ರಾಷ್ಟ್ರೀಯ

ಮದುವೆ ಸಮಾರಂಭದಲ್ಲಿ ಐಸ್‌ಕ್ರೀಂ ಸಿಗದಿದ್ದಕ್ಕೆ ಮದುವೆ ರದ್ದು ..!

Pinterest LinkedIn Tumblr

iceಮಥುರಾ(ಉ.ಪ್ರ),ಏ.28-ಮದುವೆ ಸಮಾರಂಭದಲ್ಲಿ ಬೀಗರಿಗೆ ಕೊಡಲು ಐಸ್‌ಕ್ರೀಂ ಕಡಿಮೆಯಾಯಿತು ಎಂಬ ಒಂದೇ ಕಾರಣಕ್ಕಾಗಿ ಮದುವೆಯೇ ರದ್ದುಗೊಂಡಿರುವ ಘಟನೆ ಉತ್ತರ ಪ್ರದೇಶದ ಮಥುರದಲ್ಲಿ ನಡೆದಿದೆ. ಇಲ್ಲಿನ ಮಹೇಶ್ ನಗರದಲ್ಲಿ ಈ ಘಟನೆ ನಡೆದಿದ್ದು , ಪ್ರಕರಣದಲ್ಲಿ ಮೂವರು ಪೊಲೀಸರು ಸೇರಿದಂತೆ 10 ಮಂದಿಗೆ ಗಾಯಗಳಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ನಡೆದಿದ್ದೇನೆಂದರೆ ನಿನ್ನೆ ಮಥುರಾದ ಮಹೇಶ್‌ನಗರದಲ್ಲಿರುವ ರಾಯಸದಾಬಾಗ್‌ನಲ್ಲಿ ಮದುವೆಯೊಂದನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲವೂ ಸುಸೂತ್ರವಾಗಿ ನಡೆದು ಎರಡು ಕಡೆಯ ಬೀಗರು ಊಟ ಉಪಚಾರ ಸೇರಿದಂತೆ ಎಲ್ಲವು ಸರಾಗವಾಗಿ ನಡೆದಿದ್ದವು.

ಆದರೆ ಮಧುಮಗನ ಪರವಾಗಿ ಬಂದಿದ್ದ ಬೀಗರಿಗೆ ವಧುವಿನ ಕಡೆಯವರು ಊಟವಾದ ನಂತರ ಐಸ್‌ಕ್ರೀಂ ಕೊಡಲಿಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ಆಗಲೇ ಎಲ್ಲರಿಗೂ ಐಸ್‌ಕ್ರೀಂ ನೀಡಿದ್ದರಿಂದ , ಖಾಲಿಯಾಗಿದೆ ಎಂದು ವಧು ಕಡೆಯವರು ಸಮಾಧಾನದ ಮಾತುಗಳನ್ನಾಡಿದ್ದಾರೆ. ಇದನ್ನೊಪ್ಪದ ಮಧುಮಗನ ಕಡೆಯವರು ನೀವು ನಮಗೆ ಉದ್ದೇಶಪೂರ್ವಕವಾಗಿಯೇ ಐಸ್‌ಕ್ರೀಂ ಕೊಟ್ಟಿಲ್ಲ ಎಂದು ಆರೋಪಿಸಿದರು. ಹೀಗೆ ಎರಡು ಕಡೆಯವರೊಂದಿಗೆ ಮಾತಿಗೆ ಮಾತು ಬೆಳೆದು ದೊಡ್ಡ ರದ್ದಾಂತವೇ ನಡೆದು ಹೋಯಿತು.

ಇಷ್ಟಕ್ಕೆ ಸುಮ್ಮನಾಗದ ಎರಡು ಕಡೆಯವರು ಪರಸ್ಪರ ದೊಣ್ಣೆ ತೆಗೆದುಕೊಂಡು ಬಡದಾಡಿಕೊಂಡಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಬಂದ ಮೂವರು ಪೊಲೀಸರು ಹಾಗೂ ಏಳು ಮಂದಿಗೆ ಗಾಯಗಳಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಮದುವೆ ರದ್ದಾದ ವಧು-ವರ ನಾನೊಂದು ತೀರ, ನೀನೊಂದು ತೀರ ಎಂಬ ವಿರಹ ಗೀತೆ ಹಾಡುವಂತಾಗಿದೆ.

Write A Comment