ಕರ್ನಾಟಕ

ಮೈಸೂರು : ಬಿಸಿಲಿನ ಬೇಗೆಯಲ್ಲಿ ಬೆಂದ ಸಂಚಾರಿ ಪೊಲೀಸರ ದಾಹ ತೀರಿಸಿದ ನೀರು ವಿತರಣೆ ಕಾರ್ಯಕ್ರಮ

Pinterest LinkedIn Tumblr

poಮೈಸೂರು, ಏ.28- ನಗರದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ಹತ್ತಿರುವಾಗುತ್ತಿದ್ದು, ಉರಿಬಿಸಿಲು ತಾಳುವುದು ನಿಜಕ್ಕೂ ಕಷ್ಟಕರವಾಗಿದೆ. ಹೊರಾಂಗಣದಲ್ಲಿದ್ದಾಗ ಹವಾ ನಿಯಂತ್ರಿತ ವ್ಯವಸ್ಥೆಯನ್ನೋ ಅಥವಾ ನೆರಳನ್ನೋ ಆಶ್ರಯಿಸುವುದು ಅನಿವಾರ್ಯವಾಗಿದೆ. ಆದರೆ, ಸಂಚಾರ ವಿಭಾಗದ ಪೊಲೀಸರು ಬೆವರಿಳಿಸುತ್ತಿದ್ದಾರೆ. ರಸ್ತೆಗಳಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಗಿದ್ದು, ಉರಿಬಿಸಿಲು, ಶಬ್ಧ ಮತ್ತು ವಾಯು ಮಾಲಿನ್ಯ ಸಹಿಸಬೇಕಾಗಿದೆ.

ಈ ಅಂಶ ಗಮನದಲ್ಲಿಟ್ಟುಕೊಂಡು ಕೊಲಂಬಿಯ ಏಷಿಯಾ ಆಸ್ಪತ್ರೆ ಮೈಸೂರು ಸಂಚಾರ ವಿಭಾಗದ ಪೊಲೀಸರಿಗೆ ಕುಡಿಯುವ ನೀರಿನ ಬಾಟಲ್ ಒದಗಿಸುವ ಕಾಯಕಕ್ಕೆ ಮುಂದಾಗಿದೆ. ಒಂದು ವಾರ ನಡೆಯುವ ಈ ಅಭಿಯಾನದಲ್ಲಿ ಆಸ್ಪತ್ರೆ ಆಡಳಿತವೂ ಅಂದಾಜು 150 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ, ಪೂರ್ವ ನಿಯೋಜಿತ ಮಾರ್ಗದಲ್ಲಿ ನಡೆಯಲಿದೆ. ಮೈಸೂರಿಗರು ಈ ಉರಿಬಿಸಿಲು ತಡೆಯಲು ಸಜಗಬೇಕಾದ ಅಗತ್ಯವಿದೆ. ಆದಷ್ಟು ನೀರು ಕುಡಿಯುವುದು. ಅಂದರೆ ನೀರು, ಹಣ್ಣಿನ ಪಾನೀಯ, ಎಳನೀರು, ಮಜ್ಜಿಗೆ, ಎಲೆಕ್ಟ್ರೋಲೈಟ್ ಮಿಶ್ರಣ ಮಾಡಿದ ನೀರು ಕುಡಿದು ಆದಷ್ಟು ದೇಹವನ್ನು ತಂಪಾಗಿ ಇಡಬೇಕಾಗಿದೆ ಎನ್ನುತ್ತಾರೆ ಕೊಲಂಬಿಯ ಏಷಿಯಾ ಹಾಸ್ಪಿಟಲ್‌ನ ವೈದ್ಯಕೀಯ ಸೇವೆ ಮುಖ್ಯಸ್ಥ ಡಾ.ನಾಗ ನಿಶ್ಚಲ್ ಅವರು.

ಈ ನಿಟ್ಟಿನಲ್ಲಿ ದಿನದ 24 ಗಂಟೆ ಸೇವೆ ಒದಗಿಸುತ್ತಿರುವ ಪೊಲೀಸರಿಗಾಗಿ ಕೊಲಂಬಿಯ ಏಷಿಯಾ ಹಾಸ್ಪಿಟಲ್, ಪಾನಿ ಟು ಪೊಲೀಸ್ ಹೆಸರಿನ ಕಾರ್ಯಕ್ರಮ ಹಮ್ಮಿಕೊಂಡಿದೆ. ನಿಮ್ಮ ಮನೆ, ಕಚೇರಿ ಬಳಿ ಪೊಲೀಸರು ಸೇವೆಯಲ್ಲಿ ಇದ್ದರೆ ಅವರಿಗೆ ನೀರು ಅಥವಾ ಮಜ್ಜಿಗೆ ಒದಗಿಸಬೇಕು ಎಂದು ಕೊಲಂಬಿಯ ಏಷಿಯಾ ಹಾಸ್ಪಿಟಲ್‌ನ ಪ್ರಧಾನ ವ್ಯವಸ್ಥಾಪಕ ಡಾ.ವಿಜುರಾಜನ್ ಹೇಳಿದರು. ನಗರ ಪೊಲೀಸ್ ಕಮೀಷನರ್ ಡಾ.ಬಿ.ದಯಾನಂದ ಮಾತನಾಡಿ, ಮೈಸೂರಿನ ಕೊಲಂಬಿಯ ಏಷಿಯಾ ಹಾಸ್ಪಿಟಲ್, ರೆಡ್ ಎಫ್‌ಎಂ ಸಹಯೋಗದಲ್ಲಿ ನಿಜಕ್ಕೂ ಉತ್ತಮ ಕೆಲಸ ಮಾಡುತ್ತಿದೆ. ಬೇಸಿಗೆ ಅವಧಿಯಲ್ಲಿ ಬಿಸಿಲಿನ ಹೊಡೆತದಿಂದ ಪ್ರe ತಪ್ಪುವ ಸಂಭವವಿದೆ.

ಇದನ್ನು ತಪ್ಪಿಸಲು ಆದಷ್ಟು ನೀರು ಕುಡಿಯುವುದು ಅಗತ್ಯ. ಕೊಲಂಬಿಯಾ ಏಷಿಯಾ ಹಾಸ್ಪಿಟಲ್ ಇಂಥದೊಂದು ಉತ್ತಮ ನಿರ್ಧಾರ ಕೈಗೊಂಡಿದ್ದು, ಇತರೆ ಸಂಘಟನೆಗಳು ಇದೇ ದಿಕ್ಕಿನಲ್ಲಿ ನಡೆಯಲಿವೆ ಎಂದು ತಿಳಿಸಿದರು. ಮೈಸೂರು ಮಿತ್ರ ಪತ್ರಿಕೆ ವ್ಯವಸ್ಥಾಪಕ ಸಂಪಾದಕ ವಿಕ್ರಮ್ ಮುತ್ತಣ್ಣ, ಪೊಲೀಸ್ ಕಮೀಷನರ್ ಬಿ.ದಯಾನಂದ, ಸಂಚಾರ ವಿಭಾಗದ ಡಿಸಿಪಿ ಎನ್.ಡಿ.ಬಿರ್ಜೆ, ಸಂಚಾರ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಕಿರಣ್, ನರಸಿಂಗರಾಜ ಪೊಲೀಸ್ ವಿಭಾಗದ ಕಾನೂನು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಶಬ್ಬೀರ್ ಭಾಗವಹಿಸಿದ್ದರು.

Write A Comment