ರಾಷ್ಟ್ರೀಯ

AIIMSಗೆ ಭೇಟಿ ನೀಡಿ ಸುಷ್ಮಾ ಸ್ವರಾಜ್ ಆರೋಗ್ಯ ವಿಚಾರಿಸಿದ ಮೋದಿ

Pinterest LinkedIn Tumblr

suನವದೆಹಲಿ, ಏ.28- ತೀವ್ರ ಅನಾರೋಗ್ಯದಿಂದ ಇಲ್ಲಿನ ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಆಸ್ಪತ್ರೆಗೆ ತೆರಳಿ ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವೆಯ ಯೋಗಕ್ಷೇಮ ವಿಚಾರಿಸಿದರು. ಪ್ರಧಾನಿ ನರೇಂದ್ರಮೋದಿ ಅವರು ಬೆಳಗ್ಗೆ 9 ಗಂಟೆಗೆ ಎಐಐಎಂಎಸ್ ಆಸ್ಪತ್ರೆಗೆ ತೆರಳಿ 9.25ರ ವರೆಗೂ ಆಸ್ಪತ್ರೆಯಲ್ಲೇ ಇದ್ದರು ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.

ಸುಷ್ಮಾ ಸ್ವರಾಜ್ ಆರೋಗ್ಯ ಸ್ಥಿರವಾಗಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಎಂದು ವೈದ್ಯರ ತಂಡದ ಮುಖ್ಯಸ್ಥರು ಹೇಳಿದ್ದಾರೆ. ಎಐಐಎಂಎಸ್‌ನ ನುರಿತ ವೈದ್ಯರ ತಂಡವೊಂದು ಸುಷ್ಮಾ ಸ್ವರಾಜ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಚಿವೆ ಸ್ವರಾಜ್ ಸೋಮವಾರ ಉಸಿರಾಟದ ತೊಂದರೆ ಹಾಗೂ ರಕ್ತಹೀನತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. 60 ವರ್ಷದ ಸುಷ್ಮಾ ಸ್ವರಾಜ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ, ರಕ್ತಹೀನತೆಗೆ ಸಂಬಂಧಿಸಿದಂತೆ ಹಲವು ಅನುಭವಿ ವೈದ್ಯರ ತಂಡವೊಂದನ್ನು ಆಸ್ಪತ್ರೆ ಆಡಳಿತ ರಚಿಸಿದೆ.

Write A Comment