ಕರ್ನಾಟಕ

ಸಾಲ ಬಾಧೆಗೆ ಇಡೀ ಕುಟುಂಬವೇ ಬಲಿ!

Pinterest LinkedIn Tumblr

farmer-family

ಚಾಮರಾಜನಗರ: ಬರದ ನೋವು ಮತ್ತು ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊನ್ನಳ್ಳಿಯಲ್ಲಿ ನಡೆದಿದೆ.

ಶಿವನಪ್ಪ ಎಂಬ ರೈತ ಜಮೀನಿನಲ್ಲಿ ನೇಣುಬಿಗಿದುಕೊಂಡು ಭಾನುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಪತ್ನಿ ಕನ್ಯಾ ತನ್ನ ಇಬ್ಬರು ಮಕ್ಕಳಾದ ಪ್ರೀತಿ ಹಾಗೂ ಪ್ರಿಯಾಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಿವನಪ್ಪ ಅವರಿಗೆ ಮೂರು ಎಕರೆ ಜಮೀನು ಇದ್ದು ಇದರಲ್ಲಿ ಮೆಣಸಿನಕಾಯಿ ಮತ್ತು ಟೊಮೆಟೋ ಬೆಳೆದಿದ್ದರು. ಬೋರ್‍ಬೆಲ್ ನಲ್ಲಿ ನೀರು ಬರದ ಕಾರಣ ಬೆಳೆಯೆಲ್ಲಾ ಒಣಗಿತ್ತು. ಇವರಿಗೆ ಮೂರು ಲಕ್ಷ ರೂ. ಸಾಲವಿತ್ತು. ಬರದ ನೋವು ಮತ್ತು ಸಾಲ ಬಾಧೆ ತಾಳಲಾರದೇ ಈ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎನ್ನಲಾಗಿದೆ. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment