ಅಂತರಾಷ್ಟ್ರೀಯ

ಅಮೆರಿಕದ ಶೂಟೌಟ್‌; 13 ಮಂದಿ ಸಾವು

Pinterest LinkedIn Tumblr

pistool-in-kapselವಾಷಿಂಗ್ಟನ್‌(ಎಎಫ್‌ಪಿ): ಅಮೆರಿಕದಲ್ಲಿ ನಡೆದ ಪ್ರತ್ಯೇಕ ಶೂಟೌಟ್ ಘಟನೆಗಳಲ್ಲಿ ಒಟ್ಟು 13 ಜನರು ಮೃತಪಟ್ಟಿದ್ದಾರೆ.

ಒಹಿಯೊ ಗ್ರಾಮಾಂತರ ಪ್ರದೇಶದಲ್ಲಿ ನಡೆದ ಶೂಟೌಟ್‌ ಘಟನೆಯಲ್ಲಿ ಬಾಲಕ ಸೇರಿದಂತೆ ಒಂದೇ ಕುಟುಂಬದ 8 ಜನರು ಸತ್ತಿದ್ದಾರೆ.

ಒಹಿಯೊದಲ್ಲಿ ಅಕ್ಕಪಕ್ಕದ ಮೂರು ಮನೆಗಳಲ್ಲಿ ಏಳು ಮೃತದೇಹಗಳು ಪತ್ತೆಯಾಗಿವೆ. ಮತ್ತೊಂದು ಮೃತದೇಹ ಪ್ರತ್ಯೇಕ ಸ್ಥಳದಲ್ಲಿ ಸಿಕ್ಕಿದೆ. ಇವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೇ, ಅದೃಷ್ಟವಶಾತ್‌ ಅದೇ ಕುಟುಂಬದ ನಾಲ್ಕು ದಿನದ ಹಸುಗೂಸು, ಆರು ತಿಂಗಳ ಮಗು ಹಾಗೂ ಮೂರು ವರ್ಷ ಮಗುವೊಂದು ಬದುಕುಳಿದಿದೆ ಎಂದೂ ಅವರು ತಿಳಿಸಿದ್ದಾರೆ.

‘ಮೃತರೆಲ್ಲರಿಗೂ ಮಲಗಿದ್ದಲ್ಲೇ ತಲೆಗೆ ಗುಂಡಿಕ್ಕಲಾಗಿದೆ’ ಎಂದು ಒಹಿಯೊ ಅಟಾರ್ನಿ ಜನರಲ್ ಮೈಕ್ ಡೆ ವೈನ್ ತಿಳಿಸಿದ್ದಾರೆ.

ಐವರು ಸಾವು: ಮತ್ತೊಂದು ಪ್ರಕರಣದಲ್ಲಿ ಜಾರ್ಜಿಯಾದಲ್ಲಿ ನಡೆದ ಎರಡು ಪ್ರತ್ಯೇಕ ಶೂಟೌಟ್‌ ಘಟನೆಗಳಲ್ಲಿ ಐವರು ಮೃತರಾಗಿದ್ದಾರೆ ಎಂದು ಕೊಲಂಬಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈಯಕ್ತಿಕ ವಿವಾದವೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.

Write A Comment