ಕರ್ನಾಟಕ

ಕಾಲ್ ಗರ್ಲ್ ಮೋಹಕ್ಕೆ ಬಲಿಯಾಗಿ ಐಪ್ಯಾಡ್, ಚಿನ್ನಾಭರಣ ಕಳೆದುಕೊಂಡ ಮಾಜಿ ಸಚಿವ

Pinterest LinkedIn Tumblr

callgirl

ಬೆಂಗಳೂರು: ಕಾಲ್ ಗರ್ಲ್ ಅನ್ನು ಪಲ್ಲಂಗಕ್ಕೆ ಕರೆದಿದ್ದ ತಮಿಳುನಾಡಿನ ಮಾಜಿ ಸಚಿವರೊಬ್ಬರು ಐಪ್ಯಾಡ್, ಚಿನ್ನಾಭರಣ ಕಳೆದುಕೊಂಡಿರುವ ಘಟನೆ ನಗರದ ಪಂಚತಾರಾ ಹೊಟೇಲ್ ನಲ್ಲಿ ನಡೆದಿದೆ.

ಹಳೇ ಏರ್ ಪೋರ್ಟ್ ರಸ್ತೆಯಲ್ಲಿರುವ ಲೀಲಾ ಪ್ಯಾಲೇಸ್ ಹೊಟೇಲ್ ನಲ್ಲಿ ತಂಗಿದ್ದ ತಮಿಳುನಾಡಿನ ಮಾಜಿ ಸಚಿವ ವಸಂತ ರಾಜನ್ ಅವರು ಹೈದರಾಬಾದ್ ಮೂಲದ ಕಾಲ್ ಗರ್ಲ್ ಒಬ್ಬಳನ್ನು ಕರೆಸಿಕೊಂಡಿದ್ದಾರೆ. ಮದ್ಯದೊಂದಿಗೆ ಹೆಣ್ಣಿನ ಜತೆ ಸರಸ ಚೆನ್ನಾ ಎಂದು ಮಾಜಿ ಸಚಿವರು ಮದ್ಯ ತರಲು ರೂಂನಿಂದ ಹೊರಗೆ ಹೋಗಿದ್ದಾರೆ. ಇಂತಹ ಸಂದರ್ಭಕ್ಕಾಗಿ ಕಾದಿದ್ದ ಕಾಲ್ ಗರ್ಲ್ ವಸಂತ್ ರಾಜನ್ ಅವರ ಐಪ್ಯಾಡ್, ಚಿನ್ನದ ಸರ, ನಗದು ಹಣ ತೆಗೆದುಕೊಂಡು ಪರಾರಿಯಾಗಿದ್ದಾಳೆ.

ಈ ಸಂಬಂಧ ಚಾಮರಾಜನಗರ ಜಿಲ್ಲೆಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಅಧ್ಯಕ್ಷ ರಿತ್ವಿಕ್ ಶೆಟ್ಟಿ ಎಂಬುವರು ಜೀವನ್ ಭೀಮಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಚಿನ್ನಾಭರಣದೊಂದಿಗೆ ಪರಾರಿಯಾಗಿರುವ ಕಾಲ್ ಗರ್ಲ್ ಗಾಗಿ ಹುಡುಕಾಟ ನಡೆಸಿದ್ದಾರೆ.

Write A Comment