ಕರ್ನಾಟಕ

ಮೈಸೂರು ನಗರವನ್ನು ತಂಪಾಗಿಸಿದ ಮಳೆ

Pinterest LinkedIn Tumblr

rainಮೈಸೂರು: ನಗರದಲ್ಲಿ ಶುಕ್ರವಾರ ಮತ್ತು ಭಾನುವಾರ ಸುರಿದ ಮಳೆಯಿಂದ ವಾತಾವರಣ ತಂಪಾಯಿತಲ್ಲದೆ, ನೀರಿನ ಸಮಸ್ಯೆೆ ನಿವಾರಿಸುವ ದಿಸೆಯಲ್ಲೂ ಅನುಕೂಲವಾಗಿದೆ. ಒಂದು ವಾರದ ಹಿಂದೆ ಜಿಲ್ಲೆೆಯ ಹಲವು ತಾಲೂಕುಗಳಲ್ಲಿ ವ್ಯಾಾಪಕ ಮಳೆಯಾಗಿತ್ತು. ಆದರೆ ನಗರದಲ್ಲಿ ಸಮರ್ಪಕವಾಗಿ ಮಳೆ ಬಿದ್ದಿರಲಿಲ್ಲ.

ಕೆಲವೊಮ್ಮೆ ಗುಡುಗು ಸಹಿತ ಮಳೆ ಆರಂಭವಾಗಿದ್ದು, ಅದರ ಅಬ್ಬರ ಕಂಡು ‘ಓಹೋ ಇವತ್ತು ಒಳ್ಳೆ ಮಳೆಯಾಗ್ತದೆ’ ಎಂದುಕೊಂಡಿದ್ದವರಿಗೆ ನಿರಾಸೆಯಾಗಿತ್ತು. ಏಕೆಂದರೆ ಗುಡುಗಿನ ಜತೆಗೇ ಬೀಸಿದ ರಭಸದ ಗಾಳಿ ಮಳೆ ಮೋಡಗಳನ್ನು ಚದುರಿಸಿದ್ದರಿಂದ ಮಳೆಯೂ ಸಹ ಚದುರಿದಂತೆಯೇ ಸುರಿಯಿತು.

ಭಾನುವಾರ ಸಂಜೆ 4 ಗಂಟೆಗೆ ಆರಂಭವಾದ ಮಳೆ 2 ತಾಸುಗಳಿಗೂ ಹೆಚ್ಚು ಕಾಲ ಸುರಿಯಿತು. ನಂತರವೂ ತುಂತುರು ಮಳೆ ಬರುತ್ತಲೇ ಇತ್ತು. ಆಗಾಗ ಗುಡುಗಿನ ಸದ್ದು ಕೇಳಿಬಂತು. ಇದರಿಂದ ಒಂದು ವಾರದ ಹಿಂದೆ 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದ ತಾಪಮಾನ ಈಗ 32 ಡಿಗ್ರಿಗಿಳಿದಿದೆ. ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರು ಇದೀಗ ತಂಪು ಹವೆಯಲ್ಲಿ ಉಲ್ಲಸಿತರಾಗಿ ವಿಹರಿಸುತ್ತಿದ್ದಾರೆ. ಮೈಸೂರು ನಗರ ಮತ್ತು ಜಿಲ್ಲೆೆಯಲ್ಲಿ ಇನ್ನೂ 2 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Write A Comment