ಕರ್ನಾಟಕ

ಮೆಟ್ರೋದಲ್ಲಿ ಸೈಕಲ್ ಕೊಂಡೊಯ್ಯಲು ಅನುಮತಿ ನೀಡಬೇಕೆಂದು ಕೋರಿ ಅಧಿಕಾರಿಗಳಿಗೆ ಪತ್ರ ಬರೆದ ಬೆಂಗಳೂರು ಬಾಲಕ !

Pinterest LinkedIn Tumblr

Sanjith Rao

ಬೆಂಗಳೂರು: ಮೆಟ್ರೋ ರೈಲಿನ ಕೋಚ್ ಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಸೈಕಲ್ ಗಳನ್ನು ಕೊಂಡೊಯ್ಯಲು ಅನುಮತಿ ನೀಡಬೇಕೆಂದು ಕೋರಿ ಬೆಂಗಳೂರು ಬಾಲಕನೊಬ್ಬ ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾನೆ.

ಸಂಜಿತ್ ರಾವ್ ಎಂಬಾತ ಈ ಸಂಬಂಧ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಮಡಚಿ ಇಡುವಂತ ಸೈಕಲ್ ಗಳನ್ನು ಕೊಂಡೊಯ್ಯಲು ಅವಕಾಶ ನೀಡುವಂತೆ ಪತ್ರದಲ್ಲಿ ಬರೆದಿದ್ದಾನೆ.

ಮುಂದುವರಿದ ದೇಶದ ಮೆಟ್ರೋ ರೈಲುಗಳಲ್ಲಿ ಸೈಕಲ್ ಗಳನ್ನು ಕೊಂಡೊಯ್ಯಲು ಅವಕಾಶ ನೀಡುತ್ತಾರೆ. ಹಾಗೆಯೇ ಇಲ್ಲೂ ಕೂಡ ಅದೇ ರೀತಿ ಅವಕಾಶ ನೀಡಬೇಕೆಂದು 14 ವರ್ಷದ ಸಂಜಿತ್ ರಾವ್ ಬಿಎಂಆರ್ಸಿಎಲ್ ಅನ್ ಲೈನ್ ನಲ್ಲಿ ಆಂದೋಲನ ನಡೆಸುತ್ತಿದ್ದು, 465 ಮಂದಿ ಸಹಿ ನಡೆಸಿದ್ದಾರೆ.

ಸಂಜಿತ್ ರಾವ್ ಗ್ರೀಸ್ ನ ಅಥೆನ್ಸ್ ನಲ್ಲಿದ್ದಾಗ ಅಲ್ಲಿನ ಮೆಟ್ರೋ ರೈಲಿನಲ್ಲಿ ಫೋಲ್ಡಬಲ್ ಸೈಕಲ್ ಗಳನ್ನು ಕೋಚ್ ಗಳಲ್ಲಿ ಕೊಂಡೊಯ್ಯಲು ಅವಕಾಶವಿತ್ತು. ಹೀಗಾಗಿ ನಮ್ಮ ದೇಶದ ಮೆಟ್ರೋ ರೈಲುಗಳಲ್ಲಿ ಮಡಚಿ ಇಡುವಂತ ಸೈಕಲ್ ಗಳನ್ನು ಕೊಂಡೊಯ್ಯಲು ಅವಕಾಶ ನೀಡಿದರೇ ಪ್ರಯಾಣಿಕರೇ ಅನುಕೂಲವಾಗುತ್ತದೆ. ಬ್ಯಾಗೇಜ್ ನಲ್ಲಿ ಹಾಕಿದರೇ ಯಾವುದೇ ಸಮಸ್ಯೆ ಎಂದುರಾಗುವುದಿಲ್ಲ ಎಂಬುದು ಸಂಜಿತ್ ಅಭಿಪ್ರಾಯ.

ಸೈಕಲ್ ಗಾತ್ರ ದೊಡ್ಡದಿರುವುದರಿಂದ ಬ್ಯಾಗೇಜ್ ಗಳಲ್ಲಿ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಜೊತೆಗೆ ಪಾಕ್ ಅವರ್ಸ್ ನಲ್ಲಿ ಬೇರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಬಿಎಂಆರ್ ಸಿಎಲ್ ಹೆಲ್ಪ್ ಡೆಸ್ಕ್ ತಿಳಿಸಿದೆ.

Write A Comment