತಿಯ ಹುಡುಗಿಯ ಸ೦ಸಾರ ಚೆನ್ನಾಗಿರಲಿ. ಅವಳನ್ನು ಬಿಟ್ಟು ನನಗೆ ಬದುಕಲು ಆಗುವುದಿಲ್ಲ. ಅದಕ್ಕಾಗಿ ಎಲ್ಲರಿ೦ದ ದೂರ ಹೋಗುತ್ತಿದ್ದೇನೆ ಎ೦ದು ಬರೆದಿದ್ದ.

ಮಾಧ್ಯಮಗಳಿಗೆ ತಪ್ಪು ಮಾಹಿಕಿ ನೀಡಿದ ದಿವ್ಯಾ
ರಾಘವೇ೦ದ್ರ ಆತ್ಮಹತ್ಯೆ ಮಾಡಿಕೊ೦ಡ ದಿನ ಆತನ ಸಾವಿನ ಸುದ್ದಿ ಕೇಳಿ ಆತನ ಪ್ರೇಯಸಿ ಅನು ಸಹ ಬೆ೦ಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊ೦ಡಿದ್ದಾಳೆ ಎ೦ಬ ಅತ್ತಿಗೆ ದಿವ್ಯಾಳ ಮಾತು ನ೦ಬಿ ಅ೦ದು ಮಾಧ್ಯಮಗಳು ವರದಿ ಬಿತ್ತರಿಸಿದ್ದವು. ಪ್ರೇಮಕ್ಕೆ ಪೋಷಕರ ವಿರೋಧದಿಂದಾಗಿ ಪ್ರೇಮಿಗಳಿಬ್ಬರೂ ಆತ್ಮಹತ್ಯೆ ಮಾಡಿಕೊ೦ಡಿದ್ದಾರೆ ಎ೦ದು ಕೆಲವು ಸುದ್ದಿ ವಾಹಿನಿಗಳಲ್ಲಿ ವರದಿ ಪ್ರಸಾರವಾಗಿತ್ತು. ಆದರೆ ವಾಸ್ತವಾಂಶ ಬಯಲಾದಾಗ ಮಾಧ್ಯಮಗಳೇ ಬೇಸ್ತು ಬಿದ್ದಿವೆ. ರಾಘವೇ೦ದ್ರ ಆತ್ಮಹತ್ಯೆ ಮಾಡಿಕೊ೦ಡ ದಿನ ಸ್ಥಳದಲ್ಲಿದ್ದ ಅತ್ತಿಗೆ ದಿವ್ಯಾ, ಏನಾಗಿದೆ ಅ೦ತ ಗೊತ್ತಿಲ್ಲ. ಆಕಸ್ಮಿಕವಾಗಿ ಅನು ಎ೦ಬ ಹುಡುಗಿ ಪರಿಚಯವಾಗಿ ಲವ್ ಆಗಿತ್ತು. ಈಗ ಇವರು ತೀರಿಹೋಗಿದ್ದಾರೆ. ಆಕೆಯೂ ಸತ್ತು ಹೋಗಿದ್ದಾಳೆ. ಹುಡುಗಿ ನನಗೆ ದೂರದ ಸ೦ಬ೦ಧಿ, ಆಕೆಗೆ ಬೇರೊಬ್ಬನೊ೦ದಿಗೆ 1 ತಿ೦ಗಳ ಹಿ೦ದೆ ಮದುವೆಯಾಗಿತ್ತು ಎ೦ದು ಸುದ್ದಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದಳು. ಶುಕ್ರವಾರ ನಗರ ವೃತ್ತ ನಿರೀಕ್ಷಕ ಶಿವಕುಮಾರ್ ಹಾಗೂ ಪೆನ್ಷನ್ ಮೊಹಲ್ಲಾ ಠಾಣೆ ಎಸ್‍ಐ ರಾಜು, ದಿವ್ಯಾಳನ್ನು ವಿಚಾರಣೆಗೊಳಪಡಿಸಿದಾಗ ಆಕೆ ತಾನೇ ಅನು ಎನ್ನುವುದನ್ನು ಬಾಯಿಬಿಟ್ಟಿದ್ದಾಳೆ.

ದಿವ್ಯಾ ಕೃತ್ಯದ ಹಿಂದೆ ಧ್ವೇಷ ಸಾಧನೆಯ ಗುರಿ?
ಕುಟುಂಬದ ಮೂಲಗಳ ಪ್ರಕಾರ ದಿವ್ಯಾ 4 ವಷ೯ಗಳ ಹಿ೦ದೆ ರಾಘವೇ೦ದ್ರನ ಅಣ್ಣನನ್ನು ವಿವಾಹವಾಗಿದ್ದಳು. ಆದರೆ, ಒ೦ದೇ ವರ್ಷದಲ್ಲಿ ಇಬ್ಬರ ನಡುವಿನ ಸ೦ಬ೦ಧದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಗ೦ಡನನ್ನು ತೊರೆದು ಅಡ್ಲಿಮನೆ ಬಡಾವಣೆಯಲ್ಲಿ ದಿವ್ಯಾ ತನ್ನ ಮಗಳೊ೦ದಿಗೆ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಪ್ರಸ್ತುತ ಆಕೆಯ ಗ೦ಡ ಗೋವಾದಲ್ಲಿದ್ದಾನೆ. ತನ್ನನ್ನು ಒ೦ಟಿಯಾಗಿ ಬಾಳುವ೦ತೆ ಮಾಡಿದ ರಾಘವೇ೦ದ್ರನ ಅಣ್ಣನ ಮೇಲಿನ ದ್ವೇಷಕ್ಕೆ ದಿವ್ಯಾ ಹೀಗೆ ಬೆಳದಿ೦ಗಳ ಬಾಲೆಯ ಅವತಾರವೆತ್ತಿ ಮೈದುನನನ್ನು ಬಲಿ ಪಡೆದಿದ್ದಾಳೆ ಎ೦ದು ಆತನ ಸ೦ಬ೦ಧಿಕರು ಆರೋಪಿಸುತ್ತಿದ್ದಾರೆ.

Write A Comment