ಕರ್ನಾಟಕ

ಆರುಂಧತಿಯಾರ್ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ

Pinterest LinkedIn Tumblr

aruಭದ್ರಾವತಿ: ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆಗಳ ಹಾಗೂ ಭದ್ರಾ ಡ್ಯಾಂ ಸ್ಥಾಪನೆ ಕಾಲದಿಂದಲೂ ವಾಸಿಸುತ್ತಿರುವ ಆರುಂಧತಿಯಾರ್ ಸಮಾಜದ ಜನರಿಗೆ ಜಾತಿ ದೃಢೀಕರಣ ಪತ್ರ ನೀಡಲು 2 ತಿಂಗಳ ಹಿಂದೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ಗಳಿಗೆ ಸರಕಾರ ಆದೇಶ ನೀಡಿದೆ ಎಂದು ಶಾಸಕ ಎಂ.ಜೆ.ಅಪ್ಪಾಜಿ ಹೇಳಿದರು.

ಹಳೇನಗರದ ವೀರಶೈವ ಸಭಾ ಭವನದಲ್ಲಿ ಆರುಂಧತಿಯಾರ್ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಸಮಾವೇಶ ಹಾಗೂ ಅಂಬೇಡ್ಕರರ 125 ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.

ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಿಂದ ವಲಸೆ ಬಂದ ಜನಾಂಗವೆಂದು 4 ವರ್ಷಗಳ ಹಿಂದೆ ತಹಸೀಲ್ದಾರ್ ಕಚೇರಿಯಲ್ಲಿ ಜಾತಿ ದೃಢೀಕರಣ ಪತ್ರ ನೀಡದೆ ಸ್ಥಗಿತಗೊಳಿಸಿರುತ್ತಾರೆ. ಇದರಿಂದ ಮಕ್ಕಳ ಶಿಕ್ಷಣಕ್ಕೆೆ ಹಾಗೂ ಸರಕಾರದ ಸವಲತ್ತುಗಳನ್ನು ಪಡೆಯಲು ಅಸಾಧ್ಯವಾಗಿ ಈ ಸಮಾಜದ ಜನರು ತತ್ತರಿಸುವಂತಾಗಿದೆ.

ಬಡವರು ಸರಕಾರದಿಂದ ದೊರೆಯುವ ನಿವೇಶನ, ಮನೆ ಮುಂತಾದ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇಂತಹ ಸಮಸ್ಯೆೆಗಳು ಮುಂದೆ ಮರುಕಳಿಸದಂತೆ ಸರಕಾರ ಶಾಶ್ವತವಾಗಿ ನೆಲಸಿರುವವರಿಗೆ ಜಾತಿ ದೃಢೀಕರಣ ಪತ್ರ ನೀಡುವಂತೆ ಆದೇಶ ನೀಡಿದೆ. ಸಮಸ್ಯೆೆಗಳು ಇದ್ದಲ್ಲಿ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ದೃಢೀಕರಣ ನೀಡಲು ಚಿಂತನೆ ನಡೆಸಲಾಗುವುದೆಂದು ಹೇಳಿದರು.

ಡಿವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಚ್.ರಾಚಪ್ಪ ಉಪನ್ಯಾಸ ನೀಡಿದರು. ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆೆ ನಿರ್ದೇಶಕಿ ಅನುರಾಧಾ ಪಟೇಲ್, ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕುಪ್ಪಸ್ವಾಮಿ ಸಮಾಜದ ಅಧ್ಯಕ್ಷ ಎಂ.ಅಣ್ಣಾದೊರೈ, ಜಿಪಂ ಸದಸ್ಯ ಮಣಿಶೇಖರ್, ನಗರಸಭೆ ಸದಸ್ಯರಾದ ಗುಣಶೇಖರ್, ಮಣಿ, ನಗರಸಭೆ ಮಾಜಿ ಅಧ್ಯಕ್ಷೆ ವೈ.ರೇಣುಕಮ್ಮ, ಮುಖಂಡರಾದ ಶೇಖರ್, ಬಿ.ಎನ್.ರಾಜು, ರಾಜೇಂದ್ರ, ಕಣ್ಣನ್, ಶಿವಾಜಿ, ನಗರಸಭೆ ಮಾಜಿ ಸದಸ್ಯ ಚೆನ್ನಪ್ಪ ಇದ್ದರು. ಸಭೆಗೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಿ.ಎಚ್.ರಸ್ತೆೆ, ಡಾ.ರಾಜಕುಮಾರ್ ರಸ್ತೆ, ಹಾಲಪ್ಪವೃತ್ತ, ಮಾಧವಚಾರ್ ವೃತ್ತ, ರಂಗಪ್ಪವೃತ್ತ ಮೂಲಕ ಸಮಾರಂಭದ ಸ್ಥಳಕ್ಕೆ ಮೆರವಣಿಗೆ ನಡೆಯಿತು.

Write A Comment