ಕರ್ನಾಟಕ

ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ : 6 ಮಂದಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು

Pinterest LinkedIn Tumblr

veಬೆಂಗಳೂರು,ಏ.28-ಕೆಲಸ ಕೊಡಿಸುವುದಾಗಿ ಯುವತಿಯರನ್ನು ಮಾನವ ಸಾಗಾಣೆ ಮಾಡಿಕೊಂಡು ಬಂದು ಲಾಡ್ಜ್‌ನಲ್ಲಿ ವೇಶ್ಯವಾಟಿಕೆ ದಂಧೆಗೆ ದೂಡಿದ್ದ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಶ್ರೀ ಬಾಲಾಜಿ ಕಂಪರ್ಟ್ಸ್ ಡೀಲಕ್ಸ್ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಬಳ್ಳಾರಿ, ಹಾಸನ, ಕನಕಪುರ, ಚಾಮರಾಜನಗರ, ತುಮಕೂರು, ಬೆಂಗಳೂರಿನ ಆರು ಮಂದಿಯನ್ನು ಬಂಧಿಸಿ ಪಶ್ಚಿಮ ಬಂಗಾಳ, ತೆಲಂಗಾಣದ ಇಬ್ಬರು ಯುವತಿಯರು ಸೇರಿದಂತೆ ಐದು ಯುವತಿಯರನ್ನು ರಕ್ಷಿಸಿದ್ದಾರೆ.

ಆರೋಪಿಗಳಿಂದ ಏಳು ಮೊಬೈಲ್ ಫೋನ್ ಹಾಗೂ 9,500 ಹಣ ವಶಪಡಿಸಿಕೊಂಡಿದ್ದಾರೆ. ವಿಜಯನಗರದ ನಜ್ಮಾ ಎಂಬ ಮಹಿಳೆ ಇತರೆ ಆರೋಪಿಗಳಿಂದ ಸೇರಿ ಹೊರ ರಾಜ್ಯದ ಹೆಣ್ಣು ಮಕ್ಕಳನ್ನು ಉದ್ಯೋಗದ ಆಮಿಷ ನೀಡಿ ವೇಶ್ಯಾವಾಟಿಕೆಗೆ ದೂಡುತ್ತಿದದ್ದು ಹೆಚ್ಚಿನ ವಿಚಾರಣೆಯಿಂದ ತಿಳಿದುಬಂದಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರೆದಿದೆ.

Write A Comment