ಕರ್ನಾಟಕ

ಯತೀಂದ್ರ ಲ್ಯಾಬ್ ಶುರು : ಸಿಎಂ ಪುತ್ರನ ಸಹಭಾಗಿತ್ವದ ಸಂಸ್ಥೆ ಕಾರ್ಯಾರಂಭ

Pinterest LinkedIn Tumblr

Siddaramaiah_0ಬೆಂಗಳೂರು,ಮೇ ೧೨-ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಯನ್ನೇ ಅಲುಗಾಡಿಸಿದ್ದ ಮ್ಯಾಟ್ರಿಕ್ಸ್ ಸಂಸ್ಥೆಗೆ ಲ್ಯಾಬ್ ಗುತ್ತಿಗೆ ಪ್ರಕರಣ ಇದೀಗ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ.
ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಹಭಾಗಿತ್ವದ ಸಂಸ್ಥೆಯ ಪಾಲಾಗಿದ್ದ ಟೆಂಡರ್‌ನಿಂದ ರದ್ದಾಂತವಾದ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಹೊರ ಬರುವುದಾಗಿ ಯತೀಂದ್ರ ಹೇಳಿಕೆ ನೀಡಿದ್ದರು. ಈ ಮಧ್ಯೆ ನಗರದ ವಿಕ್ಟೋರಿಯಾ ಪಿಎಂಎಸ್‌ಎಸ್‌ವೈ ಆಸ್ಪತ್ರೆ ಆವರಣದಲ್ಲಿ ಸದ್ದು ಗದ್ದವಿಲ್ಲದೆ ಲ್ಯಾಬ್ ಉದ್ಘಾಟನೆಯ ಶಾಸ್ತ್ರವೂ ಮುಗಿದೇ ಹೋಗಿದ್ದು ಲ್ಯಾಬ್ ಕಾರ್ಯಾರಂಭ ಮಾಡುತ್ತಿದೆ.

* ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿವಾದಾತ್ಮಕ ಲ್ಯಾಬ್ ಕಾರ್ಯಾರಂಭ
* ಸದ್ದುಗದ್ದಲವಿಲ್ಲದೆ ಕಾರ್ಯಾರಂಬ ಮಾಡಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ದಿಗ್ಭ್ರಮೆ
* ಮುಖ್ಯಮಂತ್ರಿ ಪುತ್ರ ಯತೀಂದ್ರ ಕಂಪನಿಗೆ ರಾಜೀನಾಮೆ ಕೊಟ್ಟಿದ್ದ ಲ್ಯಾಬ್ ಲೈಸನ್ಸ್ ಊರ್ಜಿತ
* ಮುಖ್ಯಮಂತ್ರಿಯಾಗಿ ಮೂರು ವರ್ಷ ಪೂರೈಸುತ್ತಿರುವ ಸಿದ್ದರಾಮಯ್ಯಗೆ ಹೊಸ ಸಂಕಷ್ಟ

ಅಪ್ಪ (ಸಿದ್ದರಾಮಯ್ಯ) ನಿಗೆ ಕೆಟ್ಟ ಹೆಸರು ತರುವುದಿಲ್ಲ ಸಂಸ್ಥೆಯಿಂದ ಹೊರ ಬರುತ್ತೇನೆ ಅದಕ್ಕಾಗಿ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿದ್ದ ಯತೀಂದ್ರ ಸಹಭಾಗಿತ್ವದ ಲ್ಯಾಬ್ ಕಾರ್ಯಾರಂಭ ಮಾಡುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆತ್ತಿಯ ಮೇಲೆ ಕತ್ತಿ ತೂಗುವಂತೆ ಮಾಡಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ನಾಳೆಗೆ ಮೂರು ವರ್ಷದ ಸಂಭ್ರಮದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಹೊಸ ತಲೆ ನೋವು ಎದುರಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರನ ಸಹಭಾಗಿತ್ವದ ಕಂಪನಿಗೆ ನೀಡಿರುವ ಟೆಂಡರ್ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ,ಎಸಿಬಿಗೆ ದೂರು ನೀಡಿದರೂ ಯಾವುದಕ್ಕೆ ಕ್ಯಾರೆ ಎನ್ನದೆ ಲ್ಯಾಬ್‌ಗೆ ಅನುಮತಿ ನೀಡಲಾಗಿದ್ದು ಅದು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕಾರ್ಯಾರಂಭ ಮಾಡಿದೆ.
ಕಳೆದ ಹದಿನೈದು ದಿನದಿಂದ ಲ್ಯಾಬ್ ಕೆಲಸ ಆರಂಭವಾಗಿದ್ದು ಬರದ ಹಿನ್ನಲೆಯಲ್ಲಿ ಲ್ಯಾಬ್ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ದಿನಾಂಕ ಸಿಕ್ಕಿಲ್ಲ ಜನರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಸರಳವಾಗಿ ಪೂಜೆ ನೆರವೇರಿಸಿ ಲ್ಯಾಬ್ ಆರಂಭ ಮಾಡಿದ್ದೇವೆ ಎಂದು ಪಿಎಂಎಸ್‌ಎಸ್‌ವೈ ನಿರ್ದೇಶಕ ಪಿಜಿ ಗಿರೀಶ್ ಹೇಳಿದ್ದಾರೆ.
ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸುವ ಮಾತೇ ಇಲ್ಲ ಕಳೆದ ಏಳು ವರ್ಷಗಳ ಕಾಲ ಮ್ಯಾಟ್ರಿಕ್ಸ್‌ಗೆ ಗುತ್ತಿಗೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಪಾಲುದಾರರಾದರೆ ಅದು ಅವರ ಸಮಸ್ಯೆ. ನಾವು ಕಾನೂನು ಪ್ರಕಾರವೇ ಟೆಂಡರ್ ಪ್ರಕ್ರಿಯೆ ನಡೆಸಿದ್ದೇವೆ ಇಷ್ಟೆಲ್ಲ ವಿವಾದದಿಂದ ನಮಗೆ ಪ್ರಚಾರ ಸಿಕ್ಕಿದೆ ರಾಜ್ಯಾದ್ಯಂತ ಮಾಧ್ಯಮಗಳು ನಮ್ಮ ಆಸ್ಪತ್ರೆಯ ಹೆಸರನ್ನು ಪ್ರಸಿದ್ಧಿಗೆ ತಂದಿದ್ದೀರ ಎಂದು ನಿರ್ದೇಶಕ ಗಿರೀಶ್ ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ತಮ್ಮ ಪುತ್ರನಿಗೆ ನಿಯಮ ಮೀರಿ ಜಿ ಕೆಟಗರಿ ಸೈಟು ನೀಡಿ,ವಿವಾದದ ನಂತರ ವಾಪಸು ಮಾಡಿದ್ದರು. ಆಗ ಸೈಟು ವಾಪಸು ಮಾಡಿದ್ರೆ ಎಲ್ಲ ಸರಿಯಾಗುತ್ತಾ ಅಂತಾ ಇದೇ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ತೋಳೇರಿಸಿಕೊಂಡು ತಮ್ಮದೇ ಸ್ಟೈಲ್‌ನಲ್ಲಿ ಅಬ್ಬರಿಸಿದ್ದರು. ಈಗ ಮಗನ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Write A Comment