ಮನೋರಂಜನೆ

ವಿಶ್ವ ಕಿಕ್ ಬಾಕ್ಸಿಂಗ್: ಭಾರತವನ್ನು ಪ್ರತಿನಿಧಿಸಲಿರುವ 7ರ ಹರೆಯದ ಕಾಶ್ಮೀರಿ ಬಾಲಕಿ

Pinterest LinkedIn Tumblr

Tajamul-Islam

ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಉತ್ತರ ಕಾಶ್ಮೀರದ ತಜಮುಲ್ ಇಸ್ಲಾಂ ಇದೀಗ ಇಟಾಲಿಯಲ್ಲಿ ನಡೆಯಲಿರುವ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಇಟಾಲಿಯ ಆಂಡ್ರಿಯಾದಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮೊದಲ ಕಾಶ್ಮೀರಿ ಬಾಲಕಿ ಎಂಬ ಖ್ಯಾತಿಗೆ ತಜಮುಲ್ ಇಸ್ಲಾಂ ಪಾತ್ರಳಾಗಿದ್ದಾಳೆ.

2015ರಲ್ಲಿ ನವದೆಹಲಿಯ ತಾಲ್ಕಟೊರಾ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಸಬ್ ಜೂನಿಯರ್ ವಿಭಾಗದಲ್ಲಿ ತಜಮುಲ್ ಚಿನ್ನದ ಪದಕವನ್ನು ಗೆದ್ದಿದ್ದಳು. ಈ ಸಾಧನೆ ಆಕೆಯನ್ನು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವಂತೆ ಮಾಡಿದೆ.

ಇಟಲಿಯಲ್ಲಿ ನಡೆಯಲಿರುವ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಅವಕಾಶ ಲಭಿಸಿದ್ದು, ಖುಷಿ ತಂದಿದೆ. ನಾನು ನನ್ನ ತಾಯಿ ಇಟಲಿಗೆ ತೆರಳುತ್ತಿರುವುದಾಗಿ ತಜಮುಲ್ ತಿಳಿಸಿದ್ದಾಳೆ.

ತಜಮುಲ್ ಇಸ್ಲಾಂ ಶ್ರೀನಗರದಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಬಂಡಿಪೋರದ ಟಾರ್ಕ್ ಪೋರ ಗ್ರಾಮದಲ್ಲಿ ವಾಸವಾಗಿದ್ದು, ಹುಡುಗ ಹುಡುಗಿಯರಿಗೆ ಮಾರ್ಷಲ್ ಆರ್ಟ್ಸ್ ಕಳಿಸುವ ಖಾಸಗಿ ಅಕಾಡೆಮಿಯೊಂದಕ್ಕೆ 2014ರಲ್ಲಿ ತಜಮುಲ್ ಇಸ್ಲಾಂ ಸೇರಿದ್ದು ಅಲ್ಲಿಂದ ಕಿಕ್ ಬಾಕ್ಸಿಂಗ್ ಕಡೆ ಆಕರ್ಷಣೆಗೊಂಡಿದ್ದಳು.

Write A Comment