ಕರ್ನಾಟಕ

ಡಾ. ರಾಜ್ ಕುಮಾರ್ ರ ಹುಟ್ಟುಹಬ್ಬ ಆಚರಿಸಲು ದೂರದ ಸ್ವಿಜಲ್ರ್ಯಾಂಡ್‍ನಿಂದ ಬಂದ ಅಭಿಮಾನಿಗಳು

Pinterest LinkedIn Tumblr

23

ಬೆಂಗಳೂರು: ಅಣ್ಣಾವ್ರ ನವರಸಗಳ ಕಲಾಪ್ರಾವಿಣ್ಯತೆಗೆ ಮನಸೋತವರೇ ಇಲ್ಲಾ. ಇದಕ್ಕೆ ನಿದರ್ಶನವಾಗಿ ಡಾ. ರಾಜ್ ಹುಟ್ಟುಹಬ್ಬ ಆಚರಿಸಲು ದೂರದ ಸ್ವಿಜಲ್ರ್ಯಾಂಡ್‍ನಿಂದ ಅಭಿಮಾನಿಗಳು ಆಗಮಿಸಿದ್ದಾರೆ.

ಆಲಿವರ್ ಮತ್ತು ಸೈಮನ್ ಅಣ್ಣಾವ್ರ ನಟನೆಗೆ ಮನಸೋತ ವಿದೇಶಿ ಅಭಿಮಾನಿಗಳು. ಕರ್ನಾಟಕದ ಭಾಷೆ, ಸಂಸ್ಕøತಿ ಏನೂ ಅರಿಯದ ಈ ವಿದೇಶಿ ಅಭಿಮಾನಿಗಳು ಈ ಹಿಂದೆ ಭಾರತಕ್ಕೆ ಬಂದಾಗ ಅಣ್ಣಾವ್ರ ಮಯೂರ ಸಿನಿಮಾ ನೋಡಿದಾಕ್ಷಣ ಅವರ ಅಭಿನಯಕ್ಕೆ ಮನಸೋತಿದ್ರು.

ಏಪ್ರಿಲ್ 24 ರಂದು ಡಾ. ರಾಜ್‍ಕುಮಾರ್ ಅವರ ಹುಟ್ಟುಹಬ್ಬ ಅಂತ ತಿಳಿದ ಆಲಿವರ್ ಮತ್ತು ಸೈಮನ್ ಸ್ಥಳೀಯ ಅಭಿಮಾನಿ ಹೇಮಂತ್ ಅವರ ಸಹಾಯದೊಂದಿಗೆ ಅಣ್ಣಾವ್ರ ಹುಟ್ಟುಹಬ್ಬದ ಆಚರಣೆಗಾಗಿ ಭಾರತಕ್ಕೆ ಆಗಮಿಸಿದ್ದಾರೆ.

ಇವರು ನಾಳೆ ರಾಜ್ ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸಿ ಅಭಿಮಾನಿಗಳಿಗೆ ಸಿಹಿ ಹಂಚಿ ಹುಟ್ಟುಹಬ್ಬ ಆಚರಿಸಲಿದ್ದಾರೆ.

Write A Comment