ಕನ್ನಡ ವಾರ್ತೆಗಳು

ಉಳ್ಳಾಲದಲ್ಲಿ ಮುಂದುವರಿದ ದುಷ್ಕರ್ಮಿಗಳ ಅಟ್ಟಹಾಸ : ತೊಕ್ಕೊಟ್ಟು ಮಸೀದಿ ಬಳಿ ಯುವಕನ ಮೇಲೆ ತಲವಾರು ದಾಳಿ

Pinterest LinkedIn Tumblr

Ullala_attack_dhanarj

ಮಂಗಳೂರು / ಉಳ್ಳಾಲ, ಎಪ್ರಿಲ್.29: ಶುಕ್ರವಾರ ಸಂಜೆ ಚಿಟಿ ಫಂಡ್ ಕಲೆಕ್ಷನ್‌ಗೆಂದು ಹೊರಟ ಯುವಕನನ್ನು ಮಸೀದಿ ಬಳಿ ಅಡ್ಡಗಟ್ಟಿದ ಗುಂಪೊಂದು ಯುವಕನ ಮೇಲೆ ತಲವಾರು ಬೀಸಿದ ಪರಿಣಾಮ ಭುಜಕ್ಕೆ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಟಿ.ಸಿ ರೋಡಿನಲ್ಲಿ ನಡೆದಿದೆ.

ತೊಕ್ಕೊಟ್ಟು ಚರ್ಚ್ ರೋಡಿನ ಅಕ್ಕರೆಕೆರೆ ನಿವಾಸಿ ದಾಮೋದರ್ ಗಾಣಿಗರ ಪುತ್ರ ಧನರಾಜ್(20)ತಲವಾರು ದಾಳಿಗೊಳಗಾದವರು.

ಧನರಾಜ್ ಸುಗ್ಗಿ ಚಿಟ್ ಫಂಡಿನಲ್ಲಿ ಉದ್ಯೋಗಿಯಾಗಿದ್ದು ಇಂದು ಸಂಜೆ 4.30 ರ ಹೊತ್ತಿಗೆ ಮನೆಯಿಂದ ಆಕ್ಟಿವಾ ಹೋಂಡಾದಲ್ಲಿ ಫಂಡ್ ಕಲೆಕ್ಷನ್‌ಗೆಂದು ಹೊರಟಿದ್ದು,ಟಿ.ಸಿ ರೋಡ್ ಮಸೀದಿ ಬಳಿ ಐದಾರು ಅಪರಿಚಿತ ಯುವಕರು ಜಮಾಯಿಸಿದ್ದರೆನ್ನಲಾಗಿದೆ.

ಧನರಾಜ್ ಸ್ಕೂಟರ್ ಚಲಾಯಿಸಿ ಬರುತ್ತಿದ್ದಂತೆ ಇಬ್ಬರು ದುಷ್ಕರ್ಮಿಗಳು ತಲವಾರು ಬೀಸಿದ ಪರಿಣಾಮ ಧನರಾಜ್ ಬಲ ಭುಜಕ್ಕೆ ಗಾಯವಾಗಿದ್ದು ಸಮಯ ಪ್ರಜ್ನೆಯಿಂದ ಪ್ರಾಣ ಉಳಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಕಳೆದ ಹಲವಾರು ದಿವಸಗಳಿಂದ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಿರಂತರ ಅಹಿತಕರ ಘಟನೆಗಳು ನಡೆಯುತ್ತಿದ್ದರೂ ಠಾಣೆಗೆ ಕಳೆದ ೮ ತಿಂಗಳುಗಳಿಂದ ಖಾಲಿ ಇರುವ ಇನ್ಸ್‌ಪೆಕ್ಟರ್ ಹುದ್ದೆಗೂ ಅಧಿಕಾರಿಯನ್ನು ನಿಯೋಜಿಸಲು ಪೊಲೀಸ್ ಇಲಾಖೆ ಕ್ರಮಕೈಗೊಂಡಿಲ್ಲ.

Write A Comment