ರಾಷ್ಟ್ರೀಯ

ವಿವಿ ಶಿಸ್ತು ಉಲ್ಲಂಘನೆ: ಕನ್ಹಯಾಗೆ 10 ಸಾವಿರ ದಂಡ

Pinterest LinkedIn Tumblr

Kanhaiya-fineನವದೆಹಲಿ: ಫೆಬ್ರವರಿ 9 ರಂದು ವಿಶ್ವವಿದ್ಯಾಲಯ ಆವರಣದಲ್ಲಿ ವಿವಾದಾತ್ಮಕ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ವಿಶ್ವವಿದ್ಯಾಲಯದ ಶಿಸ್ತು ಮಿತಿಯನ್ನು ಉಲ್ಲಂಘಿಸಿದ್ದಕ್ಕಾಗಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿವಿಯು ಸೋಮವಾರ ರು. 10 ಸಾವಿರ ದಂಡವನ್ನು ವಿಧಿಸಿರುವುದಾಗಿ ತಿಳಿದುಬಂದಿದೆ.
ಫೆಬ್ರವರಿ 9 ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ಪರವಾಗಿ ಕಾರ್ಯಕ್ರಮವೊಂದುನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಪ್ರಕರಣ ಸಂಬಂಧ ವಿವಿಯ ತನಿಖಾ ಸಮತಿಯನ್ನು ರಚಿಸಿ ತನಿಖೆ ನಡೆಸಿತ್ತು.
ತನಿಖೆ ವೇಳೆ ಕನ್ಹಯ್ಯಾ ಸೇರಿ 14 ವಿದ್ಯಾರ್ಥಿಗಳು ಭಾಗಿಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ವಿವಿ ಇದೀಗ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ. ಇದರಮತಂ ಕನ್ಹಯ್ಯಾಗೆ ರು. 10 ಸಾವಿರ ದಂಡವನ್ನು ವಿಧಿಸಿದ್ದು, ಒಮರ್ ಖಾಲಿದ್ ಗೆ ಒಂದು ಸೆಮಿಸ್ಟರ್ ಅವಧಿಯವರೆಗೂ ಅಮಾನತು ಮಾಡಿದೆ.
ಕನ್ಹಯ್ಯಾ, ಒಮರ್ ಚಟುವಟಿಕೆಗಳಲ್ಲಿ ಪಾಲ್ಗೊಂಡ ಮುಜೀಬ್ ಗಟ್ಟೂ ಅವರನ್ನೂ 2 ಸೆಮಿಸ್ಟರ್ ಗಳಿಗೆ, ಅನಿರ್ಬನ್ ಭಟ್ಟಾಚಾರ್ಯ ಅವರನ್ನು ಜುಲೈ 15 ರವರೆಗೆ ಅಮಾನತುಗೊಳಿಸಿದೆ. ಇದರಂತೆ ಮುಂದಿನ 5 ವರ್ಷಗಳಲ್ಲಿ ಯಾವುದೇ ಕೋರ್ಸ್ ಮಾಡದಂತೆಯೂ ವಿವಿ ವಿದ್ಯಾರ್ಥಿಗಳ ಮೇಲೆ ನಿರ್ಬಂಧವನ್ನು ಹೇರಿದೆ ಎಂದು ಜೆಎನ್ ಯು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Write A Comment