ರಾಷ್ಟ್ರೀಯ

ಅಮೇರಿಕ ನೀಡಿದ ಎಫ್-16 ಜೆಟ್‌ಗಳನ್ನು ಪಾಕ್ ಭಾರತದ ವಿರುದ್ಧ ಬಳಸುವುದೇ..?

Pinterest LinkedIn Tumblr

jetವಾಷಿಂಗ್ಟನ್,ಏ.28- ಒಬಾಮ ಆಡಳಿತ ಪಾಕಿಸ್ತಾನಕ್ಕೆ ಎಫ್-16 ವಿಮಾನಗಳನ್ನು ಮಾರಾಟ ಮಾಡಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅಮೆರಿಕ ಸಂಸದರು, ಈ ಯುದ್ಧ ವಿಮಾನಗಳನ್ನು ಆ ರಾಷ್ಟ್ರ ಭಾರತದ ವಿರುದ್ದ ಬಳಸಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಬರಾಕ್ ಒಬಾಮ ಸರ್ಕಾರವು ಪಾಕಿಸ್ತಾನಕ್ಕೆ ಅತ್ಯಂತ ಶಕ್ತಿಶಾಲಿಯಾದ ಎಂಟು ಎಫ್-16 ಯುದ್ದ ಜೆಟ್ ವಿಮಾನಗಳನ್ನು ನೀಡಲು ನಿರ್ಧರಿಸಿದ್ದು, ಇಸ್ಲಾಮಾಬಾದ್ ಆ ಜೆಟ್ ಸಮರ ವಿಮಾನಗಳನ್ನು ಭಯೋತ್ಪಾದಕತೆ ವಿರುದ್ಧ ಹೋರಾಟಕ್ಕೆ ಬಳಸುವ ಬದಲು ಭಾರತದ ವಿರುದ್ಧವೇ ಬಳಸುವ ಸಾಧ್ಯತೆಗಳಿವೆ ಎಂದು ಹೇಳಿರುವ ಸಂಸತ್ ಸದಸ್ಯರು, ಒಬಾಮ ಆಡಳಿತ ಈ ಬಗ್ಗೆ ಮರುಪರಿಶೀಲನೆ ನಡೆಸುವುದು ಸೂಕ್ತ ಎಂಬ ಸಲಹೆ ನೀಡಿದ್ದಾರೆ.

ಪಾಕಿಸ್ತಾನವು ಯುದ್ಧಭೂಮಿಯಲ್ಲಿ ಅತ್ಯಂತ ಪ್ರಬಲ ಶಕ್ತಿಯ ಎಫ್-16 ಜೆಟ್ ಯುದ್ಧ ವಿಮಾನಗಳನ್ನು ಅಮೆರಿಕ ಪಾಕಿಸ್ತಾನಕ್ಕೆ ಮಾರಾಟ ಮಾಡಲು ತೀರ್ಮಾನಿಸಿದೆ. ಆದರೆ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಉತ್ತಮವಾಗಿಲ್ಲ. ಅಷ್ಟೇ ಅಲ್ಲದೆ ಇತರ ನೆರೆ-ಹೊರೆ ದೇಶಗಳೊಂದಿಗೂ ಪಾಕ್ ಸಂಬಂಧ ಸುಧಾರಿಸಿಲ್ಲ. ಪಾಕಿಸ್ತಾನದ ಮನಸ್ಥಿತಿ ಕೂಡ ಬದಲಾದಂತೆ ಕಾಣುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಭಯೋತ್ಪಾದನೆ ವಿರುದ್ಧ ಸಮರಕ್ಕೆ ಮುಂದಾಗದೆ ಇಸ್ಲಾಮಾಬಾದ್, ಭಾರತವೂ ಸೇರಿದಂತೆ ಪ್ರಾಂತ್ಯದ ಇತರ ದೇಶಗಳ ವಿರುದ್ದ ಈ ವಿಮಾನಗಳನ್ನು ಬಳಸಿಕೊಳ್ಳುವುದಿಲ್ಲ ಎಂಬ ಭರವಸೆ ಎಲ್ಲಿದೆ.

