ಕರ್ನಾಟಕ

ಜೂನ್ 27ರಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಾಹ

Pinterest LinkedIn Tumblr

yaduಮೈಸೂರು,ಏ 25 : ಜೂನ್ 27ರಂದು ರಂದು ನಡೆಯಲಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ಸಂಬಂಧ ಇಂದು ಬೆಳಗ್ಗೆ 9.30ರಿಂದ 10.30ರ ಶುಭಲಗ್ನದಲ್ಲಿ ಲಗ್ನ ಪತ್ರಿಕೆ ಶಾಸ್ತ್ರ ನೆರವೇರಿತು. ರಾಜಸ್ಥಾನ ಜೈಪುರದ ರಾಜಕುಮಾರಿ ತ್ರಿಷಿಕಾ ಕುಮಾರಿ ಅವರನ್ನು ಕೈಹಿಡಿಯಲಿರುವ ಯದುವೀರ ಒಡೆಯರ್ ಇಂದು ಅರಮನೆಯ ಅಂಬಾವಿಲಾಸದಲ್ಲಿ ನಡೆದ ಲಗ್ನಪತ್ರಿಕೆ ಶಾಸ್ತ್ರದಲ್ಲಿ ಯದುವೀರರು ಲವಲವಿಕೆಯಿಂದ ಕಂಡುಬಂದರು.

ಜೂ.24ರಿಂದ 27ರವರೆಗೆ ವಿವಾಹ ಮಹೋತ್ಸವ ನಡೆಸಲು ನಿಶ್ಚಯಿಸಲಾಗಿದೆ. 40 ವರ್ಷದ ಬಳಿಕ ಮೈಸೂರು ಅರಮನೆಯಲ್ಲಿ ಶುಭ ವಿವಾಹ ಕಾರ್ಯಕ್ರಮ ನಡೆಯುತ್ತಿದೆ. ರಾಜವಂಶಸ್ಥರು, ಆಪ್ತಬಳಗ ಮಾತ್ರ ಈ ಸಮಾರಂಭಕ್ಕೆ ಆಹ್ವಾನ ನೀಡಲಾಗಿತ್ತು. ಮೈಸೂರಿನ ವಿವಿಧ ದೇವಾಲಯಗಳಲ್ಲಿ ಒಡೆಯರ್ ಅವರ ಹೆಸರಿನಲ್ಲಿ ವಿಶೇಷ ಪೂಜೆಗಳು ಸಹ ನಡೆದವು.

Write A Comment