ಕರ್ನಾಟಕ

ಯುವಕನನ್ನು ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ

Pinterest LinkedIn Tumblr

killಬೆಂಗಳೂರು, ಮೇ 10- ವಿರೋಧಿ ಕಡೆಯವನೆಂದು ಭಾವಿಸಿ ಯುವಕನನ್ನು ಕೊಲೆ ಮಾಡಿದ್ದ ನಾಲ್ವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಮುನಿರಾಜು, ಮುಭಾರಕ್, ನವೀನ್‌ಕುಮಾರ್ ಮತ್ತು ವರುಣ್ ಬಂಧಿತ ಆರೋಪಿಗಳಾಗಿದ್ದು, ಶಿವಕುಮಾರ್ ಮತ್ತು ನವೀನ್ ಎಂಬುವರು ತಲೆ ಮರೆಸಿಕೊಂಡಿದ್ದಾರೆ. ಮೇ 7ರಂದು ರಾತ್ರಿ 11 ಗಂಟೆಯಲ್ಲಿ ಭವಾನಿ ನಗರದ ಸತೀಶ್ ಎಂಬುವರು ಕೊಡಬೇಕಾದ 15,000 ರೂ. ಹಣವನ್ನು ಪಡೆದುಕೊಂಡು ಹೋಗಲು ಶಂಕರ್ ತನ್ನ ಜೊತೆಯಲ್ಲಿ ಸಚಿನ್ ಮತ್ತು ಶುಭಂನನ್ನು ಕರೆದುಕೊಂಡು ಬಂದಿದ್ದ.

ಆ ಸಮಯದಲ್ಲಿ ಆರೋಪಿ ಮುನಿರಾಜು, ಸಹಚರರಾದ ಮುಭಾರಕನು ಹೆಣ್ಣು ಮಗು ಜನನವಾಗಿದೆ ಎಂದು ಸಂಭ್ರಮ ಆಚರಣೆ ಮಾಡುತ್ತಿದ್ದು, ಶಂಕರ್ ಮತ್ತು ಅವರ ಸ್ನೇಹಿತರನ್ನು ನೋಡಿ ನಮ್ಮ ವಿರೋಧಿಗಳ ಕಡೆಯವರೆಂದು ಭಾವಿಸಿದ್ದಾರೆ. ಈ ವೇಳೆ ಆರೋಪಿ ಮುನಿರಾಜು ತನ್ನ ಸಹಚರರಾದ ನವೀನ್ ಕುಮಾರ್, ವರುಣ್ ಶಿವಕುಮಾರ್ ಮತ್ತು ನವೀನ್‌ನನ್ನು ಬರಮಾಡಿಕೊಂಡು ಮುಭಾರಕನು ಸೇರಿದಂತೆ ಒಟ್ಟು 6 ಜನರು ಸಚಿನ್‌ನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ, ಶಂಕರ್ ಎಂಬುವನಿಗೆ ಡ್ರಾಗರ್ ನಿಂದ ಎಡಭುಜಕ್ಕೆ ತಿವಿದು ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿ ಪರಾರಿಯಾಗಿದ್ದರು.

ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕೊಲೆ ಯತ್ನ ಹಾಗೂ ದೊಂಭಿ ಪ್ರಕರಣದ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದು, ತಲೆ ಮರೆಸಿಕೊಂಡಿರುವವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.

Write A Comment