ಹಾಗಾಗಿ ಅಮೆರಿಕ ಅಧ್ಯಕ್ಷ ಒಬಾಬ ಸರ್ಕಾರ ಈ ಕುರಿತಂತೆ ಮರುಪರಿಶೀಲನೆ ನಡೆಸಬೇಕು ಎಂದು ನಾವು ಆಗ್ರಹಿಸಿದ್ದೇವೆಂದು ಕಾಂಗ್ರೆಸ್ ಸಂಸದ ಮ್ಯಾಟ್ ಸಲ್ಮೋನ್ ಕಾಂಗ್ರೆಸ್ ಸಮಾವೇಶದಲ್ಲಿ ಹೇಳಿದ್ದಾರೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ವಿಶೇಷ ಅಮೆರಿಕ ಪ್ರತಿನಿಧಿ ರಿಚರ್ಡ್ ಓಲ್‌ಸನ್(ಒಬಾಮ ಆಡಳಿತಪರ ಪ್ರತಿನಿಧಿ), ವಿದೇಶಾಂಗ ವ್ಯವಹಾರಗಳ ಸಮಿತಿ ಹಾಗೂ ಏಷ್ಯಾ ಮತ್ತು ಫೆಸಿಫಿಕ್ ಉಪಸಮಿತಿ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರು ಸಮಾವೇಶದಲ್ಲಿ ಮ್ಯಾಟ್ ಸಲ್ಮೋನ್ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದರು.

ಪಾಕಿಸ್ತಾನಕ್ಕೆ ಒದಗಿಸುತ್ತಿರುವ ಮಿಲಿಟರಿ ನೆರವು, ಎಫ್-16 ವಿಮಾನಗಳು ಸದ್ಬಳಕೆಗಿಂತ, ದುರ್ಬಳಕೆಯಾಗುವ ಸಾಧ್ಯತೆಗಳೇ ಹೆಚ್ಚಿವೆ. ಇವನ್ನೆಲ್ಲ ಪಾಕಿಸ್ತಾನಿ ಸೇನೆ, ನೆರೆಯ ರಾಷ್ಟ್ರಗಳ ಮೇಲೆ ಪ್ರಯೋಗಿಸಬಹುದೆಂಬ ಕಳವಳ ನಮಗೂ ಇದೆ ಎಂದು ಕಾಂಗ್ರೆಸ್‌ನ ಮತ್ತೊಬ್ಬ ಸಂಸದ ಬ್ರಾಡ್ ಶೆರ್ಮಾನ್ ಹೇಳಿದ್ದಾರೆ. ನಾವು ಈ ಯುದ್ದ ವಿಮಾನಗಳನ್ನು ಪಾಕಿಸ್ತಾನಕ್ಕೆ ನೀಡುತ್ತಿರುವುದು ಭಯೋತ್ಪಾದನೆ ನಿಗ್ರಹಕ್ಕೆ ಹೊರತು ಭಾರತದ ಮೇಲೆ ಯುದ್ಧ ಮಾಡುವುದಕ್ಕಲ್ಲ ಎಂದು ಬ್ರಾಡ್ ಶೆರ್ಮನ್ ತಿಳಿಸಿದ್ದಾರೆ. ವಿಶೇಷವೆಂದರೆ, ಪ್ರಸ್ತುತ ಅಮೆರಿಕ ಸೆನೆಟ್ 700 ಮಿಲಿಯನ್(700 ದಶಲಕ್ಷ) ಡಾಲರ್‌ಗಳ ಮೌಲ್ಯದ ಎಫ್-16 ವಿಮಾನಗಳನ್ನು ಪಾಕಿಸ್ತಾನಕ್ಕೆ ನೀಡುವ ಒಬಾಮ ಆಡಳಿತದ ನಿರ್ಧಾರಕ್ಕೆ ತಡೆವೊಡ್ಡಿದೆ.

ಪಾಕಿಸ್ತಾನ ಈ ಎಲ್ಲ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಂಡು ಭಾರತದ ಮೇಲೆ ಯುದ್ಧ ಸಾರುವುದಿಲ್ಲ ಎಂಬ ಬಗ್ಗೆ ನಿಮಗೆ ಖಾತ್ರಿ ಇದೆಯೇ ಎಂಬುದನ್ನು ನೀವು ಮತ್ತೊಮ್ಮೆ ಖಚಿತಪಡಿಸಿಕೊಳ್ಳಬೇಕು ಎಂದು ಬ್ರಾಡ್ ಸಲ್ಮೋನ್ ಆಘ್ಪಾನಿಸ್ತಾನ, ಪಾಕಿಸ್ತಾನಗಳ ವಿಶೇಷ ಪ್ರತಿನಿಧಿ ರಿಚರ್ಡ್ ಓಲ್‌ಸನ್ ಅವರನ್ನು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.

Write A Comment